Showing posts with label ನಗೆ ಚಟಾಕಿ (Joke). Show all posts
Showing posts with label ನಗೆ ಚಟಾಕಿ (Joke). Show all posts

Thursday, September 20, 2012

ಗಂಡಂದಿರು ಮಾರಟಕ್ಕಿದ್ದಾರೆ!

Note: This article is not my intellectual property.

ಒಂದು ದಿನ ಬೆಂಗಳೂರಿನಲ್ಲಿ ಆರು ಮಹಡಿಗಳ ಹೊಸ shopping mall ತೆರೆದುಕೊಳ್ಳುತ್ತದೆ. ಅದರ ಹೆಸರು The Great Husband Store. ಗಂಡಂದಿರನ್ನೇ ಮಾರಾಟಮಾಡುವ ಕಲ್ಪನೆ ಅದ್ವೀತೀಯವಷ್ಟೇ ಅಲ್ಲ, ಜನಪ್ರಿಯವೂ ಆಗಿ, ಪತಿ ಪ್ರಾಪ್ತಿಗಾಗಿ ನಗರದ ಅರ್ಹ ಯುವತಿಯರೆಲ್ಲ ಗಂಡಂದಿರನ್ನು ಖರೀದಿಸಲು ಮುಂದಾಗುತ್ತಾರೆ. ಆದರೆ ಆ ಮಾರಾಟ ಮಳಿಗೆಯ ಯಜಮಾನ ಕೆಲವು ನಿಯಮ-ನಿರ್ಬಂಧನೆಗಳನ್ನು ವಿಧಿಸಿದ್ದ. ಅವು ಹೀಗಿದ್ದವು:

1)ಯಾರೇ ಆಗಲಿ The Great Husband Store ಗೆ ಕೇವಲ ಒಂದು ಸಲ ಮಾತ್ರ ಭೇಟಿಕೊಡಬಹುದು.
2)ಈ ಮಳಿಗೆಯಲ್ಲಿ ಒಟ್ಟು ಆರು ಮಹಡಿಗಳಿದ್ದು ಮೇಲೆ ಹೋದಂತೆ ಸರಕಿನ ಮೌಲ್ಯವೂ ಹೆಚ್ಚುತ್ತ ಹೋಗುತ್ತದೆ. 3)ಯಾರೂ ಒಮ್ಮೆ ಪ್ರವೇಶಿಸಿದ ಮಹಡಿಯನ್ನು ಮೊತ್ತೊಮ್ಮೆ ಪ್ರವೇಶಿಸುವಂತಿಲ್ಲ.

ಒಂದು ದಿನ ಒಬ್ಬ ತರುಣ ಮಹಿಳೆ ಅಲ್ಲಿಗೆ ಭೇಟಿಕೊಡುತ್ತಾಳೆ. ತುಂಬಾ ಸಂಕೋಚ ಮತ್ತು ನಾಚಿಕೆಯಿಂದ ಸುತ್ತಲೂ ಕಣ್ಣಾಡಿಸುತ್ತ ಮೆಟ್ಟಿಲುಗಳನ್ನು ಹತ್ತಿ ಒಂದನೇ ಮಹಡಿಗೆ ಬಂದಾಗ ಅಲ್ಲಿ ಅವಳಿಗೊಂದು ಸೂಚನಾ ಫಲಕ ಕಾಣಿಸುತ್ತದೆ.

ಮಹಡಿ 1: ಈ ಪುರುಷರು ಉತ್ತಮ ಸಂಬಳ ಸಿಗುವ ಕೆಲಸಗಳನ್ನು ಹೊಂದಿದ್ದಾರೆ.

ಇವರೆಲ್ಲ ಸಾಮಾನ್ಯ ಎಂದುಕೊಳ್ಳುತ್ತ ಆ ಮಹಿಳೆ ಎರಡನೇ ಮಹಡಿಗೆ ಬರುತ್ತಾಳೆ. ಎರಡನೆಯ ಮಹಡಿಯನ್ನು ಪ್ರವೇಶಿದಾಗ ಅಲ್ಲಿನ ಸೂಚನಾ ಫಲಕ ಕಾಣಿಸುತ್ತದೆ.

ಮಹಡಿ 2: ಈ ಪುರುಷರು ಉತ್ತಮ ಸಂಬಳ ಸಿಗುವ ಕೆಲಸಗಳನ್ನು ಹೊಂದಿದ್ದಾರೆ ಮತ್ತು ಇವರಿಗೆ ಮಕ್ಕಳೆಂದರೆ ಪ್ರಾಣ.

ಮಹಿಳೆ ಮುಂದೆ ನಡೆದು ಮೂರನೇ ಮಹಡಿಗೆ ಬರುತ್ತಾಳೆ.

ಮಹಡಿ 3: ಈ ಪುರುಷರು ಉತ್ತಮ ಸಂಬಳ ಸಿಗುವ ಕಲಸಗಳನ್ನು ಹೊಂದಿದ್ದಾರೆ, ಇವರಿಗೆ ಮಕ್ಕಳೆಂದರೆ ಪ್ರಾಣ ಮತ್ತು ಇವರು ರೂಪವಂತರು.

ಮೆಚ್ಚುಗೆಯಿಂದ 'ಹೌದೆ?' ಎಂದುಕೊಳ್ಳುತ್ತಾಳೆ ಮಹಿಳೆ. ಆದರೂ ಮುಂದಿನ ಮಹಡಿಯಲ್ಲಿ ಇದಕ್ಕಿಂತಲೂ ಉತ್ತಮವಾದ ಪುರುಷರು ಇರಬಹದೆನಿಸಿ ಮುನ್ನಡೆಯುತ್ತಾಳೆ. ಅಲ್ಲಿನ ಸೂಚನಾ ಫಲಕವನ್ನು ಓದುತ್ತಾಳೆ.

ಮಹಡಿ 4: ಈ ಪುರುಷರು ಉತ್ತಮ ಸಂಬಳ ಸಿಗುವ ಕಲಸಗಳನ್ನು ಹೊಂದಿದ್ದಾರೆ, ಇವರಿಗೆ ಮಕ್ಕಳೆಂದರೆ ಪ್ರಾಣ, ಇವರು ರೂಪವಂತರು ಮತ್ತು ಮನೆಗೆಲಸದಲ್ಲಿ ಹೆಂಡತಿಯ ಸಹಾಯಮಾಡುವಂಥವರು.

ಆ ಮಹಿಳೆಗೆ ತುಂಬಾ ಖುಷಿಯಾಗುತ್ತದೆ. ಇಷ್ಟು ಸಾಕಾಗಬಹುದಲ್ಲವೆಂದುಕೊಂಡರೂ ಅವಳ ಮಸನ್ನು ಅವಳನ್ನು ಐದನೇ ಮಹಡಿಗೆ ಕರೆತರುತ್ತದೆ.

ಮಹಡಿ 5: ಈ ಪುರುಷರು ಉತ್ತಮ ಸಂಬಳ ಸಿಗುವ ಕಲಸಗಳನ್ನು ಹೊಂದಿದ್ದಾರೆ, ಇವರಿಗೆ ಮಕ್ಕಳೆಂದರೆ ಪ್ರಾಣ, ಇವರು ರೂಪವಂತರು, ಮನೆಗೆಲಸದಲ್ಲಿ ಹೆಂಡತಿಯ ಸಹಾಯಮಾಡುವಂಥವರು ಮತ್ತು ಪ್ರಣಯ ನಿಪುಣರು.

ಮುಂದಿನ ಮಹಡಿಗೆ ಹೋಗುವ ಅವಶ್ಯಕತೆಯಿಲ್ಲ, ಈ ಮಹಡಿಯಿಂದಲೇ ಗಂಡನನ್ನು ಆಯ್ಕೆಮಾಡಿಕೊಂಡರಾಯಿತು ಅಂದುಕೊಂಡಳಾದರೂ ಆ ಮಹಿಳೆ ಕೊನೆಯ ಮಹಡಿಯಲ್ಲಿ ಇದಕ್ಕೂ ಶ್ರೇಷ್ಠರಾದ ಪುರುಷರಿರಬಹುದೆಂದುಕೊಂಡು ಮುನ್ನಡದೇಬಿಡುತ್ತಾಳೆ. ಅಲ್ಲಿ ಹೀಗೆ ಬರೆದಿರುತ್ತದೆ.

ಮಹಡಿ 6: ಇಲ್ಲಿಗೆ ಭೇಟಿಕೊಟ್ಟವರಲ್ಲಿ ನೀವು 34, 56,012 ನೇಯವರು.
ಇಲ್ಲಿ ಯಾವ ಪುರುಷರೂ ಮಾರಾಟಕ್ಕಿಲ್ಲ.
ಸ್ತ್ರೀಯರ ನಿರೀಕ್ಷೆ ಮತ್ತು ಆಸೆಗಳನ್ನುಗಳನ್ನು ತೃಪ್ತಿಪಡಿಸಲು ಸಾಧ್ಯವಿಲ್ಲವೆಂಬ ಸತ್ಯವನ್ನು ಪ್ರಮಾಣಿಸಿ ತೋರಿಸುವುದೇ ಈ ಮಹಡಿಯ ಅಸ್ತಿತ್ವದ ಏಕಮಾತ್ರ ಉದ್ದೇಶ.
ನಮ್ಮ ಮಳಿಗೆಗೆ ಭೇಟಿಕೊಟ್ಟಿದ್ದಕ್ಕೆ ಧನ್ಯವಾದಗಳು
.

ಇಷ್ಟಾದ ಮೇಲೆ 'ಪುರುಷ ಪಕ್ಷಪಾತಿ' ಎಂಬ ಕಳಂಕ ಬರದಿರಲೆಂದು ಆ ಮಾರಾಟ ಮಳಿಗೆಯ ಯಜಮಾನ ಅದರ ಪಕ್ಕದಲ್ಲೇ ಇನ್ನೊಂದು ಮಳಿಗೆಯನ್ನು ತೆರೆಯುತ್ತಾನೆ. ಅದಕ್ಕೆ The Great Wife Store ಎಂದು ಹೆಸರಿಡುತ್ತಾನೆ.

ಮೊದಲನೇ ಮಹಡಿಯಲ್ಲಿ ತುಂಬು ಸ್ತನಗಳನ್ನು ಹೊಂದಿದ ಸ್ತ್ರೀಯರಿರುತ್ತಾರೆ.
ಎರಡನೇ ಮಹಡಿಯಲ್ಲಿ ತುಂಬು ಸ್ತನಗಳನ್ನು ಹೊಂದಿದ ಮತ್ತು ಪ್ರಣಯಕೇಳಿಯಲ್ಲಿ ಆಸಕ್ತಿಯಿರುವ ಸ್ತ್ರೀಯರಿರುತ್ತಾರೆ.
ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಮಹಡಿಗಳಿಗೆ ಯಾವ ಪುರುಷರೂ ಭೇಟಿಕೊಡುವುದೇ ಇಲ್ಲ.

  
ಈ ಲೇಖನ ಹೇಗಿತ್ತು?

Friday, August 3, 2012

ರೇಕೀ ತಂದ ರಿಸ್ಕು


ನನ್ನ ಸ್ನೇಹಿತ ಮಧುಚಂದ್ರ ಗೊತ್ತಲ್ಲ? ಅವನೀಗ ಪ್ರಣಯಪದ್ಮಿನಿಗಾಗಿ ಬರೆಯುತ್ತಿಲ್ಲ ಅಂತ ಮುನಿಸು ಮಾಡಿ ಅವನೊಂದಿಗೆ ಬಹಳದಿನದಿಂದ ಹೆಚ್ಚು ಮಾತಾಡಿದ್ದಿಲ್ಲ. ಮೊನ್ನೆ ಫೋನ್ ಮಾಡಿ ಒಂದು ಸ್ವಾರಸ್ಯಕರವಾದ ವಿಷಯ ಇದೆ, ಬೇಕಾದರೆ ನಿನ್ನ ಬ್ಲಾಗಿನಲ್ಲಿ ಬರೆ ಅಂದ. ಕೇಳಿ ಮಜಾ ಬಂತು ಅನ್ನಿ. ಅದಕ್ಕೇ ಬರೀತಾ ಇದ್ದೀನಿ.


ನಮ್ಮ ಮಧು ಕೆಲವು ದಿನಗಳ ಹಿಂದೆ ಹುಬ್ಬಳ್ಳಿಗೆ ಹೋಗಿ ರೇಕೀ ಚಿಕಿತ್ಸೆ ಕಲೆತುಕೊಂಡು ಬಂದಿದ್ದು ನನಗೆ ಗೊತ್ತಿತ್ತು. ಹೋದ ವಾರ ಹೆಂಡತಿ ತಲೆ ನೋವು ಅಂದಳಂತೆ. ಇವನು ರೇಕೀಯಿಂದ ನೋವು ನಿವಾರಿಸ್ತೀನಿ ಅಂದಿದ್ದಾನೆ. ಅವಳು ಸರಿ ಅಂದಿದ್ದಾಳೆ. ಇವನು ಚಿಕಿತ್ಸೆ ಕೊಟ್ಟಿದ್ದಾನೆ. ಅವಳು ಸುಸ್ತಾದವಳಂತೆ ಮಲಗಿಬಿಟ್ಟಿದ್ದಾಳೆ. ರೇಕೀಯಿಂದ ಮೈ-ಮನಸ್ಸುಗಳು ರೆಲ್ಯಾಕ್ಸ್ ಆಗೋದು ಸಹಜ. ಹಾಗಂತ ಇವನು ಸ್ವಲ್ಪ ಹೊತ್ತು ಸುಮ್ಮನಿದ್ದು ನಂತರ ಅವಳನ್ನ ಎಚ್ಚರಿಸಲು ಹೋದರೆ ಅವಳು ಏಳಲಿಲ್ಲವಂತೆ! ಕೂಗಿದ್ದಾಯಿತು, ಅಲುಗಾಡಿಸಿದ್ದಾಯ್ತು, ತಳ್ಳಿದ್ದಾಯಿತು. ಊಹೂಂ, ಅವಳಿಗೆ ಎಚ್ಚರವಾಗಿಲ್ಲ! ಸತ್ತೇ ಹೋದಳೇನೋ ಅಂತ ಇವನು ಹೆದರಿದ್ದಾನೆ. ಏನು ಮಾಡಬೇಕೋ ಗೊತ್ತಾಗಿಲ್ಲ. ಆ ಸಂದರ್ಭದಲ್ಲಿ ಇವನ ಬುದ್ಧಿಗೆ ಏನು ತಿಳೀತೋ? ನೇರವಾಗಿ ಅವಳ ಹೊಟ್ಟೆಯ ಕೆಳನಿಂದ ಸೀರೆಯೊಳಗೆ ಕೈತೂರಿಸಿ ಅವಳ ತೊಡೆಗಳ ಮಧ್ಯದ ಆ hot spot ನ್ನು ಬೆರ‍ಳುಗಳಿಂದ ತಟ್ಟಿಬಿಡೋದೆ? ಅವಳು ಹಾಂ! ಅಂತ ಎದ್ದು ಕೂತುಬಿಟ್ಟಳಂತೆ! ಸಧ್ಯ ಬದುಕಿದ್ದಾಳೆಂದು ಇವನಿಗೆ ಭಾರಿ ನೆಮ್ಮದಿಯಾದರೆ ಇವನ 'ಕೈಚಳಕ' ದಿಂದ ಅವಳಿಗೆ ಭಾರಿ mood ಬಂದು ಇವನನ್ನ ರೈಡ್ ಮಾಡಿದ್ದೇ ಮಾಡಿದ್ದಂತೆ. ಅಷ್ಟಾದಮೇಲೆ ಸುಸ್ತಾಗಿ ಮಲಗೋ ಗತಿ ಇವನದಾಯಿತಂತೆ!

Monday, July 30, 2012

ಹೊಸ ಸೀರೆ



ಮೊನ್ನೆ ನನ್ನ ಗೆಳತಿ ಮಧುರಾ ಸಿಕ್ಕಿದ್ದಳು. ಇತ್ತೀಚಿಗೆ ಮಧುರಳಿಗೆ ಮದುವೆಯಾಗಿ ಮಧುಚಂದ್ರವೂ ಆಗಿತ್ತು. ತುಂಬಾ ಖುಷಿಯಿಂದ ಕೈಕುಲುಕಿ, ಹೆಗಲು ತಟ್ಟಿ ಮಾತಾಡಿಸಿದಳು. ನನಗೂ ಅವಳೆಂದರ ಬಹಳ ಪ್ರೀತಿ. ಅವಳ ಮದುವೆಯ ದಿನ ಸೀರೆಯೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದೆ. ನಾನೇ ಸ್ವತಃ ಅಂಗಡಿಯಿಂದ ಅಂಗಡಿಗೆ ಅಲೆದಾಡಿ ಅವಳಿಗಾಗಿ ಆರಿಸಿ ತಂದ ಸೀರೆಯದು. ಹಾಗೆಂದೇ ನಾನು ಗೆಳತಿಗೆ ಕೇಳಿದೆ. (ಮಾತಾನಾಡಿದ್ದು ಉತ್ತರ ಕರ್ನಾಟಕದ ಕನ್ನಡದಲ್ಲಿಯಾದರೂ ಇಲ್ಲಿ ಸಾಮಾನ್ಯ ಕನ್ನಡದಲ್ಲಿ ಬರೆದಿದ್ದೇನೆ)

"ಏನೇ, ನಾನು ಕೊಟ್ಟ ಸೀರೆ ಉಟ್ಕೊಂಡು ನೋಡಿದ್ಯಾ? ಇಷ್ಟವಾಯ್ತಾ?"

ಅದಕ್ಕೆ ಅವಳು ಕೊಟ್ಟ ಉತ್ತರ ಎಂಥದು! ರಸ್ತೆಯ ಪಕ್ಕ ನಿಂತು ಹೊಟ್ಟೆ ಹಿಡಕೊಂಡು ನಕ್ಕಿದ್ದೇ ನಕ್ಕಿದ್ದು. ನಿಮಗೂ ನಗೆ ಬರಬಹುದು, ಕೇಳಿ.

"ಈ ಥರಾ ಹೇಳ್ತೀನಿ ಅಂತ ಬೇಜಾರು ಮಾಡ್ಕೋಬೇಡಾ, ಪದ್ಮಿನಿ. ನಿನ್ನೆವರೆಗೂ ಯಜಮಾನ್ರು ನನಗೆ ಚಡ್ಡಿ ಕೂಡ ಹಾಕ್ಕೋಳೋಕೆ ಬಿಟ್ಟಿಲ್ಲಾ. ನಿನ್ನ ಸೀರೆ ಯಾವಾಗ ಉಟ್ಕೋಳೋದು?"

ಇಂಥದೇ ಇನ್ನೊಂದಿದೆ, ಅದನ್ನು ಆಮೇಲೆ ಹೇಳ್ತೀನಿ.