ಲೇಖನ: madhuಚಂದ್ರ
ಆಧಾರ: ವಾತ್ಸಾಯನರ ಕಾಮಸೂತ್ರ, ಕಲ್ಯಾಣಮಲ್ಲನ ಅನಂಗರಂಗ, ಅಂತರ್ಜಾಲ ಮತ್ತು ಕೆಲವು ಕಾಮಶಾಸ್ತ್ರದ ಟಿಪ್ಪಣಿಗಳು
ಪದ್ಮಿನಿ ಮತ್ತು ಚಿತ್ತಿನಿ ಸ್ತ್ರೀಯರ ಬಗ್ಗೆ ಹಿಂದಿನ ಅಂಕಣಗಳಲ್ಲಿ ಓದಿದ್ದೇವೆ. ಈಗ ಶಂಖಿನಿ ಮತ್ತು ಹಸ್ತಿನಿ ಸ್ತ್ರೀಯರ ಬಗ್ಗೆ ತಿಳಿಯೋಣ.
ಶಂಖಿನಿ
ಶಂಖಿನಿ ಸಾಮಾನ್ಯವಾಗಿ ಕಂದು ಅಥವ ಮಣ್ಣಿನ ಮೈಬಣ್ಣದ ಬಿಸಿದೇಹದ ಹೆಣ್ಣು. ಇವಳದು ದೊಡ್ಡ ಗಾತ್ರದ ದೇಹ, ಅವಳ ಸೊಂಟವು ಕೂಡ ದೊಡ್ಡದೇ. ಆದರೆ ದೊಡ್ಡ ದೇಹದ ಈ ಹೆಣ್ಣಿನ ಸ್ತನಗಳು ಮಾತ್ರ ಚಿಕ್ಕವು. ಅವಳ ಕೈ ಮತ್ತು ಪಾದಗಳು ಉದ್ದವಾಗಿರುತ್ತವೆ. ಅವಳ ಯೋನಿ ಯಾವತ್ತೂ ಒದ್ದೆಯಾಗಿರುತ್ತದಲ್ಲದೇ ಅದರ ದ್ರವ ಉಪ್ಪಿನ ರುಚಿಯಂತಿರುತ್ತದೆ. ಅವಳ ಯೋನಿಕಣಿವೆಯ ಸುತ್ತಲೂ ಕೂದಲು ತುಂಬಾ ದಟ್ಟವಾಗಿ ಬೆಳೆಯುತ್ತದೆ. ಅವಳ ಧ್ವನಿ ಒಡಕು ಅಥವ ಕರ್ಕಶ ಮತ್ತು ಅವಳ ನಡಿಗೆ ಆತುರ ಅಥವ ಅವಸರವನ್ನು ತೋರುತ್ತದೆ. ಎಲ್ಲ ಸ್ತ್ರೀಯರಂತೆ ಇವಳಿಗೂ ಬಟ್ಟೆ, ಹೂವು ಮತ್ತು ಆಭರಣಗಳೆಂದರೆ ಇಷ್ಟ.
ಶಂಖಿನಿ ಸ್ತ್ರೀಗೆ ಕಾಮೋನ್ಮಾದದ ಯಾವ ಘಳಿಗೆಯಲ್ಲಾದರೂ ಉಂಟಾಗಬಲ್ಲದು. ಸಮಯ ಮತ್ತು ಸಂದರ್ಭಗಳ ಪರಿವೆಯಿಲ್ಲದೇ ಕಾಮಾವೇಶಕ್ಕೆ ತುತ್ತಾಗುವ ಇವಳು ಎಷ್ಟೋ ಸಲ ದಿಗಿಲುಗೊಳ್ಳುತ್ತಾಳೆ ಅಥವ ಗೊಂದಲಕ್ಕೀಡಾಗುವುದುಂಟು. ಇವಳೊಂದಿಗೆ ರತಿಕ್ರೀಡೆಯನ್ನು ನಡೆಸುವ ಪುರುಷ ಇವಳ ಆವೇಶದ ಸುಳಿಯಲ್ಲಿ ಸಿಕ್ಕು ಇವಳ ಉಗುರುಗಳಿಂದ ಗಾಯಗೊಳ್ಳುವುದು ಸಾಮಾನ್ಯ.
ಶಂಖಿನಿ ಸ್ತ್ರೀ ಒಬ್ಬ ಮುಂಗೋಪಿ ಹೆಣ್ಣು, ಕಟು ಹೃದಯಿ, ಹಠಮಾರಿ, ಅವಿನಿಯಿ ಮತ್ತು ಯಾವತ್ತು ಇತರರಲ್ಲಿ ತಪ್ಪುಗಳನ್ನು ಹುಡುಕುವ ಪ್ರವೃತ್ತಿಯವಳು.
ಹಸ್ತಿನಿ
ಹಸ್ತಿನಿಯದು ಕುಬ್ಜ ನಿಲುವು, ಇವಳ ದೇಹದ ಎತ್ತರ ಕಡಿಮೆ. ಸ್ವಲ್ಪ ಒರಟೆನಿಸುವ ದಪ್ಪದಾದ ದೇಹ, ತಿಳಿ ಕಂದು ಬಣ್ಣದ ಕೂದಲು ಮತ್ತು ಬೆಳ್ಳಗಿನ ಮೈಬಣ್ಣ. ಅವಳ ಕತ್ತು ನೇರವಾಗಿರದೇ ಮಣಿದಂತಿದ್ದು ಅವಳ ಧ್ವನಿ ಕರ್ಕಶವಾಗಿ, ಗಂಟಲಲ್ಲೇ ಸಿಕ್ಕಿಹಾಕಿಕೊಂಡಂತೆ ಕೇಳುತ್ತದೆ. ಹಸ್ತಿನಿಯ ನಡಿಗೆ ಜೋಲುಬಿದ್ದಂತೆ ನಿಧಾನ ಮತ್ತು ಅವಲಕ್ಷಣವಾಗಿರುತ್ತದೆ. ಅವಳ ಕಾಲ್ಬೆರಳುಗಳು ವಕ್ರವಾಗಿರುವ ಸಾಧ್ಯತೆಗಳು ಇವೆ.
ರತಿಕ್ರೀಡೆಯ ಸಮಯದಲ್ಲೂ ಹಸ್ತಿನಿಯದು ತುಂಬಾ ಆಲಸ್ಯದ ವರ್ತನೆ. ಬಲು ದೀರ್ಘವಾದ ಸಂಭೋಗದಿಂದ ಮಾತ್ರ ಅವಳಿಗೆ ತೃಪ್ತಿ ಸಿಗಲು ಸಾಧ್ಯ. ಆದರೆ ಎಷ್ಟು ಸಂಭೋಗ ನಡೆಸಿದರೂ ಅವಳಿಗೆ ನಿಜವಾದ ತೃಪ್ತಿ ಸಿಗುವುದೇ ಇಲ್ಲ. ಹಸ್ತಿನಿಯದು ಹೊಟ್ಟೆಬಾಕತನ, ಎಷ್ಟು ತಿಂದರೂ ಮತ್ತೆ ತಿನ್ನುತ್ತಾಳೆ. ಅವಳದು ಮುಂಗೋಪದ ಸ್ವಭಾವ.
ನಾಲ್ಕು ಜಾತಿಯ ಸ್ತ್ರೀಯರ ಬಗ್ಗೆ ತಿಳಿದಾಯಿತು. ಇನ್ನು ಮುಂದೆ ಯಾವ ದಿನಗಳಲ್ಲಿ ಯಾವ ಜಾತಿಯ ಸ್ತ್ರೀಗೆ ರತಿಕ್ರೀಡೆಯಿಂದ ಹೆಚ್ಚು ತೃಪ್ತಿ ಸಿಗುತ್ತದೋ ಎಂಬುದನ್ನು ನೋಡೋಣ. ನಮ್ಮ ಪುರಾತನ ಕಾಮಶಾಸ್ತ್ರವು ಈ ಅಂಶವನ್ನು ಒತ್ತಿ ಹೇಳಿದೆ. ಎಲ್ಲ ದಿನಗಳೂ ಸಂಭೋಗಕ್ಕೆ ಪಕ್ವವಾಗಿರುವುದಿಲ್ಲ. ನಮ್ಮ ಭಾರತೀಯ ಪಂಚಾಗದ ಪ್ರಕಾರ ಒಂದು ತಿಂಗಳೆಂದರೆ ಎರಡು ಪಕ್ಷಗಳು. ಒಂದು ಪಕ್ಷವೆಂದರೆ ಹದಿನೈದು ದಿನಗಳ ಅವಧಿ. ಒಂದು ಪಕ್ಷದ ಕೊನೆಗೆ ಹುಣ್ಣಿಮೆಯಿದ್ದರೆ ಇನ್ನೊಂದರೆ ಕೊನೆಗೆ ಅಮಾವಾಸ್ಯೆ ಇರುತ್ತದೆ. ಇದು ನಿಮಗೂ ಗೊತ್ತಿರುವ ವಿಷಯ.
ಪ್ರತಿಪದ, ದ್ವಿತಿಯ, ಚತುರ್ಥಿ ಮತ್ತು ಪಂಚಮಿ (ಅಂದರೆ, ಒಂದು, ಎರಡು, ನಾಲ್ಕು ಮತ್ತು ಐದು) ಈ ದಿನಗಳಲ್ಲಿ ನಡೆಸಿದ ಸಂಭೋಗದಿಂದ ಪದ್ಮಿನಿ ಜಾತಿಯ ಸ್ತ್ರೀಗೆ ಸಂಪೂರ್ಣವಾದ ತೃಪ್ತಿ ಸಿಗುವ ಸಾಧ್ಯತೆಗಳುಂಟು.
ಷಷ್ಠಿ, ಅಷ್ಟಮಿ, ದಶಮಿ ಮತ್ತು ದ್ವಾದಶಿ (ಅಂದರೆ, ಆರು, ಎಂಟು, ಹತ್ತು ಮತ್ತು ಹನ್ನೆರಡು) ಈ ದಿನಗಳಲ್ಲಿ ನಡೆಸಿದ ಸಂಭೋಗದಿಂದ ಚಿತ್ತಿನಿ ಜಾತಿಯ ಸ್ತ್ರೀಗೆ ಸಂಪೂರ್ಣವಾದ ತೃಪ್ತಿ ಸಿಗುವ ಸಾಧ್ಯತೆಗಳುಂಟು.
ತೃತಿಯ, ಸಪ್ತಮಿ, ಏಕಾದಶಿ ಮತ್ತು ತ್ರಯೋದಶಿ (ಅಂದರೆ, ಮೂರು, ಏಳು, ಹನ್ನೋಂದು ಮತ್ತು ಹದಿಮೂರು) ಈ ದಿನಗಳಲ್ಲಿ ನಡೆಸಿದ ಸಂಭೋಗದಿಂದ ಶಂಖಿನಿ ಜಾತಿಯ ಸ್ತ್ರೀಗೆ ಸಂಪೂರ್ಣವಾದ ತೃಪ್ತಿ ಸಿಗುವ ಸಾಧ್ಯತೆಗಳುಂಟು.
ನವಮಿ, ಚತುರ್ದಶಿ, ಪೂರ್ಣಿಮೆ ಮತ್ತು ಅಮಾವಾಸ್ಯೆ (ಅಂದರೆ, ಒಂಭತ್ತು, ಹದಿನಾಲ್ಕು, ಪೂರ್ಣಿಮೆ ಮತ್ತು ಅಮಾವಾಸ್ಯೆ) ಈ ದಿನಗಳಲ್ಲಿ ನಡೆಸಿದ ಸಂಭೋಗದಿಂದ ಹಸ್ತಿನಿ ಜಾತಿಯ ಸ್ತ್ರೀಗೆ ಸಂಪೂರ್ಣವಾದ ತೃಪ್ತಿ ಸಿಗುವ ಸಾಧ್ಯತೆಗಳುಂಟು.
ಇದಲ್ಲದೇ ದಿನದ ಯಾವ ಸಮಯದಲ್ಲಿ ಈ ಸ್ತ್ರೀಯರು ಸಂಭೋಗದಿಂದ ಹೆಚ್ಚು ತೃಪ್ತಿಯನ್ನು ಅನುಭವಿಸುತ್ತಾರೆ ಎಂಬುದನ್ನೂ ವಿವರಿಸಲಾಗಿದೆ. ಪದ್ಮಿನಿ ಜಾತಿಯ ಸ್ತ್ರೀಯು ರಾತ್ರಿಯಲ್ಲಿ ನಡೆಯುವ ಕಾಮಕ್ರೀಡೆಗೆ ಉತ್ತಮವಾಗಿ ಪ್ರತಿಕ್ರಿಯಿಸುವುದಿಲ್ಲ. ಅಷ್ಟೇ ಅಲ್ಲ, ರಾತ್ರಿ ಸಮಯದ ಸಂಭೋಗದಿಂದ ಅವಳಿಗೆ ಹಿಂಸೆಯಾಗುವ ಸಾಧ್ಯತೆಯೂ ಇದೆ. ಪದ್ಮಿನಿ ಜಾತಿಯ ಸ್ತ್ರೀಯನ್ನು ಸೂರ್ಯಕಮಲವೆಂದು ಕರೆಯಲಾಗುತ್ತದೆ, ಅಂದರೆ ಸೂರ್ಯನ ಕಿರಣಗಳಿಗೆ ಅರಳುವ ಹೂವು ಅಥವ ಸೂರ್ಯನ ಬೆಳಕಿನ ಅವಧಿಯಲ್ಲಿ ಉತ್ತಮವಾಗಿ ಪ್ರತಿಕ್ರಿಯಿಸುವ ಸ್ತ್ರೀ ಎಂದರ್ಥ. ಇದು ಸಾಂಕೇತಿಕ ವಿಚಾರವಷ್ಟೇ. ಸೂರ್ಯನ ಬೆಳಕು ಎಂದುಕೊಂಡು ಮನೆಯ ಹೊರಗಿನ ಬಿಸಿಲಿನಲ್ಲಿ ಹಾಸಿಗೆ ಹಾಸುವ ಅವಶ್ಯಕತೆಯಿರುವುದಿಲ್ಲ. ಪಕ್ವ ಸಮಯದಲ್ಲಿ ಪದ್ಮಿನಿಯನ್ನು ರತಿಕ್ರೀಡೆಗೆ ಅಹ್ವಾನಿಸುವ ಯಾವುದೇ ಪುರುಷ, ಅವನು ಹದಿನಾರರ ತರುಣನೇ ಆಗಿರಲಿ, ಅವಳನ್ನು ತೃಪ್ತಿಪಡಿಸಬಲ್ಲ. ಚಿತ್ತಿನಿ ಮತ್ತು ಶಂಖಿನಿ ಸ್ತ್ರೀಯರು ಚಂದ್ರಕಮಲವಿದ್ದಂತೆ, ಅಂದರೆ ಚಂದ್ರನ ಬೆಳಕಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ. ಒರಟು ದೇಹದ ಹಸ್ತಿನಿಗೆ ಮಾತ್ರ ಈ ಸಮಯದ ಸೂಕ್ಷ್ಮತೆಗಳ ಹಂಗಿಲ್ಲ.
ಪ್ರಣಯಕ್ರೀಡೆಗೆ ಪಕ್ವವೆನಿಸುವ ಸಮಯವನ್ನು ಹಗಲು ಮತ್ತು ರಾತ್ರಿಯ ನಾಲ್ಕು ಪ್ರತ್ಯೇಕ ಪ್ರಹರಗಳನಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಪ್ರಹರ ಜೊತೆಗೆ ಅದು ಯಾವ ಜಾತಿಯ ಸ್ತ್ರೀಗೆ ಸೂಕ್ತ ಎಂಬುದನ್ನೂ ತೋರಿಸಲಾಗಿದೆ.
ದಿನದ ಒಂದನೆಯ ಪ್ರಹರ: 6 a.m. - 9 a.m. ಪದ್ಮಿನಿ
ದಿನದ ಎರಡನೆಯ ಪ್ರಹರ: 9 a.m.-12 p.m. ಪದ್ಮಿನಿ
ದಿನದ ಮೂರನೆಯ ಪ್ರಹರ: 12 p.m. - 3 p.m. ಪದ್ಮಿನಿ ಮತ್ತು ಹಸ್ತಿನಿ
ದಿನದ ನಾಲ್ಕನೆಯ ಪ್ರಹರ: 3 p.m. - 6 p.m. ಪದ್ಮಿನಿ ಮತ್ತು ಹಸ್ತಿನಿ
ರಾತ್ರಿಯ ಒಂದನೆಯ ಪ್ರಹರ: 6 p.m - 9 p.m. ಚಿತ್ತಿನಿ ಮತ್ತು ಹಸ್ತಿನಿ
ರಾತ್ರಿಯ ಎರಡನೆಯ ಪ್ರಹರ: 9 p.m. - 12 a.m. ಹಸ್ತಿನಿ
ರಾತ್ರಿಯ ಮೂರನೆಯ ಪ್ರಹರ: 12 a.m. - 3 a.m. ಶಂಖಿನಿ ಮತ್ತು ಹಸ್ತಿನಿ
ರಾತ್ರಿಯ ನಾಲ್ಕನೆಯ ಪ್ರಹರ: 3 a.m. - 6 a.m. ಪದ್ಮಿನಿ ಮತ್ತು ಹಸ್ತಿನಿ
ಇಪ್ಪತ್ತುನಾಲ್ಕು ಘಂಟೆಗಳ ಒಂದು ಆವರ್ತನದಲ್ಲಿ ಮೂರು ಘಂಟೆಗಳ ಅವಧಿಯ ಒಟ್ಟು ಎಂಟು ಪ್ರಹರಗಳಿವೆ. ಬೆಳಗಿನ ಜಾವದ ಮೂರು ಘಂಟೆಯಿಂದ ಸಂಜೆಯ ಆರು ಘಂಟೆಯವರೆಗೆ ಹಗಲಾದರೆ, ಸಂಜೆಯ ಆರು ಘಂಟೆಯಿಂದ ಬೆಳಗಿನ ಜಾವದ ಮೂರು ಘಂಟೆಯ ಸಮಯ ರಾತ್ರಿಯಾಗಿದೆ.
ಸಂಭೋಗವೆಂದರೆ ರಾತ್ರಿಯ ಕತ್ತಲಲ್ಲಿ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಬರೀ ಕ್ರೀಡೆಯಲ್ಲ ಎಂದು ಅದಕ್ಕೇ ಹೇಳುವುದು. ಸ್ತ್ರೀಯ ದೇಹ ರಚನೆ, ಮನಸ್ಸು ಮತ್ತು ಸ್ವಭಾವ, ದಿನದ ಮತ್ತು ರಾತ್ರಿಯ ಸಮಯ, ಇವುಗಳನ್ನು ಅರ್ಥ ಮಾಡಿಕೊಳ್ಳದೇ ಪ್ರಣಯದ ರಥವನ್ನೇರುವ ಪುರುಷ ಹೆಚ್ಚು ಯಶಸ್ಸು ಕಾಣಲಾರ. ಏನಂತೀರಿ?
Friday, July 3, 2009
Subscribe to:
Post Comments (Atom)
10 comments:
dayavitu ee vishayada moolavannu tilisidare tumba anukoo;a vaguthade.., hage gandasara jathi bagge tilisi.., inthi nimma
priya oduga
ಹೌದು, ಮೊದಲು UNDERSTANDING ಇರಬೇಕು ನಂತರ TIMING ನೋಡಬೇಕು ಅದು ಸರಿ ಇದ್ದರೇನೇ ಇಬ್ಬರಿಗೂ SATISFACTION ಸಿಗೋದು.
ವಾತ್ಸ್ಯಾನರ ವಿವರಣೆಯಲ್ಲಿ ನಾಲ್ಕು ಬಗೆಯ ಸ್ತ್ರೀಯರ ಗುಣಗಳು ಮತ್ತು ನಾವು ನೋಡುವ ಸ್ತ್ರೀಯರ ಗುಣಗಳಲ್ಲಿ ಅಜಗಜಾಂರ ವ್ಯತ್ಸಾಸ ಇರುತ್ತದಲ್ಲವೇ [ ಅಂದರೆ ಒಳ್ಳೆಯವಳು, ಕೆಟ್ಟವಳು ಮತ್ತೆ ಅವರ ಕಾಮ ಗುಣಗಳ ಬಗ್ಗೆ ಗೊತ್ತಿಲ್ಲ ] ಮತ್ತು ನಾಲ್ಕೇ ಬಗೆಯ ಸ್ತ್ರೀಯರು ಅಂತ ನಂಬುವುದು ಕಷ್ಟ. ಈ ವಿವರಣೆಯಂತೆ ಸ್ತ್ರೀಯರು ಹೀಗೆ ಇರುತ್ತಾರಂತ ಒಪ್ಪಿಕೊಳ್ಲುವಿದು ಕಷ್ಟವೆ. ಯಾವ ವ್ಯಕ್ತಿ ಆದರೂ ಅವರ ಗುಣಗಳು ರೂಪುಗಳ್ಳುವುದು ಅವರು ಬೆಳೆದ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆಯಲ್ಲವೆ. ಆದರೂ ನಮ್ಮ ಪೂರ್ವಿಕ ಋಷಿಮುನಿಗಳು ಮಾಡುವ ಎಲ್ಲಾ ಕಾರ್ಯಗಳಿಗೆ ವೈಗ್ನಾನಿಕ ಹಿನ್ನಲೇ ಇದ್ದೇ ಇರುತ್ತದೆ, ವಾತ್ಸ್ಯಾನರು ಯಾವ ಆಧಾರದಮೇಲೆ ಈ ರೀತಿ ವಿಂಗಡಿಸಿದರೋ ಅದು ಕೂಡ ಬರೆದಿದ್ದರೆ ಚೆನ್ನಾಗಿರಿತ್ತಿತ್ತು.
ಮತ್ತೆ ಸಮಯದ ವಿಷಯಕ್ಕೆ ಬಂದರೇ ಅದು ಅವರವ ಅನುಕೂಲಕ್ಕೆ ತಕ್ಕಂತೆ ಯಾಕೆಂದರೆ ಈ ಕಾಲದಲ್ಲಿ ಸಮಯ ಓಡಿ ಓಡಿ ಹೋಗುತ್ತದೆ ಮತ್ತೆ ಕೆಲಸದ SHIFT ಗಳು ನಮ್ಮ ಇಷ್ಟದಂತೆ ಇರುವಿದಿಲ್ಲ ನೋಡಿ.
ಮತ್ತೆ PLEASE ಪುರುಷರ ಬಗ್ಗೇನೂ ವಿವರಿಸೀ, ಆಮೇಲೆ ಯಾವ ಯಾವ ಬಗೆಯ ಪುರುಷರು ಯಾವ ಯಾವ ಬಗೆಯ ಸ್ತ್ರೀಗೆ MATCH ಆಗುತ್ತಾರೆ ಅನ್ನೋ ವಿವಿರಣೇ ನಿಮ್ಮ ಬಳಿ ಇದ್ದರೆ ದಯವಿತ್ತು ಅದನ್ನೂ ತಿಳಿಸೀ.
ರಾಜ್, ನಾನು ವಿವಿರಿಸಿರುವ ಅಂಶಗಳು ಕೇವಲ ವಾತ್ಸಾಯನರ ಕಾಮಸೂತ್ರದಿಂದ ಆಯ್ದುಕೊಂಡವುಗಳಲ್ಲ. ಹದಿನಾಲ್ಕು ಮತ್ತು ಹದಿನೈದನೆಯ ಶತಮಾನದ ಅವಧಿಯಲ್ಲಿ ಲೋದಿ ಆಸ್ಥಾನದಲ್ಲಿ ಕಲ್ಯಾಣಮಲ್ಲನೆಂಬ ಮಹಾಕವಿಯಿದ್ದ. ಗಂಡ-ಹೆಂಡತಿಯರ ನಡುವಿನ ವಿರಸ, ಅಸಹಯೋಗ ಮತ್ತು ಅಗಲಿಕೆಗೆ ಕಾರಣವಾಗುವ ಅಂಶಗಳಲ್ಲಿ ಅತೃಪ್ತ ದೈಹಿಕ ಕಾಮನೆಗಳೇ ಪ್ರಮುಖವೆಂದು ಅರಿತುಕೊಂಡ ಕಲ್ಯಾಣಮಲ್ಲ ವಾತ್ಸಾಯನರ ಕಾಮಸೂತ್ರವನ್ನು ಅಧ್ಯಯನ ಮಾಡಿದ್ದೇ ಅಲ್ಲದೇ ತನ್ನದೇ ಆದ "ಅನಂಗರಂಗ" ಎಂಬ ಕೃತಿಯನ್ನೂ ರಚಿಸಿದ. ಇದು ಗಂಡ-ಹೆಂಡತಿಯರ ಅಂದಿನ ಲೈಂಗಿಕ ಜೀವನಕ್ಕೆ ಒಂದು ಕೈಪಿಡಿಯಾಯಿತು. ಈ ಕೃತಿಯೂ ಕಾಮಶಾಸ್ತ್ರದ ಒಂದು ಬಹುಮೂಲ್ಯ ಅಂಗವೆಂದು ಹೇಳಬಹುದು. ನಾನು ಬರೆಯುತ್ತಿರುವ ಈ ಅಂಕಣಗಳಲ್ಲಿ ಕಲ್ಯಾಣಮಲ್ಲನ ಕೃತಿಯಿಂದ ಆಯ್ದ ಅಂಶಗಳೂ ಇವೆ. ನೀವು ಪುಸ್ತಕ ಮಳಿಗೆಗಳಲ್ಲಿ ಹುಡುಕುವಿರಾದರೆ ಕಾಮಸೂತ್ರ ಮತ್ತು ಅನಂಗರಂಗ ನಿಮಗೆ ಸಿಕ್ಕರೂ ಸಿಗಬಹುದು.
ಎರಡನೆಯದಾಗಿ, ನೀವು ಹೇಳಿದಂತೆ ಈ ಕೃತಿಗಳಲ್ಲಿ ವ್ಯಕ್ತವಾದ ಕೆಲವು ವಿಚಾರಗಳು ನಮ್ಮ ಇಂದಿನ ಯಾಂತ್ರಿಕ ಜೀವನದಲ್ಲಿ ಅಳವಡಿಕೆಯಾಗದಿರಬಹುದು. ಕಾಮಶಾಸ್ತ್ರ ಒಂದು ಅಧ್ಯಯನ. ಅದನ್ನು ಓದಿ, ಅರ್ಥಮಾಡಿಕೊಂಡು, ವಿಮರ್ಷಿಸಿ ನಂತರ ನಮ್ಮ ಜೀವನದ ಸ್ಥಿತಿಗತಿಗಳನ್ನು ಆಧರಿಸಿ ಅನುಸರಿಸಬಹುದೇ ಹೊರತು ಅದನ್ನು ಒಂದು ಅನಿವಾರ್ಯ ನಿಯಮದಂತೆ ರೂಢಿಸಿಕೊಳ್ಳಲಾಗದು. ಸ್ತ್ರೀ-ಪುರುಷರು ಒಬ್ಬರನ್ನೊಬ್ಬರು ತೃಪ್ತಿಪಡಿಸುವುದು ಒಂದು ಕಲೆ. ಅಲ್ಲಿ ವಿಜ್ಞಾನವಿಲ್ಲವೆಂದಿಲ್ಲ, ಆದರೆ ರತಿಕ್ರೀಡೆಯೆಂಬುದು ಹೆಚ್ಚು ಕಲಾತ್ಮಕವೇ ಹೊರತು ವೈಜ್ಞನಿಕವಲ್ಲ. ಕಾಮಶಾಸ್ತ್ರ ನಮಗೆ ಈ ಕಲೆಯನ್ನು ಅರ್ಥೈಸಿಕೊಳ್ಳಲು ಸಹಾಯಮಾಡಬಹುದೇ ವಿನಃ ಅದನ್ನು ಅರಗಿಸಿಕೊಳ್ಳಲು ಅಲ್ಲ.
ಆದ್ದರಿಂದ ನಾಲ್ಕೇ ಜಾತಿಯ ಸ್ತ್ರೀಯರು ಇದ್ದಾರೆಂದು ಹೇಗೆ ನಂಬುವುದು, ಈ ನಾಲ್ಕು ಜಾತಿಯ ಸ್ತ್ರೀಯರ ಮತ್ತು ನಾವು ಇಂದು ನೋಡುವ ಸ್ತ್ರೀಯರ ಮಧ್ಯೆ ಅಜಗಜಾಂತರ ವ್ಯತ್ಯಾಸಗಳು ಇರುತ್ತವಲ್ಲ, ಈ ಸ್ತ್ರೀ ಗುಣಗಳನ್ನು ಹೇಗೆ ಒಪ್ಪಿಕೊಳ್ಳುವುದು, ಯಾವ ಆಧಾರಗಳ ಮೇಲೆ ಈ ವಿಚಾರಗಳನ್ನು ಕಾಮಶಾಸ್ತ್ರದಲ್ಲಿ ವಿವರಿಸಲಾಗಿದೆ ಮುಂತಾದ ನಮ್ಮ ಸಂದೇಹಗಳಿಗೆ ನಿಖರವಾದ ಮತ್ತು ತೃಪ್ತಿಕರವಾದ ಉತ್ತರಗಳು ಸಿಗಲಿಕ್ಕಿಲ್ಲ. ಸ್ತ್ರೀಯೊಬ್ಬಳನ್ನು ಅರ್ಥಮಾಡಿಕೊಳ್ಳುವುದು ಪುರಾತನಕಾಲದಿಂದಲೂ ನಡೆದು ಬಂದ ಪುರುಷ ಪ್ರಯತ್ನ. ಕಾಮಶಾಸ್ತ್ರವನ್ನು ಅಧ್ಯಯನ ಮಾಡುವುದೆಂದರೆ ಹಿಂದಿನವರು ಮಾಡಿದ ಈ ಪ್ರಯತ್ನವನ್ನು ಅಧ್ಯಯನಮಾಡುವುದೆಂದಷ್ಟೇ ಅರ್ಥ. ಅದರಲ್ಲಿ ಎಷ್ಟು ಅಂಶಗಳು ಸರಿ ಹೊಂದುತ್ತವೆ ಅಥವ ಸರಿ ಹೊಂದುವುದಿಲ್ಲವೆಂಬುದು ನಮ್ಮ ನಿಮ್ಮ ವೈಯಕ್ತಿಕ ಅನುಭವದಮೇಲೆ ಅವಲಂಬಿಸುತ್ತದೆ.
ಅಬ್ಬ ಮಧು ಸರ್ ನನ್ನ COMMENT ಗೆ ಇಷ್ಟು ಅದ್ಭುತವಾಗಿ ಪ್ರತಿಕ್ರಿಯಿಸುತ್ತೀರಾ ಅಂತ ನಾನು ಭಾವಿಸಿರಲ್ಲಿಲ್ಲ. ನನ್ನ ಸರ್ವ ಪ್ರಶ್ನೆಗಳಿಗೆ ತುಂಬಾ ಉತ್ತಮವಾಗಿಯೇ ಉತ್ತರ ನೀಡಿಬಿಟ್ಟಿದ್ದೀರಾ, ತುಂಬಾ ಧನ್ಯವಾದಗಳು.
ನಮಗೆ ಕಲ್ಯಾಣಮಲ್ಲನ ಬಗ್ಗೆ ನಿಮ್ಮಿಂದಲೇ ತಿಳಿದೆವು. ಹೀಗೆ ಅದೆಷ್ಟು ಕವಿಗಳು, ವಿದ್ವಾಂಸರು ಕಾಮಾಶಾಸ್ತ್ರದ ಕುರಿತು ಅಧ್ಯಯನ ಮಾಡಿ ತಮ್ಮದೇ ಆದ ಕ್ರುತಿಗಳನ್ನು ರಚಿಸಿದರೋ ನಮಗೇ ತಿಳಿಯದು. ನಮಗೆ ಗೊತ್ತಿರುವುದು ಕಾಮಸೂತ್ರ ಒಂದೇ. ನಿಮಗೆ ಕಲ್ಯಾಣಮಲ್ಲನ ಬಗ್ಗೆ ಹೇಗೆ ತಿಳಿದುಕೊಂಡಿರಿ. ಇಂತಹ ಕ್ರುತಿಗಳು ಇನ್ನು ಅನೇಕ ವಿರಬೇಕು ಅಲ್ಲವೇ.
ನಾವು ಈ ಲೇಕನವನ್ನು ಓದಿದಂತೆಲ್ಲಾ ಹೆಚ್ಚು ಪ್ರಶ್ನೆಗಳು ಉದ್ಭವಿಸುವಿದು ಸಹಜ ಆದರೆ ಎಲ್ಲದಕ್ಕು ನೀವು ಹೇಳಿದಂತೆ ಉತ್ತರ ಸಿಗುವುದಿಲ್ಲ, ಸಿಕ್ಕಿದರೆ ನೀವು ಹೇಳುತ್ತೀರಲ್ಲವೇ.
ಸ್ತ್ರೀಯರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಆ ಬ್ರಹ್ಮನಿಂದಲೂ ಸಾದ್ಯವಾಗಿಲ್ಲಿಲ್ಲ ಅಂತ ಹೇಳುತ್ತಾರೆ. ಸ್ತ್ರಿಯರು ತಮ್ಮ ಜೀವನದಲ್ಲಿ ಕನಿಷ್ಟ ಎರಡು ಪುರುಶರೊಂದಿಗೆ ದೇಹ ಸಂಭಂದವನ್ನು ಇಟ್ಟುಕೊಳ್ಲುತಾರೆ ಅಂತ ನಮ್ಮ ಪುರಾಣ ಸಂಸ್ಕ್ರುತದಲ್ಲಿ ಹೇಳುತ್ತಾರೆ. ಅದು ಒಬ್ಬ ತನ್ನ ಪತಿ ಮತ್ತೊಬ್ಬ ತನ್ನ ಪ್ರೇಮಿ, ಆ ಪ್ರೇಮಿ ತನ್ನ ಗಂಡನಿಗಿಂತ ವಿಕಾರವಾಗಿದ್ದರೂ ಸಹ ಅವನ್ನನ್ನು ಪ್ರೇಮಿಸಿತ್ತಾಳೆ, ಆದರೆ ಆ ಪತಿರಾಯನಿಗೆ ಏನು ಗೊತ್ತಿರುವುದಿಲ್ಲ. ಈ ವಿಶಯವಾಗಿ ಕಲವು ಕ್ರಿತಿಗಳೂ ರಚಿತವಾಗಿದೆ. ಅದಕ್ಕೆ ನಮಗೆ ಬಿದ್ದಿಮಾತು ಹೇಳೋದು "ನದಿ ಮೂಲ, ಋಷಿ ಮೂಲ, ಸ್ತ್ರೀ ಮೂಲವನ್ನು ಹುಡುಕಲು ಹೋಗಬಾರದು" ಅಂತ, ಯಾಕೆಂದರೆ ಆ ಸ್ತ್ರೀ ತನ್ನ ರಹಸ್ಯವನ್ನು ಎಷ್ಟೇ ಕಷ್ಟ ಬಂದರು ಬಿಟ್ಟುಕೊಡುವುದಿಲ್ಲ.
bhala sogasada article
ಹಲೋ ಎಲ್ಲರು ಎಲ್ಲಿ ಹೋಗಿಬಿಟ್ಟಿರಿ ? ತಿಂಗಳುಗಳು ಕಳೆದರೂ ಒಬ್ಬರೂ ಪತ್ತೆನೇ ಇಲ್ಲವಲ್ಲಾ ? ಎಲ್ಲರು ಕ್ಷೇಮಾತಾನೆ ?
But this kind of launguage how many people can understand yar
Hello padmini,
neevu kate bareyuvudu nillisidiraa...
nanna taraha long break togo bahudaagittu...
nanage mail bareyuvudoo nillisidiri..eke ee ajyaatavaasa?
~shrungara!
shrungara.blospot.com
HAI IAM NEW TO THIS BLOG, WONDERFULL ARTICLES
THANKS
ತಾವು ಕಾಮದಲ್ಲಿ ದೈವತ್ವವನ್ನು ಕಂಡಿದ್ದೀರಿ ಪದ್ಮಿನಿಯವರೆ...
Post a Comment