Saturday, February 27, 2010

ಕನ್ಯತ್ವದ ಪೊರೆ ಕಳಚಿಹೋದರೆ?

ಲೇಖನ: ಪದ್ಮಿನಿ

ನಮ್ಮ ಲೈಂಗಿಕತೆಯ ಕುರಿತಾದ ಚರ್ಚೆಯನ್ನು 'ಕನ್ಯತ್ವ' ದಿಂದಲೇ ಪ್ರಾರಂಭಿಸೋಣ.

'ಕನ್ಯತ್ವ' ಎಂಬುದು ಕೇವಲ ಹೆಣ್ಣಿಗೆ ಸಂಬಂಧಿಸಿದ್ದೆಂದು ತಿಳಿದವರೇ ಬಹಳ ಜನ. 'ಕನ್ಯತ್ವ' ಎಂಬ ಪದಕ್ಕೆ ಪರಿಶುದ್ಧ, ನಿಷ್ಕಳಂಕ, ನಿರ್ದುಷ್ಟ, ಉಪಯೋಗಿಸದ, ಅಕ್ಷತ, ಕೈಸೋಕದ... ಇತ್ಯಾದಿ ಅರ್ಥಗಳಿವೆ. ಇಂಗ್ಲಿಷ್ ಭಾಷೆಯಲ್ಲಿ virginity ಎಂದು ಕರೆಯಲ್ಪಡುವ ಇದನ್ನು ಲೈಂಗಿಕ ಸಂಪರ್ಕದ ಅನುಭವವಿಲ್ಲದವರ ಬಗ್ಗೆ ಹೇಳಲು ಬಳಸಲಾಗುತ್ತದೆ. ಅಂದರೆ ಇದು ಹೆಣ್ಣಿಗೂ ಗಂಡಿಗೂ ಸಮನಾಗಿಯೇ ಅನ್ವಯಿಸುತ್ತದೆ ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ನಿಜವಾದ ಅರ್ಥದಲ್ಲಿ ಹೆಣ್ಣಿನ ಯೋನಿಪೊರೆ ಕಳಚುವುದೇ 'ಕನ್ಯತ್ವದ ಪೊರೆ' ಕಳಚುವುದಲ್ಲ. ಒಬ್ಬ ವ್ಯಕ್ತಿ ಲೈಂಗಿಕ ಸಂಪರ್ಕವನ್ನು ಹೊಂದಿದರೆ ಆ ವ್ಯಕ್ತಿಯ 'ಕನ್ಯತ್ವ' ಕಳಚಿತೆಂದರ್ಥ.

'ಕನ್ಯಾಪೊರೆ' ಅಥವ ಇಂಗ್ಲಿಷ್ ಭಾಷೆಯಲ್ಲಿ hymen ಎಂದು ಕರೆಯಲ್ಪಡುವ ಹೆಣ್ಣಿನ ಯೋನಿದ್ವಾರದಲ್ಲಿರುವ ಆ ತೆಳ್ಳಗಿನ ಪೊರೆ ಕಳಚಲು ಸಂಭೋಗವನ್ನು ಹೊರತು ಪಡಿಸಿ ಇನ್ನೂ ಹಲವಾರು ಕಾರಣಗಳಿವೆ. ಇಂದಿನ ಹುಡುಗಿಯರು ಲಂಗ ತೊಟ್ಟು ಸುಮ್ಮನೆ ಶಾಲೆಗೆ ಹೋಗಿ ಮನೆಗೆ ಬರುವವರಲ್ಲ. ಅವರಿಗೆ ಪಾಠದೊಂದಿಗೆ ಆಟ-ಓಟಗಳಲ್ಲಿಯೂ ಭಾಗವಹಿಸುವ ಹುಮ್ಮಸ್ಸು. ಸೈಕ್ಲಿಂಗ್, ಈಜು, ರೇಸು ಇತ್ಯಾದಿಗಳಲ್ಲಿ ಭಾಗವಹಿಸುವ ಹುಡುಗಿಯರ ಕನ್ಯಾಪೊರೆ ಹರಿದುಹೋಗಿರುವ ಸಾಧ್ಯತೆಗಳು ಬಲವಾಗಿರುತ್ತವೆ. ಇನ್ನು ಕೆಲವು ಹುಡುಗಿಯರು ಹರೆಯದಲ್ಲಿ ಕಾಲಿಡುತ್ತಿದ್ದಂತೆಯೇ ಸ್ವಾಭಾವಿಕವಾಗಿ ಹಸ್ತಮೈಥುನದ ಅಭ್ಯಾಸಕ್ಕೆ ಒಳಗಾಗಿರುತ್ತಾರೆ. ಕನ್ಯಾಪೊರೆ ಕಳಚಿಹೋಗಿರಲು ಇದೂ ಒಂದು ಪ್ರಬಲ ಕಾರಣ. ಇದನ್ನೆಲ್ಲ ಕನ್ಯತ್ವದ ನಾಶವೆನ್ನಬಹುದೆ? ಹೀಗಾಗಿ ಯೋನಿಪೊರೆ ಕಳಚುವುದನ್ನೇ ಕನ್ಯತ್ವದ ಪೊರೆ ಕಳಚುವುದೆನ್ನುವುದು ಅಸಮಂಜಸ. ಅದಲ್ಲದೇ ಎಷ್ಟೋ ಹುಡುಗಿಯರ ಯೋನಿಪೊರೆ ಮೊದಲ ಸಂಭೋಗದಲ್ಲಿ ಕಳಚಿಕೊಳ್ಳುವುದೇ ಇಲ್ಲ. ಹಾಗೆಂದು ಸಂಭೋಗದ ಅನುಭವವನ್ನು ಪಡೆದ ಅವರನ್ನು 'ಕನ್ಯೆ' ಯರೆಂದು ಕರೆಯಬಹುದೆ? ಇಲ್ಲ, ಹೆಣ್ಣೇ ಇರಲಿ, ಗಂಡೇ ಇರಲಿ, ಒಮ್ಮೆ ಸಂಭೋಗದ ಅನುಭವಾದೊಡನೆ ಆ ವ್ಯಕಿಯ ಕನ್ಯತ್ವ ಕಳಚಿತೆಂದೇ ಅರ್ಥ. ಇದಕ್ಕೆ ಯಾವ ಪೊರೆಯೂ ಅಳತೆಗೋಲು ಆಗಬೇಕಿಲ್ಲ.

ಹಾಗಾದರೆ ಒಬ್ಬ ವ್ಯಕ್ತಿಯ ಕನ್ಯತ್ವ ಉಳಿದಿದೆಯೋ ಇಲ್ಲವೋ ಎಂಬುದನ್ನು ಹೇಗೆ ಕಂಡುಹಿಡಿಯುವುದು? ಇದು ಸುಲಭವಲ್ಲ. ಏಕೆಂದರೆ ಕನ್ಯತ್ವವನ್ನು ದೃಢಪಡಿಸುವ ಖಚಿತ ಲಕ್ಷಣಗಳ್ಯಾವವೂ ಇಲ್ಲ. ನೇರ ಮಾತೇ ಇದಕ್ಕೆ ಉತ್ತಮ ಸಾಧನ. ನಮ್ಮ ಸಂಗಾತಿಯ ಕನ್ಯತ್ವದ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಅವರನ್ನು ನೇರವಾಗಿ ಕೇಳಿಬಿಡುವುದೇ ಒಳ್ಳೆಯದು. ಇದಕ್ಕೂ ಮೊದಲು 'ಕನ್ಯತ್ವ' ವೆನ್ನುವುದು ನಮಗೆ ಎಷ್ಟು ಮುಖ್ಯ ಎಂಬುದನ್ನು ಯೋಚಿಸೋಣ. ಕನ್ಯತ್ವವೆನ್ನುವುದು ಎಲ್ಲರಿಗೂ ಅನ್ವಯಿಸುತ್ತದಾದ್ದರಿಂದ ನಾವು ನಮ್ಮ ಕನ್ಯತ್ವವನ್ನು ಉಳಿಸಿಕೊಂಡಿದ್ದೀವಿಯೇ ಎನ್ನುವುದೂ ಒಂದು ಅಂಶ. ನಾವು ಸಂಭೋಗದ ಅನುಭವವನ್ನು ಹೊಂದಿದ್ದು ನಮ್ಮ ಸಂಗಾತಿ ಮಾತ್ರ ಅಂಥ ಅನುಭವವನ್ನು ಹೊಂದಿರಕೂಡದು ಎಂದು ಬಯಸುವುದು ಬೂಟಾಟಿಕೆಯಾಗಿಬಿಡುತ್ತದೆ.

ಹಾಗಾದರೆ ಕನ್ಯತ್ವದ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?

10 comments:

Anonymous said...

ಕನ್ಯತ್ವದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ತುಂಭಾ ಧನ್ಯವಾದಗಳು ಮೇಡಂ. ಆದರೆ ನಿಮ್ಮ ಮಾತು ಒಪ್ಪುವಂಥದ್ದು ಅಲ್ಲ ಅಂತ ಅನ್ನಿಸುತ್ತದೆ ಯಾಕೆಂದಮೇಲೆ ಬಟ್ಟೆ ಬಿದ್ದರು , ಬಟ್ಟೆ ಮೇಲೆ ಮುಳ್ಳು ಬಿದ್ದರು. ಜಗ್ಗಿದಾಗ ಹರಿಯುವದು ಬಟ್ಟೆ ತಾನೇ. ತಾವು ಸ್ವಲ್ಪ ವಿಚರ್ ಮಾಡಿ ನೋಡಿ ನಿಮ್ಮ ಮಾತನ್ನೇ ಓದಿ ಅನುಕರಿಸರುವರು ಇರುತ್ತಾರೆ ಅನ್ನುವದು ನೆನಪಿರಲಿ. ಒಂದು ವೇಳೆ ನೀವು ಹೇಳಿದ ಹಾಗೆ ಲೈಂಗಿಕ ಅನುಭವ ಪಡೆದ ಹೆಣ್ಣು ಮಡ್ವೆ ಆಡ್ ಮೇಲೆ ತುಂಭ ಜಗುರುಕತೆ ಇಂದ ಇರಬೇಕಾಗುತ್ತೆ ಇಲ್ಲದಿದ್ದರೆ ಅವಳು ಜೀವನ ಪೂರ್ತಿ ಕಣ್ಣಿರಲ್ಲೇ ಕೈ ತೊಳೆಯಬೇಕಾಗುತ್ತೆ ಎಚ್ಚರ್. ಇನ್ನೊಂದು ಮಾತು ಹೇಳೋದಕ್ಕೆ ಇಷ್ಟ ಪಡುತ್ತೇನೆ ಭಾರತ ದೇಶದಲ್ಲಿ ಇನ್ನೂ ಗಂಡು ಪ್ರಧಾನ ಕುಟುಂಬ ವ್ಯವಸ್ಥೆ ಇದೆ ಎನ್ನುವದು ನೆನಪಿರಲಿ. ಹೆಣ್ಣು ಎಷ್ಟೇ ಮುಂದುವರೆದಿದ್ದರು ಈ ಒಂದು ವಿಷಯದಲ್ಲಿ ಗಂಡು ನೀವು ಹೇಳಿದ ಹಾಗೆ ಸಂಧರ್ಬಗಳು ಬಂದರೆ ಒಪ್ಪಿಕೊಳ್ಳೂದು ಇಲ್ಲ.
omkar patil

Anonymous said...

I agree that only when a person had the sex experience, his/her virginity is lost. Its is about seeing the scene in broad sense. - Eccentric

Anonymous said...

ತುಂಬಾ ಉಪಯುಕ್ತವಾದ ಮಾಹಿತಿ.
ಧನ್ಯವಾದಗಳು

ವೀ.... said...

ಮಾಹಿತಿಗೆ ಧನ್ಯ ಪದ್ಮಿನಿ...
ಆದ್ರೆ ಈ ವಿಷಯದ ಬಗ್ಗೆ ಚರ್ಚೆ ಮಾಡೋಕೆ ನನಗೇನು ತಿಳಿದಿಲ್ಲ..

S.P said...

ಪದ್ಮಿನಿಯವರೆ ಕನ್ಯತ್ವದ ಬಗ್ಗೆ ನೀವು ನಮ್ಮ ಅಭಿಪ್ರ‍ಾಯವನ್ನು ಕೇಳುವುದಾದರೆ, ನೀವು ತಿಳಿಸಿರುವ ಒಂದೊಂದು ವಿಷಯವು ನೂರಕ್ಕೆ ನೂರರಷ್ಟು ಸತ್ಯ. ಅದರಲ್ಲಿ ನಮಗೆ ಯಾವ ಅನುಮಾನವು ಇಲ್ಲ.

ಓಂಕಾರ್ ಸರ್ ನಿಮಗೊಂದು ವಿಚಾರ ತಿಳಿಸುವುದಕ್ಕೆ ಇಷ್ಟ ಪಡುತ್ತೇನೆ. ನೋಡಿ ಸರ್ ಜನರ ನೋಡುವ ದೃಷ್ಠಿ ಬದಲಾದರು ಇರುವ ಸತ್ಯ ಬದಲಾಗುವುದಿಲ್ಲ. ಸತ್ಯ ಎಲ್ಲಾ ಸಂಧರ್ಬದಲ್ಲು ಸತ್ಯವೆ ತಾನೆ. ಇರುವ ಸತ್ಯವನ್ನು ಹಾಗೆ ಒಪ್ಪಿಕೊಳ್ಳುವುದು ಸಮಂಜಸವೆಂಬುದು ನನ್ನ ಬಾವನೆ. ಸತ್ಯವನ್ನು ಸತ್ಯವೆಂದು ನಿರೂಪಿಸಲು ತರ್ಕದ ಅವಶ್ಯಕತೆ ಇರುವುದಿಲ್ಲ. ಸತ್ಯಕ್ಕೆ ಅದೇ ಸಾಕ್ಷಿ, ಅದೇ ಪ್ರಮಾಣ. ತರ್ಕದಿಂದ ಅಸತ್ಯವನ್ನು ಸತ್ಯವೆಂದು ನಿರೂಪಿಸಬಹುದಾಗಿದೆ. ಇಲ್ಲಿ ಅದರ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಅದರ ಅನಾವಶ್ಯಕ ಚರ್ಚೆ ಬೇಡ. ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿ ಎಂಬ ಗಾದೆ ನಿಮಗು ತಿಳಿದಿದೆ ಅಂದೂಕೊಳ್ಳುತ್ತೇನೆ.

ಓಂಕಾರ ಸರ್ ನಿಮಗೊಂದು ಸಲಹೆ ನೀಡಲು ಬಯಸುವೆ. ಹೆಣ್ಣನ್ನು ದೈಹಿಕವಾಗಿ ಸಾಧ್ಯವಾಗದಿದ್ದರೆ ಮಾನಸಿಕವಾಗಿಯಾದರು ಗಂಡಿಗೆ ಸಮಾನಳೆಂದು ಭಾವಿಸಿ ನೋಡಿ, ಆಗ ನಿಮ್ಮ ವಾದಗಳಲ್ಲಿ ಹುರುಳಿಲ್ಲವೆಂಬುದು ನಿಮಗೆ ತಿಳಿಯುತ್ತದೆ. ಅಲ್ಲಿ ಮುಳ್ಳು, ಸೀರೆಯೆಂಬ ಬೇದ ಬರುವುದಿಲ್ಲ. ಅಲ್ಲಿ ಬರೀ ಎರೆಡು ಜೀವಗಳನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಯೋಚಿಸಿ. ಒಂದಕ್ಕೆ ನಿಜವಾದದ್ದು ಮತೊಂದು ಜೀವಕ್ಕು ನಿಜ. ಒಂದಕ್ಕೆ ಸುಳ್ಳಾದದ್ದು ಮತೊಂದಕ್ಕು ಸುಳ್ಳು ಎಂದು ಯೋಚಿಸಿ ಹೇಳಿ, ’ಕನ್ಯತ್ವ’ ಎಂಬುದು ಇಬ್ಬರಿಗು ಅನ್ವಹಿಸುವಂತದ್ದು ತಾನೆ.

ನೋವು, ಹಸಿವು, ಶಬ್ದ, ಬೆಳಕು, ರುಚಿ, ವಾಸನೆ, ಸ್ಪರ್ಷ, ಬಾವನೆಗಳೆಲ್ಲವು ಹೆಣ್ಣು, ಗಂಡು ಇಬ್ಬರಲ್ಲು ಒಂದೇ ರೀತಿಯ ಅನುಬವವನ್ನು ಸೃಷ್ಠಿಸುವಾಗ ’ಕನ್ಯತ್ವ’ವನ್ನ ಮಾತ್ರ ಒಬ್ಬರಿಗೆ ಮೀಸಲಿಡುವುದು, ಹೇರುವುದು ಎಷ್ಠರ ಮಟ್ಟಿಗೆ ಸರಿಯೆಂದು ನೀವೆ ನಿರ್ಧರಿಸಿ. ಆತ್ಮಸಾಕ್ಷಿ ಕೂಡ ಇಬ್ಬರಿಗು ಒಂದೆ ತಾನೆ. ಈ ವಿಷಯದಲ್ಲಿ ಗಂಡು ಹೆಣ್ಣಿಗೆ ಸುಲಬವಾಗಿ ಮೋಸ ಮಾಡಬಲ್ಲ, ಆದರೆ ಅದು ತನಗೆ ತಾನೆ ಹೇಳಿಕೊಲ್ಲುವ ಸುಳ್ಳಾಗುವುದಿಲ್ಲವೆ. ನಮ್ಮಂತೆಯೆ ಅವರು ಎಂಬ ಭಾವನೆಯನ್ನು ಬೆಳೆಸಿಕೊಳ್ಳುವದರಿಂದ ಪ್ರೀತಿ, ಗೌರವ, ಆಧರದ ಭಾವನೆಗಳು ಇಬ್ಬರಲ್ಲು ಮೂಡಲು ಕಾರಣವಾಗುತ್ತದೆ.

ಓಂಕಾರ್ ಸರ್ ನೀವೇನಂತೀರಿ?

Anonymous said...

hello s.p avare nimma maatu oppuvanthadde illa annolla. adare, igina paristhithi hagilve, nammibbara abhiprayadameleye jagattu avalambide annuva taraha navibbaru matadta iddeveno antha annisuttide neevenanthira? aadre naanu helodu enu andare ivattina dina nodi balatkar, atychara ,kolegalu sedu iveekkalla kanyatvane karana antha ansutte. neevu helida haage gandasu kanyatwa kaledukondiddane antha yaru gandasige hodeyuvadagali,bittiu hoguvadagali,kole maduvadagali,yaru madilla.adre ade hennina vishakke bandare ivelladara madheye odaduttirutteve houdalve. innondu maatu yavude vidyavantha huduganagiddaru kuda sociallagi intha matanadaballa adare ade avana patni,sahodariyara vishakke bandare eshtu passive agi vichara maduttane idu naanu nimagenu helabekagilla. onde maatinalli helabekadare vichar,vimarshe, samanathe,antha vishagalu bandare maatra neevu heliddau maahu opputte.adre vaastavikavagi andare nija jeevanadalli nimma mathu oppuvanthaddu alla. nimagae innondu exampal kodtini sumne nimma bagge anthu nanage enu gottilaa adaru keltini ondu vele neevu maduve madilolluva hudugi kanyatwa kaledukondiddale andare neevu nimma adarshvanne mundittukkondu maduve madikolluttiro? adu hogali bidi,adu aadaru maduvige munchina maataytu.naniga nimma adarshakke sawal haktha iddini ondu vele nimma maduve ada mele ondu varushada nanthara nimma patni anaithika sambandha hondiddare neevenu madtira? beda nimagu kuda anaithika sambhanda ide antha itkolli,andare nanna kanytvanu hogide avala kanytva hodare nanage enu antha sumne kulithukollakke agutte s.p avare nanaenadaru nimma vayaktika jeevanada mathu adiddare kshame irali. nanage enu reply bekagilla adaru discussion bere nija jeevana bere antha tillisudakke naanu reply madide.
ninna geleya omkar patil.

karthikeya said...

"ಕನ್ಯತ್ವ" ಎನ್ನುವದು ಒ೦ದು ಮನೊದೈಹಿಕ ವಿಚಾರ.ಏಕೆ೦ದರೆ ಕನ್ಯಾಪೊರೆಯ ಮೆಲೆ ಕನ್ಯತ್ವವನ್ನ ನಿರ್ದರಿಸಲು ಸದ್ಯವಿಲ್ಲ. ಆದರೆ ಸಮಜದಲ್ಲಿ ಈರೀತಿಯ ರೂಡ್ಹಿ ಬೆಲ್ಹೆದುಕೊನ್ದು ಬ೦ದಿದೆ.ಕನ್ಯತ್ವ ಗ೦ಡು,ಹೆನ್ನು ಇಬ್ಬರಿಗು ಸ೦ಬ೦ದಿಸಿದ್ದು.

O manashe said...

Good sbj

Anonymous said...

Padminiyavare nimma lekhanagalu innashtu moodibarali. nimma baravanigeya shyli nange bhahalane ishta agutte. navu uttara karnatakadavare. adke nivu uttara karnatakada shyliyalle kelavu kathegalanna baredare namage tumba santoshavaguttade.

Anonymous said...

Pussy Licker here from Bangalore for all 18 - 60 years old females, also full fill all yours fantasies. contact me now Pradeep : +91 8792577758, e-mail : pradeepind25@gmail.com

Post a Comment