Sunday, February 21, 2010

ಲೈಂಗಿಕತೆ: ಒಂದು ಚರ್ಚೆ

ಓದುಗ ಮಿತ್ರರೆ,

ನನ್ನ ಬ್ಲಾಗು ಕೇವಲ ಲೈಂಗಿಕ ಪ್ರಚೋದನೆಯ ಸಾಹಿತ್ಯ ಮತ್ತು ಚಿತ್ರಗಳನ್ನು ಪ್ರಕಟಿಸುವ ಒಂದು ಬ್ಲಾಗು ಆಗಬಾರದು ಎಂದು ನನಗೆ ಇತ್ತೀಚಿಗೆ ಅನಿಸುತ್ತಿದೆ. ಇಂದು ನಮ್ಮ ಮನೆಗಳಲ್ಲಿ, ನಮ್ಮ ಶಾಲಾ ಕಾಲೇಜುಗಳಲ್ಲಿ, ನಮ್ಮ ಸಮಾಜದಲ್ಲಿ ತಲೆದೋರುವ ಎಷ್ಟೋ ತೊಡಕು ಸಮಸ್ಯೆಗಳು ಲೈಂಗಿಕತೆಯ ಕುರಿತಾಗಿವೆ. ಗಂಡ-ಹೆಂಡತಿಯರ ನಡುವಿನ ಮಾನಸಿಕ ಕಲಹ, ವಿವಾಹ ವಿಚ್ಛೇದನಗಳು, ವಯಸ್ಸಿಗೆ ಬಂದ ಮತ್ತು ಬರದ ಹುಡುಗ-ಹುಡುಗಿಯರಲ್ಲಿನ ಕಾಮದ ಕುರಿತಾದ ಕುತೂಹಲ, ನಮ್ಮ ಮನರಂಜನೆಯ ಮಾಧ್ಯಮಗಳು ಬಿತ್ತರಿಸುವ ಪ್ರೇಮ-ಕಾಮಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಕಾರ್ಯಕ್ರಮಗಳು, ವೈಯಕ್ತಿಕ ಸ್ವಾತಂತ್ರ್ಯವನ್ನು ಬಯಸುವ, ಮೋಬೈಲ್ ಹಿಡಿದು ತಿರುಗಾಡುವ ನಮ್ಮ ಇಂದಿನ ಮಕ್ಕಳು... ಇದನ್ನೆಲ್ಲ ನೋಡಿ 'ಕಾಲ ಕೆಟ್ಟುಹೋಗಿದೆ' ಎಂದು ಕೈಚೆಲ್ಲಿ ಕುಳಿತಿರುವ ನಮ್ಮ ಹಿರಿಯರು ಒಂದೆಡೆಯಾದರೆ ಕಾನೂನನ್ನು ಕೈಗೆ ತೆಗೆದುಕೊಂಡಾದರೂ ಯುವಜನತೆಯನ್ನು ಸರಿ ದಾರಿಗೆ ತಂದೇ ತರುತ್ತೇವೆ ಎಂದು ಹೋರಾಡುತ್ತಿರುವ ನಮ್ಮ ಹಿಂದೂ ಸಂಘಟನೆಗಳು ಇನ್ನೊಂದೆಡೆ.

ನನಗೆ 'ಇದು ಸರಿ, ಇದು ತಪ್ಪು' ಎಂದು ಹೇಳುವುದರಲ್ಲಿ ಆಸಕ್ತಿಯಾಗಲೀ ನಂಬಿಕೆಯಾಗಲೀ ಇಲ್ಲ. ನನಗೆ ಸರಿಯೆನಿಸಿದ್ದು ನಿಮಗೆ ತಪ್ಪೆನಿಸಬಹುದು. ನಿಮಗೆ ಸರಿಯೆನಿಸಿದ್ದು ನನಗೆ ತಪ್ಪೆನಿಸಬಹುದು. ದುರ್ಯೋಧನನಿಗೆ ತಾನು ಮಾಡುತ್ತಿರುವುದು ಸರಿಯೆನಿಸಿರಲೇ ಬೇಕು; ಅದು ತಪ್ಪೆನಿಸಿದ್ದರೆ ಅದನ್ನು ಅವನು ಮಾಡುತ್ತಿರಲೇ ಇಲ್ಲ. ಸೀತೆಯನ್ನು ಅಪಹರಿಸಿ ರಾಮನನ್ನು ಯುದ್ಧಕ್ಕೆ ಕರೆದ ರಾವಣನಾದರೂ ಅಷ್ಟೇ, ಹರನೆನ್ನಲು ಒಲ್ಲದ ಪ್ರಹ್ಲಾದನ್ನು ಕೊಂದು ಹಾಕಲು ಪ್ರಯತ್ನಿಸಿದ ಹಿರಣ್ಯಕಶ್ಯಪುವಾದರೂ ಅಷ್ಟೇ, ಜರ್ಮನಿಯ ಹಿತಕ್ಕಾಗಿ ಲಕ್ಷಾಂತರ ಯಹೂದಿಗಳನ್ನು ಗುಂಡಿಕ್ಕಿ ಕೊಂದ ಹಿಟ್ಲರ್‌ನಾದರೂ ಅಷ್ಟೇ, ಇಂದಿನ ಧರ್ಮಾಂಧ ಭಯೋತ್ಪಾದಕರಾದರೂ ಅಷ್ಟೇ... ಅವರಿಗೆಲ್ಲ ತಾವು ಮಾಡುತ್ತಿರುವುದು ಸರಿಯೆನಿಸರಲೇ ಬೇಕು. ಹಾಗಿದ್ದಾಗ ಸರಿ-ತಪ್ಪುಗಳ ವಿವೇಚನೆ ಒಂದು ವೈಯಕ್ತಿಕ ಲಹರಿಯೇ ಸರಿ; ಸಾಮಾಜಿಕ ಸ್ತರದಲ್ಲಿ ಅದಕ್ಕೆ ಹೆಚ್ಚು ಮಹತ್ವವಿರುವುದಿಲ್ಲ.

ಸರಿ-ತಪ್ಪುಗಳ ಕಟ್ಟಳೆಗಳಿಂದ ಹೊರಬಂದು ಲೈಂಗತೆಯ ಕುರಿತು ನಾವು ಮುಕ್ತವಾಗಿ ಚರ್ಚಿಸಬೇಕಾದ ಕಾಲ ಸನ್ನಿಹಿತವಾಗಿದೆ. ಇದಕ್ಕೆ ಹೆಣ್ಣು-ಗಂಡು ಇಬ್ಬರೂ ಕೈಜೋಡಿಸಬೇಕು. ಇಂಥ ಚರ್ಚೆಗೆ ಅಂತರ್ಜಾಲ ಒಂದು ಉತ್ತಮ ವೇದಿಕೆಯಾಗಬಲ್ಲದು. ಇಲ್ಲಿ ನಾವು ನೀವು ಅಜ್ಞಾತರಾಗಿದ್ದುಕೊಂಡೇ ಮಾತನಾಡಬೇಕಾದುದು, ಕಲಿತು ಕಲಿಸಬೇಕಾದುದು, ಚರ್ಚಿಸಿ ಬಗೆಹರಿಸಬೇಕಾದುದು ಸಾಕಷ್ಟಿದೆ. ಕಾಮವೆನ್ನುವುದೂ ಹಸಿವು ನೀರಡಿಕೆಗಳಿದ್ದಂತೆ. ನಮ್ಮ ಹಸಿವು ನೀರಡಿಕೆಗಳ ಬಗ್ಗೆ ಮುಕ್ತವಾಗಿ ಮಾತನಾಡುವ ನಾವು ನಮ್ಮ ಕಾಮದ ಬಗೆ ಮುಕ್ತವಾಗಿ ಮಾತನಾಡಲು ಮಾತ್ರ ಹಿಂಜರಿಯುತ್ತೇವೆ. ರಾತ್ರಿ ಪತಿಯೊಂದಿಗಿನ ಸಂಭೋಗದ ನಿರೀಕ್ಷೆಯಲ್ಲಿದ್ದ ಹೆಂಡತಿ ನಿರಾಸೆಗೊಂಡರೂ ಅದನ್ನು ನೇರವಾಗಿ ವ್ಯಕ್ತಪಡಿಸುವುದಿಲ್ಲ. ಹೆಂಡತಿಯ ಕಾಮ ನಿರಾಸಕ್ತತೆಯಿಂದ ಬೇಸತ್ತ ಗಂಡಸು ಇನ್ನೊಂದು ಹೆಣ್ಣನ್ನು ಅರಸಿಹೋಗುತ್ತಾನೆ. ಇದೆಲ್ಲ ಆಗುವುದು ಮಾತನಾಡದೇ ಇರುವುದರಿಂದ, ಹೇಳಬೇಕಾದುದನ್ನು ಹೇಳದೇ ಇರುವುದರಿಂದ. ನಮ್ಮ ಈ ಚರ್ಚೆ ಗಂಡ-ಹೆಂಡತಿಯರಿಗೆ ಮಾತ್ರವೇ ಮೀಸಲಾಗಿಲ್ಲ. ಲೈಂಗಿಕತೆಯ ಎಲ್ಲ ಆಯಾಮಗಳನ್ನೂ ಈ ಚರ್ಚೆ ಒಳಗೊಳ್ಳಲಿ.

ಹಾಗಾದರೆ ನೀವು ಮಾಡಬೇಕಾದುದು ನಾನು ಲೈಂಗತೆಯ ಕುರಿತು ಆಯ್ದ ವಿಷಯಗಳ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸುವುದು. ಇದು ಸರಿ-ತಪ್ಪುಗಳ ಚೌಕಟ್ಟಿನಿಂದ ಹೊರಗೆ ನಡೆಯಲಿರುವ ಒಂದು ಚರ್ಚೆಯಾಗಿದ್ದರಿಂದ ನಿಮ್ಮ ಸ್ವಂತ ವಿಚಾರಗಳು ವ್ಯಕ್ತವಾಗಲಿ. ನೀವು ಇಂಥ ಚರ್ಚೆಯಲ್ಲಿ ಭಾಗವಹಿಸಲು ಸಿದ್ಧರಿದ್ದರೆ ಕಾಮೆಂಟುಗಳನ್ನು ಬರೆದು ತಿಳಿಸಿ. ಆನಂತರ ನಾನು ಚರ್ಚೆಯ ಮೊದಲ ವಿಷಯವನ್ನು ಪ್ರಕಟಿಸುತ್ತೇನೆ.

~ಪದ್ಮಿನಿ

11 comments:

Anonymous said...

good idea padmini. continue it.

-krishna.

ವೀ.... said...

ಲೈಂಗಿಕತೆ: ಒಂದು ಚರ್ಚೆ
ವಾವ್.. ಈ ಶಿರೋನಾಮೆಯೇ ತುಂಬಾ ಚೆನ್ನಾಗಿದೆ. ಪ್ರಚೋದನಾಕಾರಿ ಲೇಖನಗಳಿಗಿಂತ ಲೈಂಗತೆಯ ಕುರಿತು ಮುಕ್ತವಾಗಿ ಚರ್ಚಿಸುವ ಉದ್ದೇಶ ತುಂಬಾ ಚೆನ್ನಾಗಿದೆ.. ಆದರೆ ಕಮೆಂಟಿಸಲೂ ಇಚ್ಚೆ ಇರದ ಓದುಗರಿಂದ ನೀ ಎಂತಹ ಅಭಿಪ್ರಾಯ ಅನಿಸಿಕೆಗಳನ್ನು ನಿರೀಕ್ಷಿಸಲು ಸಾಧ್ಯ?? ಅದರಲ್ಲೂ ಪುರುಷ-ಮಹಿಳೆಯರಿಬ್ಬರೂ ಈ ಚರ್ಚಯಲ್ಲಿ ಪಾಲ್ಗೊಂಡರೆ ಅದಕ್ಕೆ ಸರಿಯಾದ ಅರ್ಥ ಸಿಗಲು ಸಾಧ್ಯ ಅನ್ನಿಸುತ್ತದೆ

ಇನ್ನೂ ಒಂದು ವಿಶ್ಯ ಈ ಚರ್ಚಯಲ್ಲಿ ಹಲವರು ಪಾಲ್ಗೊಳ್ಳಬಹುದು ಆದರೆ ಎಲ್ಲರಿಗೂ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸುವಷ್ಟು ತಿಳಿದಿಲ್ಲದಿದ್ದರೆ.. ಪ್ರತಿ ವಿಷಯಕ್ಕೆ ಒಂದು ಅಥವಾ ಎರಡು ಪ್ರತಿಕ್ರಿಯೆ-ಅನಿಸಿಕೆಗಳು ಬರಬಹುದು. ಇಲ್ಲವಾದರೆ ನೀ ಈ ವಿಷಯದ ಬಗ್ಗೆ ಬರೀಬೇಕು.. ಹಾ.. ನೋಡೋಣ ಎಷ್ಟು ಜನ ಕಮೆಂಟಿಸುತ್ತಾರೆ. ಯಾವ ವಿಷಯದ ಬಗ್ಗೆ ಚರ್ಚೆ ಶುರುವಾಗುತ್ತದೆ.

Prashant C said...

ಐಡಿಯಾ ಚೆನ್ನಾಗಿದೆ... ವೀ ಹೇಳಿದಹಾಗೆ ನಿಮ್ಮ್ ಉದ್ದೇಶ್ ತುಂಬಾ ಚೆನ್ನಾಗಿದೆ :)

kaamaathma said...

ಹೆಲೋ ಪ್ರಣಯ ಪದ್ಮಿನೀ..
ಲೈಂಗಿಕ ವಿಷಯಗಳ ಕುರಿತಾಗಿ ಚರ್ಚಿಸುವ ಆಲೋಚನೆಯೇನೋ ಸುಂದರ ಹಾಗೂ ಸಮಂಜಸವಾದುದೇ ಆಗಿದೆ.. ಆದರೆ ಚರ್ಚೆಯ ವೇದಿಕೆ ಯಾವುದು?

ಶ್ರೀ said...

ಪದ್ಮಿನಿ,
ನೀವು ವ್ಯಕ್ಥಪಡಿಸಿರುವ ಆಲೋಚನೆ ತುಂಬಾ ಸಮಂಜಸ ಮತ್ತು ಅವಶ್ಯಕ.
ಲೈಗಿಕಾತೆಯ ಬಗ್ಗೆ ತಿಳುವಳಿಕೆ ಇಲ್ಲದೇ ತಪ್ಪು ಮಾಡಿ ಸಮಸ್ಯೆಗಳಲ್ಲಿ ಸಿಲುಕದೆ ಇರಲು ಇದು ದಾರಿದೀಪವಾಗಬೇಕು.

ಶ್ರೀ

Omkar Patil said...

ಹಾಯ್ ಮೇಡಂ,ನಾನು ಕಣ್ಣು ಇದ್ದು ಕುರುಡನ ತರಹ ಆಗಿದ್ದೆ ನನ್ನ ನೆಟ್ ಜಗತ್ತಿನಲ್ಲಿ . ತುಂಭ ಧನ್ಯವಾದಗಳು ನ್ಾನು ಮನಪೂರ್ವಕವಾಗಿ ಪ್ರಯತ್ನ ಮಾಡುತ್ತೇನೆ ನಿಮ್ಮ ಓದುಗರ ಬಗ್ಗೆ ಇರುವ ಕಾಳಜಿ ಕಂಡು ತುಂಭ ಹೆಮ್ಮೆ ಎನುಸುತ್ತಿದೆ . ಏಕೆಂದರೆ ನಾನು ಪದ್ಮಿನಿಯವರ ಪುಟ್ಟ ಪ್ರಪಂಚದ ಒಂದು ಸದಸ್ಯಾನಾಗಿರುದಕ್ಕೆ.

omkar patil

S.P said...

so padmini you want to bring change. the change in the way people see and think about sexuality. I always believe that the change is good thing if it is from darkness towards light, from ignorance towards knowledge. each and every person has to walk through this road always learning new things in the journey of life. if you can even bring a small change, the change as small as the change in a single person's thoughts then that will be because of the greatness of your work. consider it as a great success padmini. because i know that it is not easy to bring change in the randomly thinking ununiform minds. all though we are human beings we are different individuals with different brains. the brains which each one of us has trained differently. i don't want to elaborate on this thing. so please keep the good work going.

by the way i was amazed when i came to know your thoughts about 'right' and 'wrong' because we both share the same thoughts. happy to hear that you r writing again. Best of luck.

Gani said...

Truely Sex should be discussed on forums,but that should not be misleading or vulgar.I didn't had sex with my cousin(i will not call her sister as she is aged same as mine) even though i was secretly loving her from childhood.I was curious about having sex(just kissing,licking each other in nude and not 'sexual intercourse' or 'Sambhoga')atleast once in my teenage.But i was unaware of sexual terms and info.I never see her as sex piece,i love her and safe-sex was just a small desire i had expected from her.But one day she tied rakhi by her and my parent's forceful threat.I was not able to tell her that i love her and could not see her as my sister.That secret was revealed to her recently,by mistake.She didn't talked to me a week.Then i confessed to her.Now i am truely loving another girl,and my cousin was the first to guess that i am in love.We came to mutual understanding that we will be best friends hereafter.But my mind always troubles me to have sex with my cousin.It's irritating.

Unknown said...

is premarital sex good or bad.if answers consists examples taken by our shastra or puranas then it is little bit good

Anonymous said...

Hi

bichchu said...

ಲೈಂಗಿಕ ವಿಚಾರಗಳ ಕುರಿತಂತೆ ಮುಕ್ತ ಚರ್ಚೆ ಆಗಬೇಕು. ಮನಸ್ಸಿನ ಅವ್ಯಕ್ತ ತತ್ವಗಳನ್ನು ಅದುಮಿಟ್ಟುಕೊಂಡಷ್ಟು ಮಾನಸಿಕ ಆರೋಗ್ಯ ದುರ್ಬಲಗೊಳ್ಳುತ್ತದೆ. ಮಡಿವಂತಿಕೆಯ ಜೊತೆಗೆ ಒಣಪ್ರತಿಷ್ಟೆಯನ್ನು ಬದಿಗಿಟ್ಟು ವಿಚಾರ ಮಾಡುವ ಅದರಲ್ಲೂ ಲೈಂಗಿಕ ವಿಚಾರದಲ್ಲಿ...ಬಹಳ ಮುಖ್ಯವಾಗಿದೆ..ಅತ್ಯುತ್ತಮ ಬ್ಲಾಗ್ ಮುಂದುವರೆಸಿ..ಒಳ್ಳೇದಾಗ್ಲಿ

Post a Comment