Monday, June 8, 2009

ಈ ರಾತ್ರಿ...

ಲೇಖನ: ಅಮೋರ


ಬೆಚ್ಚನೆಯ ನಡುರಾತ್ರಿಯಲ್ಲಿ ಚೆಲುವೆಯೊಬ್ಬಳು ಬರೆಯಬೇಕೆಂದುಕೊಂಡ , ಬರೆಯಲು ಹೋಗಿ ಸೋತ ಪತ್ರದ ತುಣುಕು !


ರಾತ್ರಿಗಳೆಂದರೆ ನನಗೆ ಹೇಳಲಾರದ ಸಂಭ್ರಮ. ಇರುವುದು ಒಬ್ಬಳೇ ಆದರೂ, ಗೆಳೆಯ, ನಿನ್ನ ನೆನಪುಗಳು ನಿನ್ನಷ್ಟೇ ಉತ್ಸಾಹವನ್ನುಂಟು ಮಾಡುತ್ತವೆ. ಕಳೆದ ಸಲ ಹೊರಡುವಾಗ ನಿನ್ನ ಕಣ್ಣುಗಳಲ್ಲಿದ್ದ ಉನ್ಮಾದ ಇನ್ನೂ ಹಾಗೆ ಇದೆಯೇ? ಆ ಉನ್ಮಾದದಿಂದಾಗಿಯೇ ಅಲ್ಲವೇ ನಮ್ಮಿಬರ ನೆನಪುಗಳು ಈ ಪರಿ ಹುಚ್ಚು ಹಿಡಿಸಿರುವುದು... ಈ ರಾತ್ರಿಗಳಲ್ಲಿ, ನಿನ್ನ ನೆನಪುಗಳೊಂದಿಗೆ ಆಟವಾಡುತ್ತ, ಒಂಟಿಯಾಗಿದ್ದರೂ ಜೊತೆಯಾಗಿರುವಂತೆ ಇರುವುದಿದೆಯಲ್ಲ... ಇದಕ್ಕಿಂತ ಹೆಚ್ಚಿನ ಸುಖ ಸಿಗುವುದಿದ್ದರೂ ನನಗೆ ಬೇಕಿಲ್ಲ!

ಈ ಇರುಳು ಹರಿದು ನಾಳಿನ ಬೆಳಕು ಸುರಿದರೆ ಬಾಗಿಲಲ್ಲಿ ನೀನಿರುತ್ತೀಯೇ. ಸೂರ್ಯನಿಗೋ, ಮುಂಜಾನೆಯ ಮಂಜಿಗೋ ಹೋಲಿಸಿ ಅವುಗಳು ನಿನ್ನೊಂದಿಗೆ ಕೊಡುವ ಹಿತವನ್ನು ನಾನು ಕಳೆದುಕೊಳ್ಳುವುದಿಲ್ಲ. ಕಿಟಕಿಯಿಂದ ಒಳನುಸುಳುವ ಆ ಸೂರ್ಯನ ನವಿರು ಶಾಖದೊಂದಿಗೆ, ಸಣ್ಣಗೆ ಬೀಸುವ ಮಂಜು ಮಿಶ್ರಿತ ಗಾಳಿ ಸುಖ ಸೋಪಾನಕ್ಕೆ ಹೇಳಿ ಮಾಡಿಸಿದಂಥ ಸಂಗಾತಿಗಳು. ರಾತ್ರಿಗಳು ಹಿತವೇ ಆದರೂ, ನಿನ್ನ ಬರುವಿಕೆಗಾಗಿ ಕಾಯುವುದು ಸಂಪೂರ್ಣವಾಗಿ ಸಂತೋಷವೇನಲ್ಲ. ಒಂದೊಂದು ಕ್ಷಣವೂ ಒಂದೊಂದು ಯುಗದಂತೆನಿಸಿ, ಕಾಯುವುದು ಸಾಕುಬೇಕೆನಿಸುತ್ತದೆ.

ಬರಲಿರುವ ಸೂರ್ಯನಿಗೆ ಭೂಮಿ ಕಾದಿರುವಂತೆ, ಗೆಳೆಯ, ನಿನಗಾಗಿ ನನ್ನ ರೋಮ ರೋಮವೂ ಕಾದಿದೆ. ದಿಗ್ಗನೆ ನಿನ್ನ ನಗು ಕೇಳಿದಂತಾಗುತ್ತದೆ. ಏನೋ ಅನ್ಯಮನಸ್ಕತೆ. ನಿನ್ನ ಸ್ಪರ್ಶದ ನೆನಪಾಗಿ ಮೊಲೆಗಳು ಉಬ್ಬಿ ಬರುತ್ತವೆ. ಈ ಕ್ಷಣವೇ ಉಸಿರು ನಿಂತುಹೋಗುವಷ್ಟು ಗಟ್ಟಿಯಾಗಿ ಚುಂಬಿಸಿಬಿಡಬೇಕೆಂಬ ಉದ್ವೇಗ. ನನ್ನನ್ನು ನಾನೇ ಮೃದುವಾಗಿ ಸವರಿಕೊಂಡಾಗ ನನ್ನ ತುಟಿಗಳು, ನನ್ನ ಕತ್ತು, ಕೈ ಕಾಲುಗಳೆಲ್ಲವೂ ನಿನ್ನ ಕುರಿತ ಕಾತರವನ್ನು ತಮಗೆ ತೋಚಿದಂತೆ ಸ್ಫುರಿಸಿದಂತೆ ಕಾಣುತ್ತವೆ, ನಿನ್ನ ಸ್ನೇಹ, ಸಲಿಗೆ, ಆತ್ಮೀಯತೆಯ ಮೂರ್ತ ರೂಪವೆಂಬಂತೆ ಕಳೆದ ಸಲ ನಡೆದ ನಮ್ಮ ಮಿಲನ ಸಂಭ್ರಮದ ಒಂದೊಂದು ಕ್ಷಣವು ಕಣ್ಣ ಮುಂದೆ ಬಂದಂತಾಗುತ್ತಿದೆ. ಅದೆಷ್ಟು ಸುಲಲಿತವಾಗಿ ನೀನು ನನ್ನಲ್ಲಿ ಬೆರೆತಿದ್ದಿ. ಬೆಣ್ಣೆಯ ಮೇಲೆ ಅಕ್ಷರ ಬರೆದಂತೆ, ಸೂಕ್ಷ್ಮವಾಗಿ ಅಷ್ಟೇ ಶಕ್ತಿಯುತವಾಗಿ ನಿನ್ನ ಜೀವ ರಸ ನನ್ನ ಕಮಲದಳದೊಳಗೆ ಸುರಿದು ಒಂದಾದಾಗ, ನನ್ನ ದೇಹದಲ್ಲಿನ ಪ್ರತಿ ರಕ್ತಕಣವು ಪುಳಕಗೊಂಡಂತೆ, ನಿಂತಲ್ಲೇ ನಿಮಿರಿದಂತೆ, ಯಾತನೆಯೋ, ಆನಂದವೋ ತಿಳಿಯಲಾರದೆ ಬಳಲಿ ಒದ್ದಾಡಿದ ಅನುಭವ ಈಗಲೂ ನನ್ನ ಹೃದಯವನ್ನು ಮೀಟುತ್ತಿದೆ. ಕಾಯುವಿಕೆಯು ಅತಿಯಾದರೆ ಪ್ರೇಮ ಕಾಮದೊಂದಿಗೆ ಬೆರೆತು ಹದವಾದ ಪರಿಮಳವನ್ನುಂಟು ಮಾಡುತ್ತದೆ. ನಿನ್ನ ಕಂಗಳ ಕಾಂತಿ, ನಿನ್ನ ಉಸಿರಿನ ಸುವಾಸನೆ, ಸುವಾಸನೆಯ ಕಾವು, ಕಾವಿನ ತೀವ್ರತೆ... ಇವೆಲ್ಲವೂ ನನ್ನ ಉಸಿರಿನೊಡನೆ ಬೆರೆತು ತಾನೇ ತಾನಾಗುವ ಕಾಲವಿನ್ನೇನು ದೂರವಿಲ್ಲ!

ಆದರೆ, ಗೆಳೆಯ, ತುಂಬಾ ಕಾಡಿದ್ದೀಯೇ. ನಾಳೆ ನಿನ್ನ ತುದಿಬೆರಳಿನ ಸ್ಪರ್ಶವೇ ನನಗೆ ಸ್ವರ್ಗಸುಖವನ್ನೀಯುವಂತೆ ಕಾಣುತ್ತಿದೆ. ಇನ್ನು ಈ ಪತ್ರವನ್ನೇನಾದರೂ ಮುಂದುವರೆಸಿ, ನೀನು ಬರುವುದರಲ್ಲಿ ಮತ್ತೆ ಓದಿದರೆ, ನನಗೆ ಹುಚ್ಚೇ ಹಿಡಿಯಬಹುದು! ಬಾಗಿಲನ್ನು ತೆರೆದೇ ಇರಿಸಿದ್ದೇನೆ ಗೆಳೆಯ. ಬೇಗ ಬರುವೆಯಲ್ಲವೇ?

8 comments:

ಪದ್ಮಿನಿ ಕಶ್ಯಪ said...

ಅಮೋರ, ಶೃಂಗಾರ ರಸದಲ್ಲಿ ನೆನೆದ ನಿನ್ನ ಮೊದಲ ಅಂಕಣ ತುಂಬಾ ರಸವತ್ತಾಗಿದೆ. ಪ್ರಣಯ ಬರಹಗಳನ್ನು ಇದುವರೆಗೂ ಬರೆದಿರದ ನೀನು ಈ ಮೊದಲ ಪ್ರಯತ್ನದಲ್ಲೇ ನಿನ್ನ ಛಾಪು ಮೂಡಿಸಿದ್ದೀಯೆ. ನಿನ್ನ ಮುಂದಿನ ಬರಹಗಳಿಗಾಗಿ ಕಾಯುತ್ತಿರುತ್ತೇನೆ.

Anonymous said...

very nice sexy letter - ravi

Anonymous said...

ಇದುವರೆಗು ನಿಮ್ಮ ಹೆಸರು ಮಾತ್ರ ನೋಡಿದ್ವಿ ಇವ್ರು ಏನು ಯಾಕೆ ಬರೀತಿಲ್ಲ ಅನಿಸಿತ್ತು ಈ ಪತ್ರ ಇನ್ಟ್ರೆಸ್ಟಿಂಗ್ ಇದೆ ಚೆನ್ನಗೆ ಬರೆದಿದೀರಿ. ಶ್ರುಂಗಾರ ಇನ್ನೂ ಸ್ವಲ್ಪ ಹೆಚ್ಚು ಇದ್ದರೆ ಚೆನ್ನಾಗಿರುತ್ತೆ ಅನಿಸುತ್ತೆ. ಅಮೋರ ಅಂದರೆ ಏನು ಅದು ನಿಮ್ಮ ನಿಜವಾದ ಹೆಸರೆ?

parimaga said...

very nice. post more please

Amora said...

@ ಪದ್ಮಿನಿ ,
ನಿನ್ನ ಪ್ರೋತ್ಸಾಹದ ನುಡಿಗೆ ತುಂಬಾ ಧನ್ಯವಾದಗಳು. ಹೆಚ್ಚು ಹೆಚ್ಚು ಬರೆಯಲು ಪ್ರಯತ್ನಿಸುತ್ತೇನೆ :) ಉತ್ಸಾಹ, ಪ್ರೋತ್ಸಾಹ ಹೀಗೆ ಇರುತ್ತದೆಯಲ್ಲವೇ ?

@ ರವಿ, ಪರಿಮಗ
:) ಧನ್ಯವಾದಗಳು! ಹೀಗೆ ಓದುತ್ತಿರಿ ..

@ anon
ಅಮೋರ ಎಂದರೆ ಪ್ರಣಯಭರಿತ ಪ್ರೀತಿ ಎಂದರ್ಥ . ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಹೆಚ್ಚಿನ ಶೃಂಗಾರ ನಿಮ್ಮ ಮನಸಿನಲ್ಲಿ ಮೂಡಿದರೆ ಸಂತೋಷ. ಆ ಭಾವನೆಗೆ ಪ್ರೇರಣೆ ಕೊಡುವುದು ಈ ಪತ್ರದ ಉದ್ದೇಶವಾಗಿತ್ತು! :)

rajkar said...

Hello AMORA, Your First article was beautiful, nimage kaadiddu yaaru nimma BOY FRIEND/HUSBAND?
And about the last sentence, A THIEF might come in for sure if you always keep the door open!!! If your lover comes he will surly ring the door bell!!! So please close the door for safety purpose!!!???

kamakeli said...

channagide mam.....................

kamakeli said...

super mam

Post a Comment