Monday, May 11, 2009

ಅಭಿಸಾರಿಕೆ (ಭಾಗ-1)

ಲೇಖನ: ಪದ್ಮಿನಿ


ಅಶ್ವಪುರ ವಸುಂಧರೆಯ ಹುಟ್ಟೂರು. ಆದರೆ ಅವಳು ಹುಟ್ಟಿನಿಂದಲೂ ಬೆಳೆದದ್ದು, ಇಪ್ಪತ್ತು ವರುಷಗಳನ್ನು ಕಳೆದದ್ದು ತನ್ನ ಸೋದರ ಮಾವನ ಆಶ್ರಯದಲ್ಲಿ. ತಂದೆಯ ಆಸರೆಯಾಗಲೀ, ತಾಯಿಯ ಮಮತೆಯಾಗಲೀ ಅವಳಿಗೆ ಲಭಿಸಿರಲೇ ಇಲ್ಲ. ಅವಳು ಹುಟ್ಟುವುದಕ್ಕೆ ಎಷ್ಟೋ ದಿನಗಳ ಮುಂಚೆಯೇ ತಂದೆ ತೀರಿ ಹೋಗಿದ್ದ. ತಾಯಿ ಆಸ್ಥಾನದಲ್ಲಿ ಒಬ್ಬ ನರ್ತಕಿ. ಕಾಲು ವರ್ಷಕ್ಕೊಮ್ಮೆ ಅಶ್ವಪುರಕ್ಕೆ ತನ್ನ ಮಗಳನ್ನು ನೋಡಿಕೊಂಡು ಹೋಗಲು ಬರುತ್ತಿದ್ದ ಅವಳು ಹಾಗೆ ಬಂದಾಗ ಬೆಳ್ಳಿಯ ನಾಣ್ಯಗಳನ್ನೂ, ಹೊಸ ಬಟ್ಟೆಗಳನ್ನೂ ತಂದು ಕೊಡುತ್ತಿದ್ದಳು. ವಸುಂಧರೆಗೆ ಆ ನಾಣ್ಯಗಳಾಗಲೀ, ಹೊಸ ಬಟ್ಟೆಗಳಾಗಲೀ ಬೇಕಿರಲಿಲ್ಲ. ಇನ್ನಾದರೂ ತನ್ನ ಜೊತೆಗೆ ಇರುವಂತೆ ಅಮ್ಮನನ್ನು ಅತ್ತು ಬೇಡಿಕೊಳ್ಳುತ್ತಿದ್ದಳು. ಆದರೆ ತಾಯಿಗೆ ಮಗಳ ಆ ಒಂದು ಬಯಕೆಯನ್ನು ಈಡೇರಿಸುವುದು ಎಂದಿಗೂ ಸಾಧ್ಯವಾಗಿರಲಿಲ್ಲ. ತನ್ನ ಸೋದರ ಮಾವನಾಗಲೀ, ಊರ ಜನರಾಗಲೀ ತನ್ನ ತಾಯಿಯನ್ನು ಗೌರವಿಸದಿರುವುದು ವಸುಂಧರೆಗೆ ತಾನು ಬೆಳೆದು ದೊಡ್ಡವಳಾದಂತೆ ತಿಳಿಯತೊಡಗಿತ್ತು. ಆಸ್ಥಾನ ನರ್ತಕಿಯರ ಬದುಕು ಹೇಗಿರುತ್ತದೆಂದು ಅವಳಿಗೆ ಅರಿವಾಗತೊಡಗಿತ್ತು. ಆಸ್ಥಾನದಲ್ಲಿ ನರ್ತಕಿಯರಿಗೆ ಎಲ್ಲಿಲ್ಲದ ಬೇಡಿಕೆ ಮತ್ತು ಉಪಚಾರ. ಆಸ್ಥಾನದ ಹೊರಗೆ ಅವರೆಂದರೆ ಸಮಾಜಕ್ಕೆ ಅನಾದರ. ಬಹಶಃ ಅದೇ ಕಾರಣಕ್ಕೋ ಏನೋ ತನ್ನ ತಾಯಿಗೆ ಆಸ್ಥಾನವನ್ನು ತೊರೆದು ತನ್ನೊಂದಿಗೆ ಬಾಳು ಸಾಗಿಸುವುದು ಕಷ್ಟವಾಗಿರಬಹುದು ಎಂದು ಯೋಚಿಸಿ ಆ ಒಂದು ಸತ್ಯವನ್ನು ಒಪ್ಪಿಕೊಳ್ಳಲು ಯತ್ನಿಸುತ್ತಿದ್ದಳು ವಸುಂಧರೆ.

ಚಿಕ್ಕ ವಯಸ್ಸಿನ ಪುಟ್ಟ ಹುಡುಗಿಯಾಗಿದ್ದಾಗ ಅದೇಕೆ ಜನ ತಾನೆಂದರೆ ಮೂಗು ಮುರಿಯುತ್ತಿದ್ದರು, ಅದೇಕೆ ತನ್ನ ಗೆಳತಿಯರು ತನ್ನೊಂದಿಗೆ ಆಟವಾಡಿದರೆ ಅವರ ಅಮ್ಮಂದಿರಿಗೆ ಇಷ್ಟವಾಗುತ್ತಿರಲಿಲ್ಲ ಎಂದು ವಸುಂಧರೆಗೆ ಅರ್ಥವಾಗಿರಲಿಲ್ಲ. ಆದರೆ ಅವಳು ತನ್ನ ಹನ್ನೆರಡರ ವಯಸ್ಸನ್ನು ದಾಟುತ್ತಿದ್ದಂತೆಯೇ ಕ್ರಮೇಣ ಎಲ್ಲ ಬದಲಾದಂತೆ ಎನಿಸತೊಡಗಿತ್ತು. ತಾಯಿಯ ಅಪ್ರತಿಮ ಸೌಂದರ್ಯದ ಲಕ್ಶಣಗಳು ವಸುಂಧರೆಯಲ್ಲಿ ಮೂಡತೊಡಗಿದ್ದವು. ಬೆರಗು ಹುಟ್ಟಿಸುವಂಥ ಯೌವ್ವನ ವಸುಂಧರೆಯನ್ನು ಬಹು ಬೇಗನೆ ಆತುರದಿಂದ ಅರಸಿ ಬಂದಂತಿತ್ತು. ಅವಳು ದಾರಿಯಲ್ಲಿ ನಡೆದು ಹೋಗುತ್ತಿದ್ದರೆ ಜನರ ಕಣ್ಣುಗಳು ಅವಳನ್ನು ಹಿಂಬಾಲಿಸಿದ್ದವು. ಅವಳನ್ನು ಕಾಣುತ್ತಿದ್ದಂತೆಯೇ ಮುಖ ತಿರುಗಿಸುತ್ತಿದ್ದವರು ಈಗ ಅವಳನ್ನು ಕಾಣುವ ಹಂಬಲದಲ್ಲಿ ಮುಖ ತಿರುಗಿಸತೊಡಗಿದ್ದರು. ವಸುಂಧರೆಗೆ ಅದೆಲ್ಲ ಅರ್ಥವಾಗುತ್ತಿದ್ದಂತೆಯೇ ಇನ್ನೂ ಮೂರು ವರುಷಗಳು ಕಳೆದವು. ಹದಿನಾರರ ಹೊಸ್ತಿಲಲ್ಲಿ ನಿಂತ ವಸುಂಧರೆ ಸಾಕ್ಷಾತ್ ರತಿದೇವಿಯೇ ಎನ್ನುವಂತಾಗಿದ್ದಳು. ಅವಳ ನೀಳವಾದ ದೇಹದ ನಿಲುವು, ಅವಳ ಬಳಕುವ ಸಿಂಹ ಕಟಿಯ ಸೊಬಗಿಗೆ ತಾನೇ ಮಾರು ಹೋದಂತೆ ಅವಳ ಸೊಂಟದುದ್ದಕ್ಕೂ ಬಾಗಿ ಹರಡಿದ ಅವಳ ಕಡುಗಪ್ಪು ಕೇಶರಾಶಿ, ಹಾಲಿನಲ್ಲಿ ನೆನೆಸಿ, ಬೆಳದಿಂಗಳಲ್ಲಿ ತೆರೆದಿಟ್ಟಂತೆ ಕಾಂತಿ ಸೂಸುವ ಅವಳ ಬೆಳ್ಳನೆಯ ಚರ್ಮ ಅವಳೆಂಥ ಚೆಲುವೆಯೆಂದು ಸಾರಿ ಹೇಳುವಂತಿದ್ದವು. ನೋಡಿದವರ ಮನದಲ್ಲಿ ಶಾಶ್ವತವಾಗಿ ಚಿತ್ರಣವಾಗಿಬಿಡಬಹುದಾದಂತಹ ಅವಳ ಆಕರ್ಷಕವಾದ ಮುಖ, ತುಂಟತನವನ್ನೂ, ಮಾದಕತೆಯನ್ನೂ, ಸ್ನೇಹವನ್ನೂ ಬೆರೆಸಿಟ್ಟ ಬಟ್ಟಲುಗಳಂತಹ ಅವಳ ಕಪ್ಪು ಕಣ್ಣುಗಳು, ಕಾಮನಬಿಲ್ಲಿನಂತೆ ಮಣಿದ ಹುಬ್ಬುಗಳು, ಮೊದ್ದಾದ, ಮುದ್ದಾದ ಅವಳ ಮೂಗು, ಸದಾ ಪ್ರೇಮದ ನಗುವನ್ನು ಚೆಲ್ಲುತ್ತಿರುವಂತೆ ಕಂಗೊಳಿಸುವ ಅವಳ ರಸತುಂಬಿದ ತುಂಬು ಅಧರಗಳು, ತೆಳುವಾದ ಅವಳ ನೀಳ ಕತ್ತಿನ ಅಕ್ಕ ಪಕ್ಕ ಸಮತಟ್ಟಾಗಿ ಚಾಚಿದ ಅವಳ ಹೆಗಲುಗಳು, ಅವುಗಳಿಂದ ಬಳ್ಳಿಗಳಂತೆ ಚಾಚಿದ ಅವಳ ಸುಂದರವಾದ ಕೈಗಳು, ಅವಳ ಪ್ರತಿಯೊಂದು ಅಂಗವೂ ಶಿಲ್ಪಿಯೊಬ್ಬನ ಕಲೆಯ ಫಲವೇನೋ ಎನ್ನುವಂತಿತ್ತು.

ಅಶ್ವಪುರದಲ್ಲಿ ವಸುಂಧರೆ ಮನೆ ಮಾತಾಗಿಬಿಟ್ಟಳು. ಅವಳೊಂದಿಗೆ ಸ್ನೇಹ ಬೆಳೆಸಿರದ ಅವಳ ವಯಸ್ಸಿನ ಹುಡುಗಿಯರಿಗೆ ಅವಳು ಅಸೂಯೆಯ ಮೂಲವಾದರೆ ಅವಳ ಸ್ನೇಹಿತೆಯರಿಗೆ ಅವಳು ಹೆಮ್ಮೆಯಾಗಿದ್ದಳು. ಆ ಸ್ನೇಹಿತೆಯರೆಲ್ಲ ಯಾವತ್ತೂ ಅವಳ ಅಕ್ಕಪಕ್ಕದಲ್ಲೇ ಇರಬಯಸುತ್ತಿದ್ದರು. ವಸುಂಧರೆ ಹುಡುಗರೊಂದಿಗೆ ಯಾವತ್ತೂ ಹೆಚ್ಚು ಸ್ನೇಹವನ್ನು ಬೆಳೆಸಿರಲೇ ಇಲ್ಲ. ಅವಳ ಸಾಮಿಪ್ಯಕ್ಕೆ, ಅವಳ ಸ್ನೇಹಕ್ಕೆ ಹಾತೊರೆಯುವ ಹುಡುಗರ, ಯುವಕರ ಸಂಖ್ಯೆ ದಿನದಿನಕ್ಕೂ ಬೆಳೆಯತೊಡಗಿತ್ತು. ಅವಳ ಸ್ನೇಹಿತೆಯರಿಗಾದರೋ ಇದರಿಂದ ಲಾಭವೇ ಆದಂತಾಗಿತ್ತು. ಏಕೆಂದರೆ ವಸುಂಧರೆಯನ್ನು ನೇರವಾಗಿ ಮಾತನಾಡಿಸಲಾಗದ ಯುವಕರು ಮೊದಲು ಅವಳ ಗೆಳತಿಯರೊಂದಿಗೆ ಸ್ನೇಹ ಬೆಳೆಸುವ ಪ್ರಯತ್ನ ಮಾಡತೊಗಿದ್ದರು. ಸಖಿ ಅನುಸೂಯೆಗೆ ಈಗ ಅವಳ ಮಾತಿನಂತೆ ನಡೆಯಲು ಸಿದ್ಧರಿರುವ ಐದಾರು ಹುಡುಗರ ಸ್ನೇಹವಿತ್ತು. ಗೆಳತಿಯರಾದ ಕೃಷ್ಣವೇಣಿ, ಚಂದ್ರಿಕೆ, ಸಾರಂಗಿ, ಚಿತ್ರಾಂಗದೆ, ಅಂಜನಿ, ಹೇಮಾವತಿ ಮುಂತಾದವರೂ ಅಷ್ಟೇ, ವಸುಂಧರೆಯ ಸ್ನೇಹವನ್ನು ಕೋರಿ ಬಂದ ಹಲವು ಯುವಕರನ್ನು ತಮ್ಮ ಇಚ್ಛೆಗೆ ಅನುಸಾರವಾಗಿ ನಡೆಸಿಕೊಳ್ಳುತ್ತಿದ್ದರು. ಗೆಳತಿಯರ ಈ ನಡುವಳಿಕೆಯನ್ನು ವಸುಂಧರೆ ಯಾವತ್ತೂ ಸಮ್ಮತಿಸಲಿಲ್ಲ. ಆದರೆ ತನ್ನ ಅನುಪಸ್ಥಿತಿಯಲ್ಲಿ ತನ್ನ ಗೆಳತಿಯರು ಆ ಹುಡುಗರೊಂದಿಗೆ ಒಡನಾಡುವುದನ್ನು ತಡೆಯುವುದು ಅವಳಿಗೆ ಸಾಧ್ಯವಿರಲಿಲ್ಲ.

ವಸುಂಧರೆಗೆ ತನ್ನ ಚೆಲುವಿನ ಬಗ್ಗೆ ಅಹಂಕಾರವಾಗಲೀ, ತನ್ನ ಸ್ನೇಹವನ್ನು ಬಯಸುವ ಹುಡುಗರ ಬಗ್ಗೆ ತಿರಸ್ಕಾರವಾಗಲೀ ಇರಲಿಲ್ಲ. ಆದರೂ ಯಾಕೋ ಅವಳಿಗೆ ಯಾವ ಹುಡುಗನೂ, ಯಾವ ಯುವಕನೂ ಇಷ್ಟವಾಗಲಿಲ್ಲ. ತಾರುಣ್ಯ ತಳೆಯುವ ಹೆಣ್ಣಿಗೆ ತನ್ನ ದೇಹದ ಬಗ್ಗೆ ಅರಿವು ಸ್ವಾಭಾವಿಕವಾಗಿ ಮೂಡುವಂತೆ ವಸುಂಧರೆಗೆ ತನ್ನ ದೇಹದಲ್ಲಿ ಕಳೆದ ಕೆಲವು ವರುಷಗಳಲ್ಲಾದ ಬದಲಾವಣೆಗಳ ಬಗ್ಗೆ ಅರಿವಿತ್ತು. ಆ ವಯಸ್ಸಿನಲ್ಲಿ ಸ್ವಾಭಾವಿಕವಾಗಿ ಅವಳಲ್ಲಿರಬೇಕಾದ ಪ್ರೇಮದ ಭಾವನೆಗಳು, ಹೆಣ್ತನದ ಬಯಕೆಗಳು, ಆಸೆಗಳು ಎಲ್ಲವೂ ಅವಳಲ್ಲಿದ್ದವು, ಆದರೆ ಬೂದಿ ಮುಚ್ಚಿದ ಕೆಂಡದಂತೆ. ಅವುಗಳ ಪ್ರಖರತೆಯ ಅನುಭವವನ್ನು ಮೂಡಿಸುವ, ಅವುಗಳನ್ನು ಈಡೇರಿಸಿಕೊಳ್ಳುವ ಆತುರತೆಯನ್ನು ತರುವ ವಯಸ್ಸು ಅವಳಿಗಿನ್ನೂ ಆಗಿರಲಿಲ್ಲ. ಆದರೂ ಒಂದೊಂದು ಸಲ ಅವಳ ಮನದಲ್ಲಿ ಹಠಾತ್ತನೆ ಹುಟ್ಟುವ ಬಯಕೆಗಳಿಂದ ಅವಳಿಗೆ ದಿಗಿಲಾಗುತ್ತಿತ್ತು. ಹುಡುಗಿಯೂ ಅನ್ನಲಾಗದ, ವಯಸ್ಸಿಗೆ ಬಂದ ಹೆಣ್ಣೂ ಅನ್ನಲಾಗದ ಆ ಹದಿನಾರರ ವಯಸ್ಸಿನಲ್ಲಿ ಹೆಣ್ಣಿಗೆ ಇಂಥ ದಿಗಿಲುಗಳು ಸ್ವಾಭಾವಿಕ. ಸೂರ್ಯ ಮುಳುಗಿದ ವೇಳೆಯಲ್ಲಿ ಕೆಲವು ಸಲ ಕಾರಣವಿಲ್ಲದೇ ಮೈ ಬಿಸಿಯೇರಿದಾಗ ವಸುಂಧರೆಗೆ ಅದೆಂಥ ಜ್ವರವೆಂದೇ ತಿಳಿಯುತ್ತಿರಲಿಲ್ಲ. ಎಂಥದೋ ತಳಮಳ, ಹೀಂಸೆ ತರುವ ಒಂಟಿತನ. ನಿದ್ರೆ ಬಾರದೇ ಹಾಸಿಗೆಯಲ್ಲಿ ಮಲಗಿ ಕಳೆಯಬೇಕಾದ ದೀರ್ಘ ಸಮಯ. ಆಗೆಲ್ಲ ಯಾವುದೋ ಅಪರಿಚಿತ ಯುವಕನೊಬ್ಬನ ಮುಖ ಅವಳ ಮನಸ್ಸಿನಲ್ಲಿ ಮೂಡುತ್ತಿತ್ತು. ದಿನ ಕಳೆದಂತೆ ಆ ಮುಖ ಓಬ್ಬ ರೂಪವಂತ ಯುವಕನಾಗಿ ಬೆಳೆದಿತ್ತು. ಆತ ಆರು ಆಡಿ ಎತ್ತರದ ಸುಂದರಾಂಗ, ಚೆಲುವ. ಅವಳನ್ನು ನೋಡಿ ನಗುತ್ತಿದ್ದ. ಅವನ ಆ ಆಕರ್ಷಕ ಮುಖ, ನುಗುವಾಗ ಅವನ ಕಣ್ಣುಗಳಲ್ಲಿ ತುಳುಕುತ್ತಿದ್ದ ತುಂಟತನ, ಅವನ ಸುಂದರವಾದ ತುಟಿಗಳಲ್ಲಿ ಮೂಡುತ್ತಿದ್ದ ಆ ಮಂದಹಾಸ ಅವಳಿಗೆ ಹುಚ್ಚು ಹಿಡಿಸುವಂತಿದ್ದವು. ಅವನು ಹಾಗೆ ಅವಳನ್ನು ನೋಡುತ್ತಿದ್ದರೆ ಅವನ ಆ ನೋಟದಲ್ಲಿ ಅವಳು ಕರಗಿ, ನಾಚಿ ನೀರಾಗುತ್ತಿದ್ದಳು. ಅವನು ತನ್ನ ಸಶಕ್ತ ಬಾಹುಗಳನ್ನು ಅವಳತ್ತ ಚಾಚಿದಾಗ ಅವಳು ಓಡೋಡಿ ಅವನ ಬಳಿ ಹೋಗುತ್ತಿದ್ದಳು. ಇನ್ನೇನು ಅವನ ಆ ಬಾಹುಗಳು ತನ್ನನ್ನು ಬಳಸಿ ತಬ್ಬಬೇಕು ಎಂದಾಗ ಅವನು ಮಾಯವಾಗಿಬಿಡುತ್ತಿದ್ದ. ಅದೆಲ್ಲ ಬರೀ ಕಲ್ಪನೆ ಎಂದು ಅವಳಿಗೆ ತಿಳಿದಿದ್ದರೂ ಹಾಗೆ ಅದು ಹಾಠಾತ್ತನೆ ಕೊನೆಗೊಂಡಾಗ ಅವಳಿಗೆ ತೀವ್ರ ನಿರಾಸೆಯಾಗುತ್ತಿತ್ತು. ಜೊತೆಗೆ ಅವನನ್ನು ಇನ್ನೊಮ್ಮೆ ಹಾಗೆ ನೋಡುವ, ಕಾಣುವ, ಅವನ ನೋಟದಲ್ಲಿ ಕರಗುವ, ಅವನ ಬಾಹುಗಳಲ್ಲಿ ಬೆರೆಯುವ ಹಂಬಲ ಅವಳಲ್ಲಿ ಹೆಚ್ಚಾಗುತ್ತಿತ್ತು.

ಋತುಗಳು ಉರುಳಿದವು. ಮತ್ತೊಂದು ವರುಷ ಕಳೆದಿತ್ತು. ವಸುಂಧರೆಯ ಶೂನ್ಯಮನಸ್ಕತೆ ಅವಳ ಗೆಳತಿಯರಿಗೆ ಅರ್ಥವಾಗದಾಯಿತು. ಅದೇಕೆ ಅವಳು ಯಾವಗಲೂ ಏನನ್ನೋ ಯೋಚಿಸುತ್ತಿರುವಂತೆ ಕುಳಿತಿರುವುದು ಅವರಿಗೆ ಅರ್ಥವಾಗದಾಯಿತು. ಕೇಳಿದರೆ ವಸುಂಧರೆ ಏನನ್ನೂ ಹೇಳುತ್ತಿರಲಿಲ್ಲ. ಎಷ್ಟೋ ಬಾರಿ ತಾನೇ ತಾನಾಗಿ ಒಂಟಿಯಾಗಿ ಕುಳಿತಿರುತ್ತಿದ್ದಳು. ಇಲ್ಲವೇ ಯಾರೊಂದಿಗೂ ಮಾತನಾಡದೇ ದಾರಿಯಲ್ಲಿ ನಡೆದು ಹೋಗುತ್ತಿದ್ದಳು. ಅಶ್ವಪುರದ ದಾರಿಗಳಲ್ಲಿ ವಸುಂಧರೆಯಂತಹ ಯುವತಿಯು ನಡೆದು ಹೋಗುತ್ತಿದ್ದರೆ ಅದನ್ನು ಗಮನಿಸದೇ ಇರದಿರುವುದು ಸಾಧ್ಯವಿರಲಿಲ್ಲ. ಅವಳು ತೊಡುವ ಯಾವ ಬಟ್ಟೆಯೂ ಮಸುಕಾಗಿಸದಂತಹ ಯೌವ್ವನದ ಮದ ತುಂಬಿದ ಅವಳ ಸ್ತನಗಳ ಆಕಾರ, ಅವಳ ಎದೆಯ ಕೆಳಗೆ ಸೊಂಟದವರೆಗೂ ಸಮತಟ್ಟಾಗಿ ಹರಡಿದ ಅವಳ ಉದರ ಭಾಗ, ಹಂಸವನ್ನೇ ನಾಚಿಸುವಂತಹ ಅವಳ ನಡೆಗೆ ಕುಲುಕುತ್ತ ತಮ್ಮ ಚೆಲುವನ್ನು ತೋರಿಸಿಕೊಡುವ ಅವಳ ದುಂಡನೆಯ ಸಮೃದ್ಧವಾದ ನಿತಂಬಗಳು ಹತ್ತಿರದಲ್ಲಿದ್ದ ಪ್ರತಿಯೊಬ್ಬ ಪುರುಷನ ಗಮನವನ್ನು ಸೆಳೆಯುತ್ತಿದ್ದವು.


ಮುಂದೆವರಿಯುವುದು...

15 comments:

ಗಿರೀಶ ಕೆ ಎಸ್ said...

ನೀವು ಬರೀತಾ ಇರೋ ಈ ಹೊಸ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹೀಗೆ ಮುಂದುವರೆಸಿ.

-ಗಿರೀಶ ಕೆ ಎಸ್

Prashant C said...

"ಹಾಲಿನಲ್ಲಿ ನೆನೆಸಿ, ಬೆಳದಿಂಗಳಲ್ಲಿ ತೆರೆದಿಟ್ಟಂತೆ ಕಾಂತಿ ಸೂಸುವ ಅವಳ ಬೆಳ್ಳನೆಯ ಚರ್ಮ ಅವಳೆಂಥ ಚೆಲುವೆಯೆಂದು ಸಾರಿ ಹೇಳುವಂತಿದ್ದವು."

Wow, ವರ್ಣಿಸಲಸಾದ್ಯ ವಾದದ್ದನ್ನ್ ವರ್ಣಿಸಿದ್ದಿರಿ!!!

ಕಥೆ ಹೀಗೆ ಮುಂದುವರಿಲಿ :)

Anonymous said...

Oduttiddare... yaavudO aithikaasika kathe OdidaMtaatuttide.... muMdEnu eMba kaatura.... aatura...!

Nanda said...

chennagi bardiddira.
neevu bareyuva hardcore kathegaligintalu soft jatige seridde priyavagutte.
munduvarikege kayuttaa...

krishna.

rajkar said...

ಪದ್ಮಿನಿಯವೆರೆ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರ.
ನಿಮ್ಮ ಈ ಕಥೆಯ ಮೊದಲ ಕಂತಿನಲ್ಲೇ............
ಮುಂದೆ ಹೇಳಲು ನನಗೆ ಪದಗಳೇ ಸಿಗುತ್ತಿಲ್ಲ ಎಲ್ಲಾ ಖಾಲಿ ಆಗಿಹೋಗಿದೆ.
ಪೌರಾಣಿಕೆ ಹಿನ್ನಲೆಯುಳ್ಳ ಕಥೆಯನ್ನು ಯಾವತ್ತಾದರೂ ಬರೆಯುವಿರೆಂದು ನನಗೇ ಮೊದಲೇ ಭಾಸವಾಗಿತ್ತು, ಆದ್ರೆ ಇಷ್ಟು ಬೇಗ ಬರೀತಿರಾ ಅಂತ ನಾನು ಅಂದುಕೊಂಡಿರಲ್ಲಿಲ್ಲ, ಯಾಕೆಂದರೆ ನಿಮ್ಮ ನಿಜವಾದ ಬರಹಾ ಕೌಶಲ್ಯಕ್ಕೆ ಇದು ದೊಡ್ಡ ಸವಾಲು. ಪೌರಾಣಿಕ ಹಿನ್ನಲೆಯ ಕಥೆಗಳಲ್ಲಿ ನಿಜವಾದ ರಸಕಾವ್ಯವು ಮೂಡಿಬರಲು ಸಾಧ್ಯ. ಆದರೆ ಆ ಕಥೆಗಳನ್ನು ಬರೆಯುವುದು ತುಂಬಾನೆ ಕಷ್ಟ. ಅದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಮತ್ತು ಕಠಿಣ ಪರಿಶ್ರಮ ಅಗತ್ಯ.
ಆ ಕಠಿಣ ಪರಿಶ್ರಮ ನಿಮ್ಮ ಈ ಕಥೆಯ ಮೊದಲ ಕಂತಿನಲ್ಲೇ ಎದ್ದು ಕಾಣುತ್ತದೆ.
ನಮಗೆ ಇಂತಹ ಅಮೋಘ ಕಥೆಯನ್ನು ನೀಡುತ್ತಿರುವುದಕ್ಕೆ ನಿಮಗೆ ನ್ನನ್ನ ಅನಂತ ಅನಂತ ಧನ್ಯಾವಾದಗಳು.
ನಾನು ನಿಮಗೇ ಮೊದಲೇ ಹೇಳಿದಂತೆ ನಿಮಗೆ "ಸರಸ್ವತಿ ಕ್ರುಪಕಟಾಕ್ಷ" ಒಲಿದಿದೆ/ಲಭಿಸಿದೆ.
ಮತ್ತೆ ಈ ಕಥೆಯು ದುರಂತ ಅಂತ್ಯ ಕಾಣದಿರಲೆಂದು ಆಶಿಸುತ್ತೇನೆ.
ಮುಂದಿನ ಕಂತಿಗೆ ಎದುರು ನೋಡುತ್ತಿದ್ದೇನೆ.

ಪದ್ಮಿನಿ ಕಶ್ಯಪ said...

ಕತೆಯನ್ನು, ನನ್ನ ಬರಹವನ್ನು ಮೆಚ್ಚಿ ಕಾಮೆಂಟ್ ಬರೆದಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು. ರಾಜ್‌ಕರ್, ಒಂದು ಪುಟ್ಟ correction. ಇದು ಪೌರಾಣಿಕ ಹಿನ್ನೆಲೆಯ ಕತೆಯಲ್ಲ. ಇದನ್ನು ಐತಿಹಾಸಿಕ ಹಿನ್ನೆಲೆಯ ಕತೆ ಎನ್ನಬಹುದು. ಏಕೆಂದರೆ ಪೌರಾಣಿಕವೆಂದಾಗ ಅದರಲ್ಲಿ ನಮ್ಮ ಪುರಾಣಗಳಲ್ಲಿ ಬರುವ ಪಾತ್ರಗಳ ಮತ್ತು ಸನ್ನಿವೇಶಗಳ ಉಲ್ಲೇಖವಿರುತ್ತದೆ. ಅಲ್ಲವೆ? ಬರೆಯುತ್ತಿರಿ.

rajkar said...

ಓ ಹೌದು ಇದು ಪೌರಾಣಿಕ ಅಲ್ಲ ಐತಿಹಾಸಿಕ ಕಥೆ ನನ್ನ MISTAKE ಗೆ SORRY. ನನ್ನನ್ನು CORRECT ಮಾಡಿದ್ದಕ್ಕೆ THANK YOU.
ಮತ್ತೇ ಕತೆಯ ರೂಪದಲ್ಲಿನ ಕಾಮೆಂಟುಗಳನ್ನು ಪ್ರಕಟಿಸುವುದು ಸಾಧ್ಯವಾಗುವುದಿಲ್ಲ ಅಂತ ಹೇಳಿರುವುದರ ಅರ್ಥವೇನು. ನನ್ನ ಕಮೆಂಟು ಕಥೆ ರೂಪದಲ್ಲಿ ಇದೇ ಅಂತ ನಿಮಗೇನಾದರು..... ಭಾಸವಾಗಿದೆಯೇ...??? ಅದಕ್ಕೇ ಈ ರೀತಿ ಹೇಳಿದ್ದೀರ?

ಪದ್ಮಿನಿ ಕಶ್ಯಪ said...

ರಾಜ್‌ಕರ್, ಕೆಲವು ಓದುಗರು ತಮ್ಮ ಸ್ವಂತ ಲೈಂಗಿಕ ಅನುಭವಗಳನ್ನು ಹಂಚಿಕೊಳ್ಳಲು ಬಯಸಿ ಅವನ್ನು ಕತೆಯಂತೆ ಬರೆದು ಕಾಮೆಂಟುಗಳಲ್ಲಿ ಹಾಕಿದ್ದಾರೆ. ನನಗೆ ಅದರಿಂದ ಬೇಸರವೇನೂ ಇಲ್ಲವಾದರೂ ಕೆಲವು ಪದಗಳ ಬಳಕೆ ಮತ್ತು ಭಾಷೆಯ ವ್ಯತ್ಯಾಸದ ಕಾರಣ ಅಂಥ ಕಾಮೆಂಟುಗಳನ್ನು ಪ್ರಕಟಿಸುವುದು ಸಾಧ್ಯವಾಗಲಿಲ್ಲ.

rajkar said...

ನಾನು ಹಾಗೆ ಯಾಕೆ ಹೇಳಿದೆ ಅಂತ ಅಂದ್ರೆ,ನೀವು ಅದನ್ನು ನನಗೇ ಹೇಳಿದ ಹಾಗೆ ಅನ್ನಿಸಿತು. ನನ್ನಿಂದ ಎನೋ ಎಡವಟ್ಟು ಅಗಿಹೊಯ್ತೇ ಅಂತಾನೂ ಅನ್ನಿಸಿತು. ಹಾಗೆ ಅನ್ನಿಸುವುದು ಸಹಜ ನೋಡೀ!!! ಮತ್ತೇ ಹಾಗಾದರೆ ನನ್ನ ಉದ್ದುದ್ದ ಕಮೆಂಟ್ ನಿಂದ ನಿಮಗೇನು ಬೇಸರವಿಲ್ಲಾ ತಾನೇ??? ನಾನು ನಿರ್ಭಯವಾಗಿ ಕಮೆಂಟ್ ಮಾಡಬಹುದಲ್ವಾ???

Anonymous said...

ಪ್ರೀತಿಯ ಪದ್ಮಿನಿ,

ನಿಮ್ಮ ಕಥೆಗಳು ಗಂಡು ಹೆಣ್ಣಿನ ಮಿಲನಕ್ಕೆ ಹಾತೊರೆಯುವಂತೆ ಮಾಡುತ್ತವೆ. ನಿಜವಾದ ಕಾಮ ದಹನವಾಗುವುದು ಮನಸ್ಸುಗಳಿಂದ, ಮನಸ್ಸುಗಳು ಅನುಭವಿಸುವುದೇ ನಿಜವಾದ ಕಾಮದ ಆನಂದ. ಆದರೆ ಕಾಮಕ್ಕೆ ದೇಹಗಳ ತ್ರುಪ್ತಿಯ ಇನ್ನೊಂದು ಮುಖ ಇರುವುದೂ ಸತ್ಯ. ನೀವು ಬರೆಯುವ ಕಥೆಗಳು ಹೆಚ್ಚು ಹೆಚ್ಚು ಕಾಮದ ಅನುಭವಕ್ಕೆ ತುಡಿಯುವಂತೆ ಮಾಡುತ್ತವೆ. ಕೆಲವೊಮ್ಮೆ ಕಾಮದ ಕ್ರಿಯೆಗಿಂತ, ಅದಕ್ಕಾಗಿ ಹಂಬಲಿಸುವುದೇ ಸುಖಕರ. ನೀವು ಬಳಸುವ ಭಾಷೆ ಅದ್ಭುತ.

ನನ್ನ ಕಥೆಗಳು ಹೆಚ್ಚಾಗಿ ಕಾಮವನ್ನು ದೇಹಗಳು ಅನುಭವಿಸುವ ಕ್ರಿಯೆಗೆ ಹೆಚ್ಚು ಒತ್ತು ಕೊಡುತ್ತವೆ. ನನ್ನ ಕಥೆಗಳಲ್ಲಿ ಹೆಣ್ಣು ತುಂಬಾ ಪೋಲಿ. ಈ ತರಹದ ಕಥೆಗಳಿಗಾಗಿ ನಾನು ಒಂದು ಬ್ಲಾಗ್ ಪ್ರಾರಂಭಿಸಿದ್ದೀನಿ. ನಿಮ್ಮ ಅನಿಸಿಕೆ ನನಗೆ ತುಂಬಾ ಮುಖ್ಯ.
http://www.hoomanasu.wordpress.com

Keshu

Raghavendra Billava said...

Good work....best of luck....

Anonymous said...

Dear Padmini,


Excellent narration.. Hats off!

Please continue part 2.. Its been more than a month after first part was published... We are all desperately waiting..

- Rasika Kumara

ಪದ್ಮಿನಿ ಕಶ್ಯಪ said...

ರಸಿಕ ಕುಮಾರ, ಖಂಡಿತವಾಗಿಯೂ ಬರೆಯುತ್ತೇನೆ. ಕಳೆದ ತಿಂಗಳು ಸಂಬಂಧಿಕರೊಬ್ಬರ ಮದುವೆಯ ತಯಾರಿಯ ಭರಾಟೆಯಲ್ಲಿ ಬರೆಯಲು ಅವಕಾಶವೇ ಸಿಗಲಿಲ್ಲ. ಅಂದಹಾಗೆ, ನನ್ನ ಜೊತೆಗೆ ಈಗ ಇನ್ನಿಬ್ಬರು ಲೇಖಕರಿದ್ದಾರೆ. ಅವರು ನನಗಿಂತಲೂ ಚನ್ನಾಗಿ ಬರೆಯುತ್ತಾರೆ. ಓದುತ್ತಿರಿ.

Anonymous said...

Good work....best of luck....

Please continue part 2.. Its been more than a month after first part was published... I am desperately waiting..

mahesh raj manju said...

tumba chanagidy chinnu....nin stores

Post a Comment