Thursday, September 20, 2012

ಗಂಡಂದಿರು ಮಾರಟಕ್ಕಿದ್ದಾರೆ!

Note: This article is not my intellectual property.

ಒಂದು ದಿನ ಬೆಂಗಳೂರಿನಲ್ಲಿ ಆರು ಮಹಡಿಗಳ ಹೊಸ shopping mall ತೆರೆದುಕೊಳ್ಳುತ್ತದೆ. ಅದರ ಹೆಸರು The Great Husband Store. ಗಂಡಂದಿರನ್ನೇ ಮಾರಾಟಮಾಡುವ ಕಲ್ಪನೆ ಅದ್ವೀತೀಯವಷ್ಟೇ ಅಲ್ಲ, ಜನಪ್ರಿಯವೂ ಆಗಿ, ಪತಿ ಪ್ರಾಪ್ತಿಗಾಗಿ ನಗರದ ಅರ್ಹ ಯುವತಿಯರೆಲ್ಲ ಗಂಡಂದಿರನ್ನು ಖರೀದಿಸಲು ಮುಂದಾಗುತ್ತಾರೆ. ಆದರೆ ಆ ಮಾರಾಟ ಮಳಿಗೆಯ ಯಜಮಾನ ಕೆಲವು ನಿಯಮ-ನಿರ್ಬಂಧನೆಗಳನ್ನು ವಿಧಿಸಿದ್ದ. ಅವು ಹೀಗಿದ್ದವು:

1)ಯಾರೇ ಆಗಲಿ The Great Husband Store ಗೆ ಕೇವಲ ಒಂದು ಸಲ ಮಾತ್ರ ಭೇಟಿಕೊಡಬಹುದು.
2)ಈ ಮಳಿಗೆಯಲ್ಲಿ ಒಟ್ಟು ಆರು ಮಹಡಿಗಳಿದ್ದು ಮೇಲೆ ಹೋದಂತೆ ಸರಕಿನ ಮೌಲ್ಯವೂ ಹೆಚ್ಚುತ್ತ ಹೋಗುತ್ತದೆ. 3)ಯಾರೂ ಒಮ್ಮೆ ಪ್ರವೇಶಿಸಿದ ಮಹಡಿಯನ್ನು ಮೊತ್ತೊಮ್ಮೆ ಪ್ರವೇಶಿಸುವಂತಿಲ್ಲ.

ಒಂದು ದಿನ ಒಬ್ಬ ತರುಣ ಮಹಿಳೆ ಅಲ್ಲಿಗೆ ಭೇಟಿಕೊಡುತ್ತಾಳೆ. ತುಂಬಾ ಸಂಕೋಚ ಮತ್ತು ನಾಚಿಕೆಯಿಂದ ಸುತ್ತಲೂ ಕಣ್ಣಾಡಿಸುತ್ತ ಮೆಟ್ಟಿಲುಗಳನ್ನು ಹತ್ತಿ ಒಂದನೇ ಮಹಡಿಗೆ ಬಂದಾಗ ಅಲ್ಲಿ ಅವಳಿಗೊಂದು ಸೂಚನಾ ಫಲಕ ಕಾಣಿಸುತ್ತದೆ.

ಮಹಡಿ 1: ಈ ಪುರುಷರು ಉತ್ತಮ ಸಂಬಳ ಸಿಗುವ ಕೆಲಸಗಳನ್ನು ಹೊಂದಿದ್ದಾರೆ.

ಇವರೆಲ್ಲ ಸಾಮಾನ್ಯ ಎಂದುಕೊಳ್ಳುತ್ತ ಆ ಮಹಿಳೆ ಎರಡನೇ ಮಹಡಿಗೆ ಬರುತ್ತಾಳೆ. ಎರಡನೆಯ ಮಹಡಿಯನ್ನು ಪ್ರವೇಶಿದಾಗ ಅಲ್ಲಿನ ಸೂಚನಾ ಫಲಕ ಕಾಣಿಸುತ್ತದೆ.

ಮಹಡಿ 2: ಈ ಪುರುಷರು ಉತ್ತಮ ಸಂಬಳ ಸಿಗುವ ಕೆಲಸಗಳನ್ನು ಹೊಂದಿದ್ದಾರೆ ಮತ್ತು ಇವರಿಗೆ ಮಕ್ಕಳೆಂದರೆ ಪ್ರಾಣ.

ಮಹಿಳೆ ಮುಂದೆ ನಡೆದು ಮೂರನೇ ಮಹಡಿಗೆ ಬರುತ್ತಾಳೆ.

ಮಹಡಿ 3: ಈ ಪುರುಷರು ಉತ್ತಮ ಸಂಬಳ ಸಿಗುವ ಕಲಸಗಳನ್ನು ಹೊಂದಿದ್ದಾರೆ, ಇವರಿಗೆ ಮಕ್ಕಳೆಂದರೆ ಪ್ರಾಣ ಮತ್ತು ಇವರು ರೂಪವಂತರು.

ಮೆಚ್ಚುಗೆಯಿಂದ 'ಹೌದೆ?' ಎಂದುಕೊಳ್ಳುತ್ತಾಳೆ ಮಹಿಳೆ. ಆದರೂ ಮುಂದಿನ ಮಹಡಿಯಲ್ಲಿ ಇದಕ್ಕಿಂತಲೂ ಉತ್ತಮವಾದ ಪುರುಷರು ಇರಬಹದೆನಿಸಿ ಮುನ್ನಡೆಯುತ್ತಾಳೆ. ಅಲ್ಲಿನ ಸೂಚನಾ ಫಲಕವನ್ನು ಓದುತ್ತಾಳೆ.

ಮಹಡಿ 4: ಈ ಪುರುಷರು ಉತ್ತಮ ಸಂಬಳ ಸಿಗುವ ಕಲಸಗಳನ್ನು ಹೊಂದಿದ್ದಾರೆ, ಇವರಿಗೆ ಮಕ್ಕಳೆಂದರೆ ಪ್ರಾಣ, ಇವರು ರೂಪವಂತರು ಮತ್ತು ಮನೆಗೆಲಸದಲ್ಲಿ ಹೆಂಡತಿಯ ಸಹಾಯಮಾಡುವಂಥವರು.

ಆ ಮಹಿಳೆಗೆ ತುಂಬಾ ಖುಷಿಯಾಗುತ್ತದೆ. ಇಷ್ಟು ಸಾಕಾಗಬಹುದಲ್ಲವೆಂದುಕೊಂಡರೂ ಅವಳ ಮಸನ್ನು ಅವಳನ್ನು ಐದನೇ ಮಹಡಿಗೆ ಕರೆತರುತ್ತದೆ.

ಮಹಡಿ 5: ಈ ಪುರುಷರು ಉತ್ತಮ ಸಂಬಳ ಸಿಗುವ ಕಲಸಗಳನ್ನು ಹೊಂದಿದ್ದಾರೆ, ಇವರಿಗೆ ಮಕ್ಕಳೆಂದರೆ ಪ್ರಾಣ, ಇವರು ರೂಪವಂತರು, ಮನೆಗೆಲಸದಲ್ಲಿ ಹೆಂಡತಿಯ ಸಹಾಯಮಾಡುವಂಥವರು ಮತ್ತು ಪ್ರಣಯ ನಿಪುಣರು.

ಮುಂದಿನ ಮಹಡಿಗೆ ಹೋಗುವ ಅವಶ್ಯಕತೆಯಿಲ್ಲ, ಈ ಮಹಡಿಯಿಂದಲೇ ಗಂಡನನ್ನು ಆಯ್ಕೆಮಾಡಿಕೊಂಡರಾಯಿತು ಅಂದುಕೊಂಡಳಾದರೂ ಆ ಮಹಿಳೆ ಕೊನೆಯ ಮಹಡಿಯಲ್ಲಿ ಇದಕ್ಕೂ ಶ್ರೇಷ್ಠರಾದ ಪುರುಷರಿರಬಹುದೆಂದುಕೊಂಡು ಮುನ್ನಡದೇಬಿಡುತ್ತಾಳೆ. ಅಲ್ಲಿ ಹೀಗೆ ಬರೆದಿರುತ್ತದೆ.

ಮಹಡಿ 6: ಇಲ್ಲಿಗೆ ಭೇಟಿಕೊಟ್ಟವರಲ್ಲಿ ನೀವು 34, 56,012 ನೇಯವರು.
ಇಲ್ಲಿ ಯಾವ ಪುರುಷರೂ ಮಾರಾಟಕ್ಕಿಲ್ಲ.
ಸ್ತ್ರೀಯರ ನಿರೀಕ್ಷೆ ಮತ್ತು ಆಸೆಗಳನ್ನುಗಳನ್ನು ತೃಪ್ತಿಪಡಿಸಲು ಸಾಧ್ಯವಿಲ್ಲವೆಂಬ ಸತ್ಯವನ್ನು ಪ್ರಮಾಣಿಸಿ ತೋರಿಸುವುದೇ ಈ ಮಹಡಿಯ ಅಸ್ತಿತ್ವದ ಏಕಮಾತ್ರ ಉದ್ದೇಶ.
ನಮ್ಮ ಮಳಿಗೆಗೆ ಭೇಟಿಕೊಟ್ಟಿದ್ದಕ್ಕೆ ಧನ್ಯವಾದಗಳು
.

ಇಷ್ಟಾದ ಮೇಲೆ 'ಪುರುಷ ಪಕ್ಷಪಾತಿ' ಎಂಬ ಕಳಂಕ ಬರದಿರಲೆಂದು ಆ ಮಾರಾಟ ಮಳಿಗೆಯ ಯಜಮಾನ ಅದರ ಪಕ್ಕದಲ್ಲೇ ಇನ್ನೊಂದು ಮಳಿಗೆಯನ್ನು ತೆರೆಯುತ್ತಾನೆ. ಅದಕ್ಕೆ The Great Wife Store ಎಂದು ಹೆಸರಿಡುತ್ತಾನೆ.

ಮೊದಲನೇ ಮಹಡಿಯಲ್ಲಿ ತುಂಬು ಸ್ತನಗಳನ್ನು ಹೊಂದಿದ ಸ್ತ್ರೀಯರಿರುತ್ತಾರೆ.
ಎರಡನೇ ಮಹಡಿಯಲ್ಲಿ ತುಂಬು ಸ್ತನಗಳನ್ನು ಹೊಂದಿದ ಮತ್ತು ಪ್ರಣಯಕೇಳಿಯಲ್ಲಿ ಆಸಕ್ತಿಯಿರುವ ಸ್ತ್ರೀಯರಿರುತ್ತಾರೆ.
ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಮಹಡಿಗಳಿಗೆ ಯಾವ ಪುರುಷರೂ ಭೇಟಿಕೊಡುವುದೇ ಇಲ್ಲ.

  
ಈ ಲೇಖನ ಹೇಗಿತ್ತು?

14 comments:

Unknown said...

ಹ್ಹ ಹ್ಹ ಹ್ಹ :-) ಸೂಪರ್ :-)

JOHN_SMITH said...

gr8 gurooo. nijavaagaloo satya ... nagu baruttadaadaroo satya vannu oppalE bEkaaguttade....

Anonymous said...

nice joke

sskasha said...

ತುಂಬಾ ಚೆನ್ನಾಗಿದೆ, ಆದರೆ ಪದ್ಮಿನಿಯವರೇ ಇದೇ ತರಹದ ಚೀನಿಯರದೋ ಅಥವಾ ಇಂಗ್ಲೀಷರದೋ ಒಂದು ಕಥೆ ಓದಿದ್ದ ನೆನಪು. ಅದು ಆಧ್ಯಾತ್ಮಕ್ಕೆ ಸಂಬಂಧಿಸಿದ್ದು ಅಂತ ಅನ್ಸುತ್ತೆ, ಏನೇ ಇರಲಿ, ಕಲ್ಪನೆ ಚೆನ್ನಾಗಿದೆ.

Sushant Mobile Photography said...

super madam

Anonymous said...

Henmanassina kannadi :)

ಕಿಟ್ಟಿ said...

ಪದ್ಮಿನಿಯವರೇ, ದಿ ಗ್ರೇಟ್ ವೈಫ್ ಸ್ಟೋರ್ ಗೆ ಭೇಟಿ ನೀಡುವ ಅವಕಾಶ ನಮಗೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸುತ್ತೆದೆ.

Unknown said...

super

Niranjan said...

super madam

Niranjan said...

super madam

harish said...

Super .

Anonymous said...

Super

Abacus said...

Morveless story keep itup

shrungara said...

Shrungara blog has been moved to shrungaara.blogspot.com. Please note the change and encourage as usual

Post a Comment