Friday, June 5, 2009

ಕಾಮಶಾಸ್ತ್ರ (ಭಾಗ-1)

ಲೇಖನ: madhuಚಂದ್ರ
ಆಧಾರ: ವಾತ್ಸಾಯನರ ಕಾಮಸೂತ್ರ, ಕಲ್ಯಾಣಮಲ್ಲನ ಅನಂಗರಂಗ, ಅಂತರ್ಜಾಲ ಮತ್ತು ಕೆಲವು ಕಾಮಶಾಸ್ತ್ರದ ಟಿಪ್ಪಣಿಗಳು


ಕಾಮಶಾಸ್ತ್ರಕ್ಕೆ ಮುನ್ನುಡಿ ಬೇಕಿಲ್ಲ. ಕಾಮವೆನ್ನುವುದು ಕೇವಲ ಆಸಕ್ತಿಯಲ್ಲವೆಂಬುದನ್ನು ತಿಳಿದಿದ್ದ ವಾತ್ಸಾಯನರಂಥ ತಪಸ್ವಿಗಳು ನಮ್ಮ ಜೀವನದಲ್ಲಿ ಕಾಮದ ಮಹತ್ವ ಮತ್ತು ಅಗತ್ಯವನ್ನು ಅರಿತು, ಮನವನ ದೇಹ ಮತ್ತು ಲೈಂಗಿಕ ವ್ಯಕ್ತಿತ್ವಗಳನ್ನು ಅಧ್ಯಯನ ಮಾಡಿ, ಸುಖಕರ ಮತ್ತು ತೃಪ್ತಿಕರ ಕಾಮದ ಅನುಭೂತಿಗೆ ಹಲವು ಸುಲಭ ಮತ್ತು ಉಪಯುಕ್ತ ಟಿಪ್ಪಣಿಗಳನ್ನು ಸಿದ್ಧಪಡಿಸಿದ್ದಾರೆ. ನಮ್ಮಲ್ಲಿ ಹೆಚ್ಚಿನವರು ಕಾಮಶಾಸ್ತ್ರವನ್ನು ಒಂದು ಸೆಕ್ಸ್ ಕಥೆಯಂತೆ ಓದಿರುತ್ತಾರೆ, ಅಪೇಕ್ಷಿಸಿದ ರೋಮಾಂಚನ ಸಿಕ್ಕದೇ ನಿರಾಶರಾಗಿರುತ್ತಾರೆ. ಕಾಮಶಾಸ್ತ್ರ ಒಂದು ಗಂಭೀರ ಅಧ್ಯಯನ, ಪಡ್ಡೆ ಹುಡುಗರಿಗೆಂದು ಸಿದ್ಧಪಡಿಸಿದ ಕ್ರೈಂ ಸ್ಟೋರಿ ಅಲ್ಲ. ಇಂದು ಕಾಮಶಾಸ್ತ್ರದ ಜನಪ್ರಿಯತೆ ನಮ್ಮ ದೇಶಕ್ಕಿಂತಲೂ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿದೆ. ಶುದ್ಧ ಸಂಸ್ಕೃತದಲ್ಲಿ ಬರೆದಿಟ್ಟ ಕಾಮಶಾಸ್ತ್ರವನ್ನು ಆಂಗ್ಲ ವಿಮರ್ಷಕರು, ಸಾಹಿತಿಗಳು ಅಧ್ಯಯನ ಮಾಡಿ ಅದನ್ನು ಇಂಗ್ಲೀಷಿಗೂ ತರ್ಜುಮೆ ಮಾಡಿದ್ದಾರೆ. ಓದಿ ತಮ್ಮ ಜೀವನದಲ್ಲಿ ಅನುಸರಿಸಿದವರಿಗೆ ಕಾಮಶಾಸ್ತ್ರ ನಿರಾಶೆ ತರುವುದಿಲ್ಲವೆಂಬುದು ಸಿದ್ಧವಾದ ಮಾತು.

ನಾವೀಗ ಈ ಗಂಭೀರವಾದ ಅಧ್ಯಯನದ ಕೆಲವು ಆಯ್ದ ಭಾಗಗಳನ್ನು ಸ್ವಲ್ಪ ತುಂಟತನದ ಧಾಟಿಯಲ್ಲೇ ಚರ್ಚಿಸೋಣ. ಅಂದರೆ ನಮ್ಮ ತುಂಟ ಮನಸ್ಸುಗಳಿಗೆ ಕೊಂಚ ರಂಜನೆಯೂ ಸಿಗುತ್ತದೆ, ಜೊತೆಗೆ ಈಗಾಗಲೇ ನಾವು ತಿಳಿದ ಮತ್ತು ತಿಳಿಯದೇ ಇದ್ದ ವಿಷಯಗಳ ಮಾತುಕತೆಯೂ ಆಗುತ್ತದೆ.


ಸ್ತ್ರೀಯರಲ್ಲಿ ಜಾತಿಗಳು


ನೀವು ’ಪದ್ಮಿನಿ’ ಅನ್ನೋ ಹೆಸರನ್ನು ಕೇಳಿರಬೇಕಲ್ಲ? ಈ ಬ್ಲಾಗಿನ ಹೆಸರಿನಲ್ಲೇ ಆ ಪದವಿದೆ. ಅಷ್ಟೇ ಏಕೆ, ಈ ಬ್ಲಾಗಿನ ಒಡತಿಯ ಹೆಸರೂ ಪದ್ಮಿನಿಯೇ ಎಂಬುದು ನಿಮಗೀಗಾಗಲೇ ಗೊತ್ತಾಗಿರಬೇಕು. ನಮ್ಮ ಪುರಾತನ ಕಾಮಶಾಸ್ತ್ರ ಮತ್ತು ಗ್ರಂಥಗಳ ಪ್ರಕಾರ ’ಪದ್ಮಿನಿ’ ಎನ್ನುವುದು ಒಂದು ಹೆಣ್ಣಿನ ಜಾತಿ. ಓ, ಇಂಥ ಜಾತಿಗಳೂ ಇವೆಯೋ ಎಂದಿರೋ, ಹೌದು, ಆದರೆ ಇವು ನಮ್ಮ ಧರ್ಮ ಮತ್ತು ಸಾಮಾಜಿಕ ಪಂಗಡಗಳನ್ನು ಆಧರಿಸಿ ನಿರ್ಮಿತವಾದ ಜಾತಿಗಳಲ್ಲ. ಇವು ಹೆಣ್ಣು ಮತ್ತು ಗಂಡಿನ ದೇಹ ರಚನೆ ಮತ್ತು ಅವರ ಲೈಂಗಿಕ ವ್ಯಕ್ತಿತ್ವವನ್ನು ಆಧರಿಸಿ ಹುಟ್ಟಿದ ವರ್ಗಗಳು.

ನಾವು ಮನೆಯೊಂದನ್ನು ಕಟ್ಟಿಸಬೇಕಾದರೆ ಅಥವ ಕೊಂಡುಕೊಳ್ಳಬೇಕಾದರೆ ವಾಸ್ತುಶಾಸ್ತ್ರವನ್ನು ಅನುಸರಿಸುತ್ತೇವಲ್ಲ? ಯಾವ ಭಾಗ ಎಲ್ಲಿರಬೇಕು, ಯಾವ ಆಕಾರದಲ್ಲಿರಬೇಕು, ಯಾವ ಅಳತೆ ಮತ್ತು ಪ್ರಮಾಣದಲ್ಲಿರಬೇಕು ಎಂದೆಲ್ಲ ನಮಗೆ ಈ ವಾಸ್ತುಶಾಸ್ತ್ರ ಹೇಳಿಕೊಡುತ್ತದೆ. ನಮ್ಮ ದೇಹಗಳೂ ಸಹ ಒಂದು ಪ್ರಕಾರದ ವಾಸ್ತುಶಾಸ್ತ್ರಕ್ಕೆ ಒಳಪಡುತ್ತವೆ ಅನ್ನಬಹುದು. ನಮ್ಮ ಅಂಗಾಂಗಳ ರಚನೆಯನ್ನು ಆಧರಿಸಿಯೇ ತಾನೆ ನಾವು ಯಾರು ನೋಡಲು ಆಕರ್ಷಕವಾಗಿದ್ದಾರೆ, ಯಾರು ಆಗಿಲ್ಲ ಎಂದು ತೀರ್ಮಾನಿಸುವುದು? ನಮ್ಮ ಪುರಾತನ ಕಾಮಶಾಸ್ತ್ರದ ಗ್ರಂಥಗಳು ಇದನ್ನೇ ಸ್ವಲ್ಪ ಶಾಸ್ತ್ರೀಯವಾಗಿ ವಿವರಿಸಲು ಪ್ರಯತ್ನಿಸಿವೆ.

ಹಾಗಾದರೆ ಈ ಗ್ರಂಥಗಳು ಹೇಳುವುದು ಏನು, ಸ್ತ್ರೀ ಮತ್ತು ಪುರುಷರ ವರ್ಗಗಳು ಯಾವವು ಎನ್ನುವುದನ್ನು ನಾವೂ ಸ್ವಲ್ಪ ಚರ್ಚಿಸೋಣ. ಪುರುಷ ಜಾತಿಗಳನ್ನು ಚರ್ಚಿಸುವಲ್ಲಿ ನಿಮಗೆ ಹೆಚ್ಚು ಆಸಕ್ತಿಯಿರುವುದಿಲ್ಲವೆಂದು ಭಾವಿಸುತ್ತ ಸ್ತ್ರೀಯರ ಬಗ್ಗೆಯೇ ಮಾತನಾಡೋಣ. ಕಾಮಶಾಸ್ತ್ರದ ಪ್ರಕಾರ ಸ್ತ್ರೀಯರಲ್ಲಿ ನಾಲ್ಕು ಪ್ರಕಾರಗಳು:

  • ಪದ್ಮಿನಿ
  • ಚಿತ್ತಿನಿ
  • ಶಂಖಿನಿ
  • ಹಸ್ತಿನಿ


ಪದ್ಮಿನಿ ಸ್ತ್ರೀ


ಪದ್ಮಿನಿ ಜಾತಿಯ ಸ್ತ್ರೀಯನ್ನು ಕಾಮಶಾಸ್ತ್ರವು ಶ್ರೇಷ್ಠವೆಂದು ಬಣ್ಣಿಸುತ್ತದಲ್ಲದೇ ಅವಳು ತುಂಬಾ ಅಪರೂಪವೆಂದೂ ಹೇಳುತ್ತದೆ. ಕೆಲವು ಶಾಸ್ತ್ರಜ್ಞರ ಪ್ರಕಾರ ಹತ್ತು ಲಕ್ಷ ಸ್ತ್ರೀಯರಲ್ಲಿ ಒಬ್ಬಳು ಪದ್ಮಿನಿ ಜಾತಿಯ ಸ್ತ್ರೀಯು ಇರಬಹುದು. ಹಾಗಾದರೆ, ಪರಿಪೂರ್ಣಳೂ ಅಪರೂಪಳೂ ಎಂದು ಕರೆಯಿಸಿಕೊಳ್ಳುವ ಈ ಜಾತಿಯ ಹೆಣ್ಣಿನ ಲಕ್ಷಣಗಳೇನು?

ಪದ್ಮಿನಿಯ ಮುಖವು ಪೂರ್ಣ ಚಂದ್ರನಂತೆ ನೋಡಲು ಆಹ್ಲಾದಕರವಾಗಿರುತ್ತದಂತೆ. ಅವಳ ಮೈ ಬಿಳಿ ಕಮಲದ ಹೂವಿನಂತೆ ಬೆಳ್ಳಗೆ ಮತ್ತು ಮೃದುವಾಗಿರುತ್ತದಂತೆ. ಅವಳ ಚರ್ಮ ಆ ಹೂವಿನ ಪಕಳೆಗಳಂತೆ ನವಿರಾಗಿರುತ್ತದಂತೆ. ಆದರೂ ಅವಳ ಆ ಬೆಳ್ಳನೆಯ ದೇಹಸಿರಿಯ ಮೇಲೆ ನೇರಳೆ ಬಣ್ಣದ ಛಾಯೆಯೊಂದು ಅವಳ ಯೌವ್ವನದ ಬೇಗೆಯ ಸಂಕೇತವಾಗಿರುತ್ತದಂತೆ. ಪದ್ಮಿನಿಯ ಕಣ್ಣುಗಳು ಜಿಂಕೆಯ ಕಣ್ಣುಗಳಷ್ಟೇ ಸುಂದರ ಮತ್ತು ಮೋಹಕವಾಗಿರುತ್ತವಂತೆ. ಅವಳ ಕೊರಳು ಶಂಖದ ಆಕಾರವನ್ನು ಹೊಂದಿದ್ದು ತೆಳ್ಳಗೆ ಮತ್ತು ನವಿರಾಗಿರುತ್ತದಂತೆ. ಅವಳ ಮೂಗು ನೇರ ಮತ್ತು ಅವಳ ತುಟಿಗಳು ರಸ ತುಂಬಿದ ಹಣ್ಣಿನ ಹೋಳುಗಳಂತಿದ್ದರೆ ಅವಳ ಧ್ವನಿ ಸಣ್ಣಗೆ ಮತ್ತು ಕೋಗಿಲೆಯ ಕೂಗಿನಂತೆ ಇಂಪಾಗಿರುತ್ತದಂತೆ. ಅವಳ ನಡಿಗೆ ಹಂಸದ ನಡಿಗೆಯಂತೆ ಲಯಬದ್ಧವೂ ಆತೀ ಆಕರ್ಷಕವೂ ಆಗಿರುತ್ತದಂತೆ.

ಇಷ್ಟು ವಿವರಣೆಯಿಂದ ನಿಮಗೆ ತೃಪ್ತಿಯಾಗುವುದಿಲ್ಲವೆಂದು ನನಗೆ ಗೊತ್ತು. ಸರಿ ಹಾಗಾದರೆ, ಪದ್ಮಿನಿ ಸ್ತ್ರೀಯ ಇನ್ನಿತರ ವೈಶಿಷ್ಟ್ಯಗಳನ್ನೂ ವಿವರಿಸಿಬಿಡುತ್ತೇನೆ.

ಪದ್ಮಿನಿಯ ಸ್ತನಗಳು ದುಂಡಗೆ ಮತ್ತು ಕೊಂಚ ಬಿರುಸೆನ್ನುವಷ್ಟು ಸುಪೂರವಾಗಿ ತುಂಬಿಕೊಂಡಿರುತ್ತವಂತೆ. ಆ ಸ್ತನಗಳು ಹೊಟ್ಟೆಯಿಂದ ಎತ್ತರಕ್ಕೆ, ಅವಳ ಕೊರಳಿಗೆ ಹತ್ತಿರವಾಗಿ, ಅಂದರೆ ಸ್ವಲ್ಪವೂ ಜೋಲು ಬೀಳದೆ ಆಕರ್ಷಕವಾಗಿರುತ್ತವಂತೆ. ಅಷ್ಟೇ ಅಲ್ಲ, ಅವಳ ಸ್ತನಗಳ ನಡುವಿನ ಕಣಿವೆಯ ಹರವು ಅವಳ ಹೆಬ್ಬೆರಳಿನ ಅಗಲವನ್ನು ಮೀರುವುದಿಲ್ಲವಂತೆ. ಅಂದರೆ ಅವಳ ಸ್ತನಕಲಶಗಳು ರಮಿಸುತ್ತಿರುವ ಪ್ರೇಮಿಗಳ ಜೋಡಿಯೊಂದರಂತೆ ಪರಸ್ಪರ ಹತ್ತಿರವಾಗಿರುತ್ತವಂತೆ. ಪದ್ಮಿನಿಯ ಯೋನಿಯ ಆಕಾರವು ಅಶ್ವತ್ಥದ ಎಲೆಯಂತೆ ಸುಂದರವಾಗಿದ್ದು, ಅದು ಉದ್ರೇಕಾವಸ್ಥೆಯಲ್ಲಿ ಅರಳಿದ ಕಮಲದ ಮೊಗ್ಗಿನಂತಿರುತ್ತದಂತೆ. ಅವಳ ರತಿದಳವು ನೆಲನೈದಿಲೆಯ ಪರಿಮಳವನ್ನು ಸೂಸುತ್ತದಂತೆ.

ಇನ್ನು, ಪದ್ಮಿನಿ ಜಾತಿಯ ಸ್ತ್ರೀಯು ಗುಲ್ಲುಮಾತು ಅಥವ ಗೊಡ್ಡುಹರಟೆಯನ್ನು ಮಾಡುವುದು ವಿರಳವಂತೆ (ಹಾಗಾದರೆ, ನಮ್ಮ ಈ ಪ್ರಣಯಪದ್ಮಿನಿಯ ಪದ್ಮಿನಿ ಖಂಡಿತವಾಗಿಯೂ ಪದ್ಮಿನಿ ಜಾತಿಯ ಹೆಣ್ಣು ಅಲ್ಲ ಬಿಡಿ). ಪದ್ಮಿನಿ ಸ್ತ್ರೀಯು ಚತುರ, ಯುಕ್ತಿಶೀಲ ಮತ್ತು ಜಾಣಳಾಗಿರುತ್ತಾಳಂತೆ. ಅವಳು ಹೆಚ್ಚು ಆಹಾರವನ್ನು ಸೇವಿಸುವುದಿಲ್ಲ ಮತ್ತು ಹೆಚ್ಚು ನಿದ್ರೆಯನ್ನು ಮಾಡಿ ಕಾಲಹರಣವನ್ನು ಮಾಡುವುದಿಲ್ಲವಂತೆ. ದೇವರಲ್ಲಿ ಭಯ-ಭಕ್ತಿ ಇರುವವಳೂ, ಸೌಜನ್ಯಶೀಲಳೂ ಆಗಿದ್ದು, ಬಿಳಿ ಬಣ್ಣದ ಉಡುಪುಗಳು ಮತ್ತು ಶ್ರೀಮಂತಿಕೆಯನ್ನು ಸಂಕೇತಿಸುವ ಒಡವೆಗಳನ್ನು ಅವಳು ತುಂಬಾ ಮೆಚ್ಚುತ್ತಾಳಂತೆ.

ಇದು ಪದ್ಮಿನಿ ಜಾತಿಗೆ ಸೇರಿದ ಸ್ತ್ರೀಯ ಲಕ್ಷಣಗಳ ವಿವರಣೆಯಾಯಿತು. ಮುಂದಿನ ಭಾಗದಲ್ಲಿ ಚಿತ್ತಿನಿ, ಶಂಖಿನಿ ಮತ್ತು ಹಸ್ತಿನಿಯರ ಬಗ್ಗೆ ಓದೋಣ.

16 comments:

Anonymous said...

chennagide munduvarsi - ravi

Suresh said...

very nice keep it up

madhuಚಂದ್ರ said...

ರವಿ ಮತ್ತು ಸುರೇಶ್, ಧನ್ಯವಾದಗಳು. ಓದುತ್ತಿರಿ.

rajkar said...

ಮಧುಚಂದ್ರರವರೆ ನಿವು ಈ ಕಾಮಶಾಸ್ತ್ರ ಲೇಖನವನ್ನು ಶುರುಮಾಡಿ ನಮಗೆ ತುಂಬಾ ಉಪಕಾರ ಮಾಡಿದ್ದೀರ. ನೀವು ಇದನ್ನು ವಾತ್ಸಾಯನವರ ವಿರಚಿತ ಕಾಮಶಾಸ್ತ್ರದಿಂದ ಬರೆಯುತ್ತಿದ್ದೀರ?

madhuಚಂದ್ರ said...

ರಾಜ್, ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ನಾನು ಈ ಲೇಖನವನ್ನು ಹಲವು ಪುಸ್ತಕಗಳನ್ನು ಮತ್ತು ಹಲವು ವೆಬ್‌ಸೈಟ್‌ಗಳನ್ನು ಆಧರಿಸಿ ಬರೆಯುತ್ತಿದ್ದೇನೆ. ಮೂಲ ಆಧಾರ ವಾತ್ಸಾಯನರು ಬರೆದ ಕಾಮಸೂತ್ರ. ಇಂಗ್ಲೀಷ್‌ನಲ್ಲಿರುವ ಅಧ್ಯಾಯಗಳನ್ನು ಓದಲು ಸುಲಭವೆನಿಸುವಹಾಗೆ ಸರಳ ಸರಳ ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ.

rajkar said...

ತುಂಬಾ ಒಳ್ಳೆಯದು. ಮತ್ತೆ ನಿಮ್ಮ ಬಳಿ ವಾತ್ಸಾಯನರು ಬರೆದ ಕಾಮಸೂತ್ರ ಪುಸ್ತಕ ಇರಬೇಕು ಅಲ್ಲವೇ. ಇದ್ದರೇ ಅದು ಇಂಗ್ಲೀಶ್ ಭಾಷೆಯಲ್ಲಿರಬೇಕು, ಯಾಕೆಂದರೆ ನನಗೆ ತಿಳಿದಿರುವ ಹಾಗೆ ಇದು ಹೆಚ್ಚಾಗಿ ಪ್ರಕಟಣೆಗೊಳ್ಳುವುದು ಆ ಭಾಷೆಯಲ್ಲೇ. ಮತ್ತೆ ನಮ್ಮ ಕನ್ನಡದಲ್ಲಿ ನಾನು ಎಲ್ಲೂ ನೋಡಿಲ್ಲಾ, ನೀವೆಲ್ಲಾದರು ನೋಡಿದ್ದೀರ???

madhuಚಂದ್ರ said...

ರಾಜ್, ನೀವು ಹೇಳುವುದು ನಿಜ. ಕನ್ನಡದಲ್ಲಿ ನಿಜವಾದ ವಾತ್ಸಾಯನ ಕಾಮಸೂತ್ರ ಸಿಗುವುದು ಅಪರೂಪ. ನನ್ನ ಬಳಿಯಿರುವುದು ಇಂಗ್ಲೀಷ್ ಆವೃತ್ತಿ. ನೀವು ಬೆಂಗಳೂರಿನಲ್ಲಿದ್ದರೆ ಒಮ್ಮೆ ಸಪ್ನಾ ಬುಕ್ ಸ್ಟಾಲ್‌ಗೆ ಹೋಗಿ ನೋಡಿ. ನನಗೇನೋ ಅಲ್ಲೊಂದು ಕಾಮಸೂತ್ರ ಪುಸ್ತಕವನ್ನು ನೋಡಿದ ನೆನಪು.

Anonymous said...

Padminiyavarae,
Nanagae nimma bio- size,bio-matter - bagge kuthuhala. Dayamadi haelli,nimma juthae mail nalli samparka maduva assae.Kanasugallanna nanasu made.
Nimmannu bayasuva premi.

ಪದ್ಮಿನಿ ಕಶ್ಯಪ said...

ನನ್ನನ್ನು ಬಯಸುವ ಪ್ರೇಮಿ, ನನ್ನ ಬಗ್ಗೆ ಇಷ್ಟೆಲ್ಲ ವಿವರಣೆ ಬಯಸುವ ನೀವು ಮಾತ್ರ ನಿಮ್ಮ ಹೆಸರನ್ನು ಕೂಡ ಹೇಳಲು ಇಚ್ಛಿಸುವುದಿಲ್ಲ. ಇದೆಂಥ ವಿಚಿತ್ರ? ಏನೇ ಇರಲಿ, ನಾನೊಬ್ಬ ಲೇಖಕಿ, ಕಾಲ್‌ಗರ್ಲ್ ಅಲ್ಲ. ನೀವು ಕೇಳಿದ ವಿವರಣೆಯನ್ನು ನಾನು ಕೊಡಲಾರೆ.

ನಿಮ್ಮ ಕಾಮೆಂಟುಗಳು ಪ್ರಣಯಪದ್ಮಿನಿಯ ಲೇಖನಗಳ ಕುರಿತಾಗಿರಲಿ.

mahesh kumar mysore said...

dear friend it is nice being a lady you have started this wonderful sex blog. continue this so that many many people are benefitted by this site. please post more stories related to incest

ಪದ್ಮಿನಿ ಕಶ್ಯಪ said...

ಮಹೇಶ್, ತುಂಬಾ ಥ್ಯಾಂಕ್ಸ್. Incest ಎಂಬುದು ತುಂಬಾ ಚರ್ಚಾಸ್ಪದ ವಿಷಯ. ತುಂಬಾ ಜನರಿಗೆ ಅದು ಜಿಗುಪ್ಸೆ ತರುತ್ತದೆ, ಅಸಹ್ಯವೆನಿಸುತ್ತದೆ. ಅಂಥದನ್ನು ಬರೆದರೆ ಎಲ್ಲ ಓದುಗರು ಇಷ್ಟಪಡಲಾರರು. "ತರಗೆಲಯ ಪಯಣ"ದಲ್ಲಿ ಅಕ್ಕ-ತಂಗಿಯರ ನಡುವಿನ ಪ್ರಣಯವನ್ನು ಕಥೆಯ ಕೊನೆಗೆ ಚಿತ್ರಿಸಿದ್ದೆ. ಅದು ತುಂಬಾ ಜನರಿಗೆ ಇಷ್ಟವಾಗಲಿಲ್ಲ. ಲೇಖನಗಳು ಜಿಗುಪ್ಸೆ ತರುವಂತಿರಬಾರದು. ಅಲ್ಲವೆ?

rajkar said...

SAPNA anda mela nanage gnaapaka bantu, naanu alli omme "DAMPATIGALIGAAGI ROOCAKA KATHEGALU" anta ondu BOOK noodide, aadare adannu alle PURCHASE maadalu aagallilla, nanna AMMA nanna joteyalliddaru. Nimma bali E book mattu intaha books ideye?

Anonymous said...

Dear Padmini,
Nivu ondu Hennagi, nimma kathaegallali Hennina Kamada virasa vannu thilipadasi, innu chennagi nimma kathaegalyu shobisuthavae.Hennina antharalavannu vishlesha made, ondu hosa swarupavannu kodi. Thanks...

ಪದ್ಮಿನಿ ಕಶ್ಯಪ said...

ರಾಜ್‌ಕರ್, ನನ್ನ ಬಳಿ ಪುಸ್ತಕಗಳು ಯಾವೂ ಇಲ್ಲ. ಇದ್ದ ಕೆಲವು ಪುಸ್ತಕಗಳು ಯಾವಾಗಲೋ ಕಳೆದುಹೋದವು.

Anonymous, ನಿಮ್ಮ ಸಲಹೆಗಾಗಿ ಧನ್ಯವಾದಗಳು.

Anonymous said...

nice

Anonymous said...

acually i asked you one question. recent que ans ellirtave

Post a Comment