ಸ್ನೇಹಿತರೆ,
ಸುಮಾರು ಐದು ತಿಂಗಳ ನಂತರ ಹೊಸ ಲೇಖನವೊಂದನ್ನು ಪ್ರಕಟಿಸುತ್ತಿದ್ದೇನೆ. ಇಷ್ಟು ದೀರ್ಘವಾದ ಮೌನಕ್ಕೆ ಕಾರಣವೇನೆಂದು ಈ ಕೂಡಲೇ ವಿವರಿಸಲಾರೆ. ಜೀವನದಲ್ಲಿ ಹಠ್ಠಾತ್ತಾಗಿ ಕೆಲವೊಮ್ಮೆ ಸಮಸ್ಯೆಗಳು ಎದುರಾಗುತ್ತವೆ. ಅಂಥದೇ ಸಮಸ್ಯೆಯೊಂದರ ಸುಳಿಯಲ್ಲಿ ನಾನು ಸಿಲುಕಿದ್ದೆ. ನಾನಿಲ್ಲದೆ ನನ್ನ ಸ್ನೇಹಿತ ಮಧುಚಂದ್ರನಿಗೆ ಪ್ರಣಯಪದ್ಮಿನಿಯನ್ನು ಮುನ್ನಡೆಸುವುದು ಇಷ್ಟವಿರಲಿಲ್ಲ. ಆದರೂ ಆತ ಪ್ರಣಯಪದ್ಮಿನಿ ಮತ್ತು ಅದರ Yahoo! ಬಳಗದ ಕಡೆಗೆ ಗಮನವಿಟ್ಟಿದ್ದು ನನಗೆ ಸಮಾಧಾನದ ಸಂಗತಿ.
ಸರಿ, ಈಗ ನಿಮ್ಮೊಂದಿಗೆ ಒಂದು ವಿಷಯವನ್ನು ಪ್ರಸ್ತಾಪಿಸಬೇಕಿದೆ. ನಾನು ಮೂಲತಃ ಬಿಜಾಪುರ ಜೆಲ್ಲೆಯವಳು. ಉತ್ತರ ಕರ್ನಾಟಕದ ಕನ್ನಡದ ಸೊಗಡನ್ನು ಮೊದಲಿನಿಂದಲೂ ಅರಿತವಳು. ಆ ಕನ್ನಡದಲ್ಲಿ ನಾನು ಶೃಂಗಾರ ಕಥೆಗಳನ್ನು ಬರೆಯಬೇಕೆಂದು ಅಂದುಕೊಳ್ಳುತ್ತಲೇ ಬಂದಿದ್ದೇನೆ. ಆದರೆ ಅದು ನನ್ನಿಂದ ಸಾಧ್ಯವಾಗಲೇ ಇಲ್ಲ. ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಅಂಥ ಒಂದು ಲೇಖನವನ್ನು ಬರೆದು ನನಗೆ ಈಮೇಲ್ ಮಾಡಿದ್ದರು. ಸ್ವಲ್ಪ ಅಶ್ಲೀಲವೆನಿಸಿದರೂ ನನಗದು ಇಷ್ಟವಾಯಿತು. ನಾನು ಆ ಲೇಖನವನ್ನು ಪ್ರಣಯಪದ್ಮಿನಿಯಲ್ಲಿ ಪ್ರಕಟಿಸಲು ಅವರ ಅನುಮತಿಯನ್ನು ಕೇಳಿದೆ. ತಮ್ಮ ಹೆಸರನ್ನು ಮಾತ್ರ ಪ್ರಕಟಿಸಬಾರದೆಂಬ ಕರಾರಿನ ಮೇಲೆ ಅವರು ಒಪ್ಪಿದರು. ಆದರೆ ಲೇಖನವೊಂದಕ್ಕೆ ಲೇಖಕನ ಗುರುತು ಇರದಿದ್ದರೆ ಹೇಗೆ? ಒಂದು ಕಲ್ಪಿತನಾಮವನ್ನಾದರೂ ಸೂಚಿಸಬಹುದಲ್ಲ?
ನೀವು ಈ ಮೊದಲ ಭಾಗವನ್ನು ಓದಿನೋಡಿ. ನಿಮಗೆ ಹಿಡಿಸಿದರೆ ಈ ತರಹದ ಲೇಖನಗಳನ್ನು ಮುಂದುವರಿಸೋಣ.
~ಪದ್ಮಿನಿ
----------------------------------------------------------------------------
ಲೇಖನ: ಅನಂಗ
ಮದಿವ್ಯಾಗಿ ಇನ್ನೂ ಎರ್ಡ ತಿಂಗಳ ಆಗಿದ್ದಿಲ್ಲಾ. ನನ್ನ ಹೆಂಡ್ತಿ ಕವಿತಾ ತನ್ನ ಅಕ್ಕನ ಕುಬುಸಕ್ಕಂತ ತವರಮನೀಗೆ ಹೋಗಿಬಿಟ್ಟಿದ್ಳು. ಅಕೀ ಹೋಗಿದ್ದು ಐದೇ ದಿನಕ್ಕಂತಾದ್ರೂ ನನ್ನ ಜೀವಾ ಅಕಿ ಇಲ್ಲದ್ದಕ್ಕ ಚಡಪಡಸಲಿಕ್ಕೆ ಹತ್ತಿತ್ತು ನೋಡ್ರಿ. ಅಂಥಾ ರುಚೀನs ತೋರಿಸಿದ್ದಳ್ರಿ ಹುಡುಗಿ. ಅಷ್ಟ ರುಚೀನs ಇತ್ತ್ರಿ ಅಕಿಗೂಡ ಇರೂದಂದ್ರ. ಅಕೀಗೆ ಇಪ್ಪತ್ತೊಂದರ ಹರೆ, ನನಗ ನಾಲ್ಕ ವರ್ಷ ಹೆಚ್ಚ ಅಷ್ಟs. ಮನ್ಯಾಗ ನಾವs ಇಬ್ರ ಇರಾವ್ರು, ಹೇಳಾವ್ರಿಲ್ಲ, ಕೇಳಾವ್ರಿಲ್ಲ. ಆಡಿದ್ದs ಆಟ, ಮಾಡಿದ್ದs ಊಟ. ಈ ಎರ್ಡ ತಿಂಗಳು ಹೆಂಗ ಹೋದು ಅಂತಾನs ಗೊತ್ತಾಗಲಿಲ್ಲ್ರಿ.
ಎರ್ಡ ವಾರದ ಹಿಂದ ಕವಿತಾಗ ಅವಳ ಗೆಳತಿ ಜ್ಯೋತಿ ಭೆಟ್ಟ್ಯಾಗಿದ್ದಳಂತ. ಏನs ಕವಿತೀ, ಹೆಂಗ ನಡದsದ ಹೊಸಾ ಸಂಸಾರ? ಅಂತ ಇಕೀನ ಗಲ್ಲಾ ಚಿಂವಟಿ ಮಾತಾಡಿಸಿದ್ದಳಂತ. ನಿನ್ನ ಮದಿವ್ಯಾಗ ನಾ ಒಂದ ಸೀರಿ ಕೊಟ್ಟಿದ್ದೆ, ಅದನ್ನ ಉಟುಗೊಂಡು ನೋಡಿದ್ಯೇನ? ಅಂತೂ ಕೇಳಿದಳಂತ. ಅದಕ್ಕ ಇವಳು, 'ಹದಿನೈದ ದಿನಾ ಆತು ನನ್ನ ಗಂಡ ನನಗ ಚಡ್ಡಿ ಹಕ್ಕೋಳ್ಳಿಕ್ಕ ಬಿಟ್ಟಿಲ್ಲಾ, ನಿನ್ನ ಸೀರಿ ಯಾವಾಗ ಉಡೂದು?' ಅಂತ ಅಂದಳಂತ. ಅದನ್ನ ಕೇಳಿ ಜ್ಯೋತಿ ಸಾಯೂಹಂಗ ನಕ್ಕಳಂತ. ಇದನ್ನ ಕೇಳಿ ನಾನು ಕವಿತಾನ ತೊಡೀಮ್ಯಾಲೆ ಎಳದ ಕೂಡಿಸಿಕೊಂಡು ಹುಚ್ಚು ಹಿಡಿದಹಂಗ ಹಟ್ಟಿದ್ದೆ ನೋಡ್ರಿ. ಹುಡುಗೀನs ಹಂಗ ಇದ್ದಾಳ್ರೀ. ಹುಚ್ಚs ಹಿಡಸ್ತಾಳ.
ಕವಿತಾ ಮನ್ಯಾಗಿಲ್ದ ನನಗೂ ಏನೇನೋ ವಿಚಾರ ಬರಲಿಕ್ಕೆ ಹತ್ತಿದ್ವು. ಅಕಿ ತವರಮನೀಗೆ ಹೋಗಿ ನಾಲ್ಕ ದಿನಾ ಆಗಿತ್ತು. ಇನ್ನೊಂದ ದಿನಾ ಕಾಯ್ದರ ಆಯ್ತಲ್ಲ ಆಕಿ ಬಂದsಬಿಡ್ತಾಳ ಅಂತ ಎಷ್ಟ ನನಗ ನಾನs ಹೇಳಕೊಂಡ್ರೂ ಸಮಾಧಾನಾನs ಆಗಲಿಲ್ಲ. ಅಂದ ಮುಂಜಾನೇನs ಅಕಿಗಿ ಫೋನ್ ಮಾಡಿ, 'ಕವಿ, ನೀನೀವತ್ತ ಸಂಜೀಕೆ ತಯಾರಾಗಿರು. ನಾ ಸವದತ್ತಿಗೆ ಬಂದು ಕರ್ಕೊಂಡ ಬರ್ತೀನಿ' ಅಂದಿದ್ದೆ. ಅವಳು ಹಠಾ ಮಾಡಿ ಇನ್ನೊಂದಿನ ಅಲ್ಲೇ ಇರತೀನಿ ಅಂತಾಳ ಅಂದ್ಕೊಂಡಿದ್ರ ಹಂಗಾಗಲಿಲ್ಲ. ಅವಳು ಒಪ್ಪಿದ್ಳು. ಆದ್ರ ಮಾತು ಫೋನ್ನ್ಯಾಗ ಆಗಿ ಹೋಗಿತ್ತು. ಖರೆ ಅಕಿ ಮನಸನ್ಯಾಗ ಇನ್ನೊಂದಿನ ಅಲ್ಲೇ ಕಳೀಬೇಕು ಅಂತ ಇದ್ದಿರಬಹುದಿತ್ತು. ಅಂತೂ ಮಾವನ ಮನೀಗೆ ನಾನು ಹೊಂಟನಿಂತಿದ್ದೆ. ಧಾರವಾಡದಿಂದ ಸವದತ್ತಿ ಒಂತಾಸಿನ ಹಾದಿ. ಸವದತ್ತಿ ಬಸ್ಸ್ಟ್ಯಾಂಡಿನ್ಯಾಗ ಬಸ್ ಹೋಗಿ ನಿಂತದ್ದs ತಡಾ, ನಾನು ಕೆಳಗ ಜಿಗದು ಒಂದು ಆಟೋ ಹಿಡಕೊಂಡ ಹತ್ತ ನಿಮಿಷದಾಗ ಮಾವನ ಮನ್ಯಾಗs ಇದ್ದೆ.
ಲಗ್ನ ಆದಮ್ಯಾಲ ಇದು ಮೊದಲ ಸಲ ಮಾವನ ಮನೀ ಭೆಟ್ಟಿ. ಎಲ್ಲಾರೂ ಭಾಳ ಆದ್ರಾ ಮಾಡಿದ್ರು. ತಿನಿಸಿದ್ರು, ಕುಡಿಸಿದ್ರು. ಆದ್ರ ನನ್ನ ಚಿತ್ತ ಕವಿತಾನ ಸುತ್ತನs ಇತ್ತು. ತಿಂಗಳಾನಗಟ್ಟಲೇ ಅಕಿನ ಬಿಟ್ಟಿದ್ದೀನೇನೋ ಅನಿಸಿಬಿಟ್ಟಿತ್ತು. ಅಕಿ ನನ್ನ ಹತ್ರ ಬಂದು ಮಾತಾಡ್ಸಿದ್ರ ಮೈಯೆಲ್ಲ ಬಿಸಿಯೇರಿದಂಗ ಆಗಿತ್ತು. ಅಕಿ ಅಂದಾನs ಅಂಥಾದ್ದು, ನನ್ನ ಗೆಳ್ಯಾರೆಲ್ಲಾರೂ ಏನ ಛಂದ ಇದ್ದಾಳೋ ಮಾರಾಯಾ ನಿನ್ನ ಹೆಂಡ್ತಿ... ಪುಣ್ಯಾ ಮಾಡೀ ನೋಡಪಾ ನೀ ಅಂತ ಸಂಕಟಾ ಮಾಡ್ಕೊಂಡು ಹೇಳಿದ್ರ ನನಗ ಸಿಕ್ಕಾಪಟ್ಟಿ ಖುಷಿಯಾಗೂದು.
ಮುಂದುವರಿಯುವುದು...
Sunday, January 10, 2010
Subscribe to:
Post Comments (Atom)
4 comments:
ok its sexe
ಹೆಲೋ ಪದ್ಮಿನಿ
ನಿಮಗೂ ಮತ್ತೆ ಸ್ವಾಗತ... ಕನ್ನಡ ಶೃಂಗಾರ ಸಾಹಿತ್ಯ ಲೋಕ ನೀವಿಲ್ಲದೆ ಬಣಗುಡುತಿತ್ತು!
ನೀವೂ ಬರೆಯಿರಿ ನಾನು ಬರೆದದ್ದನ್ನು ಮತ್ತೊಮ್ಮೆ..ಓದಿ ನೋಡ್ರೆಲಾ?
~ಶೃಂಗಾರ!
ಭಾಳ ಸೆಕ್ಸಿಯಾಗೈತಿ ನೋಡ್ರಿ ಮತ್ತ...ಇನ್ನು ಜಾಸ್ತಿ ಬರೀರಲ್ಲ...
allari madveyagi varadu chaddiyake akilvante.
olle utarabarali.
Post a Comment