Friday, June 12, 2009

ಒಂದು ಹನಿ ಪ್ರೀತಿ

ಲೇಖನ: ಅಮೋರ


ಸುರುಳಿಯಾಕಾರದಲ್ಲಿ ಮರೆಯಾಗುತ್ತಿದ್ದ ಹೊಗೆಯನ್ನು ದಿಟ್ಟಿಸುತ್ತಾ ಕುಳಿತಿದ್ದವನಿಗೆ ತನ್ನೊಳಗಿನ ಬಿಸಿ ಸಿಗರೇಟಿನ ತಾಪವೋ, ಕಾಮದ ಶಾಖವೋ ತಿಳಿಯಲಿಲ್ಲ. ತೆಳ್ಳಗಿನ ನಡುವಿನ ಗೆಳತಿ ಅವನೆದುರು ತನ್ನ ನೆರಿಗೆಗಳನ್ನು ಒಂದೊಂದಾಗಿ ಒಳಸೇರಿಸುತ್ತಿದರೆ, ಬಳಲಿದರೂ ಕಾಂತಿಯುತವಾಗಿದ್ದ ಅವಳ ಕಾಯ ಅವನಿಗೆ ಮತ್ತೆ ನಶೆ ಏರಿಸಿತು. ಸರ್ರನೆ ಅವಳನ್ನು ನಡುವಿನಿಂದ ತಬ್ಬಿ ಹಿಡಿದು, ತುಟಿಗೆ ತುಟಿಯೊತ್ತಿ "ಇನ್ನೊಮ್ಮೆ? ಪ್ಲೀಸ್..." ಎಂದುಸುರಿದ. ಮುಗುಳ್ನಗೆಯೋ, ಉತ್ಕಟತೆಯ ಪರಾಕಾಷ್ಠೆಯೋ ಸ್ಪಷ್ಟವಾಗದ ಅವಳ ಭಾವ ಸಿಗರೇಟಿನ ಘಾಟು, ಬೆವರಿನ ಆರ್ದ್ರತೆ ಮತ್ತು ರತಿಯ ಸೂಕ್ಷ್ಮ ಪರಿಮಳದೊಂದಿಗೆ ಸಮಾಗಮಿಸಿತು.

ಕೆಲ ಸಮಯದ ನಂತರ ಅಲ್ಲಿ ಕಂಡಿದ್ದು ಅರ್ಧ ಉರಿದ ಸಿಗರೇಟಿನ ತುಂಡು, ಅವರಿಬ್ಬರ ಆಡದೆ ಉಳಿದ ಮಾತುಗಳು ಮತ್ತು ಒಂದು ಹನಿ ಪ್ರೀತಿ!

6 comments:

ಪದ್ಮಿನಿ ಕಶ್ಯಪ said...

ಅಮೋರ, ಕೆಲವೇ ಮಾತುಗಳಲ್ಲಿ ಎಷ್ಟೆಲ್ಲ ಹೇಳಿಮುಗಿಸಿದ್ದೀಯ! ಈ ಸುಂದರ ಬರಹಕ್ಕಾಗಿ ಅಭಿನಂದನೆಗಳು ಮತ್ತು ಧನ್ಯವಾದಗಳು.

ಶಂಕರ ಪ್ರಸಾದ said...

ಅಮೋರ,

ಸಖತ್ sensual ಆಗಿ ಇದೆ ಕಣ್ರೀ ಈ ಸಣ್ಣ ಲೇಖನ.
ಒಟ್ಟಿಗೆ ಕೂತಿರುವ ಭಾವ, ಕೈಯ್ಯಲ್ಲಿ ಕೈ ಹಿಡಿದು ಮಾತಾಡ್ತಾ ಇರೋ Ownness, ಆಕೆ ಇದ್ರೂ ಕೂಡ ಅದನ್ನ ಕೇರ್ ಮಾಡದೆ ಸಿಗರೇಟು ಸೇದುವ ಈತನ ಒಂಥರಾ ಕೇರ್ ಲೆಸ್ attitude, ತಕ್ಷಣ ಈಕೆಯನ್ನು ಬರಸೆಳೆದು ಮುತ್ತಿಟ್ಟು ತೋರುವ
Un-Expressed and spontaneous ಪ್ರೀತಿ, ಒಂದು ಕ್ಷಣದ ಹಿಂದೆ ಸಿಗರೇಟು ಸುಡುತ್ತಿದವನ ಕೈಲಿ ಸಡನ್ನಾಗಿ ಮುತ್ತಿಕ್ಕಿಸಿಕೊಂಡ ಈಕೆಯ ಧಾವಂತ, ಗಾಬರಿ ಹಾಗು ಅವನ ತುಟಿಯ ಚುಂಬನದಲ್ಲಿ ಅನುಭವಿಸಿದ ಆ ಘಾಟು....
ಸಿಂಪ್ಲಿ ಸೂಪರ್..

ಕೊನೆಯಲ್ಲಿ ಮನಸ್ಸಲ್ಲಿ ಉಳಿದಿದ್ದು "ಒಂದು ಹನಿ ಪ್ರೀತಿ".. ಸೂಪರ್.

ಕಟ್ಟೆ ಶಂಕ್ರ
http://somari-katte.blogspot.com

Poli said...

ee barahagaLu mastaagive! love reading these writings.. keep us hot!

ಶ್ರುತಿ said...

"ಬಳಲಿದರೂ ಕಾಂತಿಯುತವಾಗಿದ್ದ ಅವಳ ಕಾಯ ಅವನಿಗೆ ಮತ್ತೆ ನಶೆ ಏರಿಸಿತು"... ಅಮೋರ, ನಿಮ್ಮ ಈ ಲೇಖನ ಸಧ್ಯ ನನಗೇ ನಶೆ ಏರಿಸುವಂತಿದೆ.

- ಶ್ರುತಿ

Amora said...

@ ಪದ್ಮಿನಿ
ಮೆಚ್ಚುಗೆಯ ನುಡಿಗೆ ತುಂಬಾ ಥ್ಯಾಂಕ್ಸ್!

@ ಶಂಕರ ಪ್ರಸಾದ
ನಿಮ್ಮ ಕಾಮೆಂಟ್ ಸೊಗಸಾಗಿದೆ! ನಾನು ಈ ಲೇಖನವನ್ನು ಬರೆದಾಗ ಎಷ್ಟು ಸಂತೋಷವಾಗಿತ್ತೋ ಅಷ್ಟೇ ಸಂತೋಷ ನಿಮ್ಮ ಕಾಮೆಂಟ್ ನೋಡಿದ ಮೇಲೂ ಆಯಿತು. ಬರಹದ ಅಂತರಂಗವನ್ನು ಗುರುತಿಸಿದ ನಿಮಗೆ ಧನ್ಯವಾದಗಳು !

@poli
ತುಂಬಾ ಸಂತೋಷ ! ಹೀಗೆ ಓದುತ್ತಿರಿ ..

@ಶ್ರುತಿ
ನಶೆ ಏರಿದರೆ ನಮಗೂ ಆನಂದ :)

rajkar said...

Dear AMORA, This article was short and sweet except for that ಸಿಗರೇಟಿನ ಘಾಟು.This made me little sick as I am allergic to SMOKING.

Post a Comment