Saturday, January 16, 2010

ಬಸ್ಸಿನಾಗ ಸುರಿದಿತ್ತ ಜೇನ (ಭಾಗ-2)

ಲೇಖನ: ಅನಂಗ


ಮಾವನ ಮನ್ಯಾಗ ಸಂಜೀ ಛಾ ಕುಡದಾವ್ರs ನಾನು ಕವಿತಾ ಹೊರಡಲಿಕ್ಕೆ ತಯಾರಾದ್ವಿ. ನಮ್ಮನ್ನ ಕಳಸೂ ಮನಸ ಅವರಿಗ್ಯಾರಿಗೂ ಇರಲಿಲ್ಲ. ಏನ ಅಳಿಯಂದ್ರ ಹೀಂಗ ಬಂದ ಹೀಂಗ ಹೊಂಟsಬಿಟ್ರೆಲ್ಲಾ... ಅಂತ ನಮ್ಮತ್ತಿ ಮಾವ ಹಳಾಳಿಸಿದ್ರು. ಅವ್ರು ವಯಸ್ಸಾದವ್ರು, ನನ್ನ ತ್ರಾಸು ಅವ್ರಿಗೇನ ಅರ್ಥ ಆದೀತು. ಅಂತೂ ಅವ್ರಿಗೆ ಏನೋ ಹೇಳಿ ಸಮಾಧಾನ ಮಾಡಿ ನಾವು ಜಾಗಾ ಬಿಟ್ವಿ. ಸೂರ್ಯಾಸ್ತ ಆಗತಿದ್ದಂಗನ ಡಿಸೆಂಬರ ಥಂಡಿ ಮೈಬಿಚ್ಚಿತ್ತು. ಅದು ಮೈ ಬಿಚ್ಚಿದ್ರ ನಮ್ಮ ಮೈ ಮುದುಡಲಿಕ್ಕ ಹತ್ತಿತ್ತು. ಕವಿತಾಗ ಖಿಡಕೀ ಕಡೆ ಸೀಟ ಕೊಟ್ಟು ನಾನು ಅವಳ ಮಗ್ಗಲ ಕೂತಕೊಂಡೆ. ನಮ್ಮಿಬ್ಬರ ಸೀಟ ಬಸ್ಸಿನ ನಟ್ಟನಡಬರಕ ಇತ್ತು. ಸವದತ್ತಿ ಕಡೆಯಿಂದ ಧಾರವಾಡಕ್ಕ ಸಂಜೀಕೆ ಬಸ್ಸುಗೋಳು ಖಾಲಿ ಹೋಗೂದು ಭಾಳ ಅಪರೂಪಾ. ನಮ್ಮ ಬಸ್ಸೂ ಖಾಲಿ ಇರಲಿಲ್ಲ. ಎಲ್ಲಾ ಸೀಟಗೋಳೂ ತುಂಬಿದ್ವು. ನಮ್ಮ ಮುಂದಿನ ಸೀಟಿನ್ಯಾಗ ಹಳದಿ ಪೇಟಾ ಸುತ್ತಕೊಂಡ ಒಬ್ಬ ಮುದುಕ ಕೂತಿದ್ದ. ಅವನ ಮಗ್ಗಲ ಒಬ್ಬ ಹುಡಗ ಕೂತಿದ್ದ. ಇಬ್ಬರೂ ತಮ್ಮ ಸೀಟಿನ ಖಿಡಕ್ಯಾಂದ ಹಾಯ್ಸಿ ತಳಗ ಭಜೀ ಮಾರಾವನ ಕಡೆ ನೋಡಕೋತ ಕೂತಿದ್ರು. ಇಬ್ಬರಿಗೂ ಭಜಿ ತಿನಬೇಕಂತ ಅನಿಸಿದಂಗಿತ್ತು. ಆದ್ರ ಒಬ್ರೂ ರೊಕ್ಕಾ ತಗೀವಲ್ರು, ಭಜಿ ತೊಗೋವಲ್ರು. ಸ್ವಲ್ಪ ಹೊತ್ತಾದಮ್ಯಾಲ ಬಸ್ ಚಾಲು ಆತು. ಬಸ್ ಸವದತ್ತಿ ಬಸ್‌ಸ್ಟ್ಯಾಂಡಿನಿಂದ ಹೊರಬೀಳೂ ಸಮಯಕ್ಕ ಕತ್ತಲೀನs ಆಗಿತ್ತು. ನಾನು ಮೆಲ್ಲಕ ಕವಿತಾನ ಹತ್ರ ಸರದೆ. ಅಷ್ಟೂ ಹೊತ್ತೂ ಅಕಿ ಏನೂ ಮಾತಾಡ್ದ ಸುಮ್ಮ ಕೂತಿದ್ಳು. ಅವ್ವಾ ಅಪ್ಪನ್ನ ಬಿಟ್ಟ ಬಂದಿದ್ಳು. ಬ್ಯಾಸರ ಆಗಿರಬೇಕು. ಅಕಿ ತೊಡಿ ನನ್ನ ತೊಡೀಗೆ ತಾಕಿ ನನಗ ಏನೇನೋ ಮಾತಂಡಂಗ ಆಗಿತ್ತು. ಆದ್ರ ನಾನೂ ಹೆಚ್ಚ ಮಾತಾಡ್ದೇ ಸುಮ್ನ ಕೂತಿದ್ದೆ.

ಹದಿನೈದ ನಿಮಿಷ ಕಳದಮ್ಯಾಲ ಬಸ್ ಊರ ಹೊರಗ ಹೊಂಟಿತ್ತು. ಡ್ರೈವರ್ ಲೈಟ್ ಆರಿಸಿದ. ಹೊರಗ ಥಂಡಿ, ಒಳಗೆ ಬೆಚ್ಚಗ ಕತ್ತಲಿ. ನಾವಿಬ್ರೂ ಹೊಸ್ತಾಗಿ ಮದವ್ಯಾದಾವ್ರು. ನಾಲ್ಕ ದಿನಾ ಒಬ್ರನ್ನೊಬ್ಬರು ಬಿಟ್ಟ ಇದ್ದಾವ್ರು. ಬಸ್ ತೂಗಕೋತ ಸಣ್ಣಂಗೆ ಜಿಗ್ಕೊತ್ತ ಹೊಂಟಿತ್ತು. ನನ್ನ ಬಲಗೈ ಕವಿತಾನ ತೊಡೀಮ್ಯಾಲ ತುಡಗ ಮಂಗ್ಯಾನ ಥರಾ ಏರಿ ಕೂತಿತು. ಕವಿತಾನ ತಲಿ ನನ್ನ ಹೆಗಲಮ್ಯಾಲ ಇತ್ತು. ಅಕಿಗೆ ನಿದ್ದಿ ಹತ್ತಿತ್ತೋ ಇಲ್ಲೋ ಗೊತ್ತಿರ್ಲಿಲ್ಲ. ಒಂದೆರಡ ನಿಮಿಷ ಆದಮ್ಯಾಲ ನನ್ನ ತುಡಗ ಕೈ ಮೆಲ್ಲಗ ಆಕಿ ಸೊಂಟಕ್ಕ ಏರಿತ್ತು. ಅಕಿನ ಸೀರೀ ಅಂಚಿನ ಸುತ್ತ ತಿರಗಿ ಸೀದಾ ಆಕಿ ಹೊಕ್ಕಳ ಕೆಳಗs ಬಂದಿತ್ತು. ಆ ಕ್ಷಣಕ್ಕ ಬಸ್ಸಿನ ಗಾಲಿ ಒಂದ ಸಣ್ಣ ಕಲ್ಲ ಮ್ಯಾಲ ಹಾದೂವೋ ಏನೋ ಬಸ್ ಜಿಗದಂಗ ಮಾಡ್ತು. ನನ್ನ ಬಟ್ಟಗೋಳು ಆಕಿ ಸೀರಿ ನೆರಗನ್ಯಾಗ ಸಿಕ್ಕೊಂಡಬಿಟ್ವು. ಅಕಿ ಮೈ ಬಿಸಿ ನನ್ನ ಬಟ್ಟಗೋಳಿಗೆ ತಾಕಿತ್ತು. ಆಕಿನ ಮೆತ್ತಗಿನ ಕೆಳಹೊಟ್ಟಿ ಯಾಕೋ ಸ್ವಲ್ಪ ಬೆವರಿದಂಗನೂ ಅನಿಸಿತ್ತು. ಆದರ ನನಗೆ ಬ್ಯಾರೇನs ವಿಚಾರ ಬಂತು. ಇಂಥಾ ಥಂಡ್ಯಾಗ ಕೂತಲ್ಲೇ ಕೂತು ಇಕಿ ಬೆವರತಾಳರೆ ಹೆಂಗ ಅಂತ. ಆಮ್ಯಾಲ ಅನಿಸ್ತು ಇದು ಬೆವರಲ್ಲಾ ಅಂತ!

ಈ ನಾಲ್ಕು ದಿನದಾಗ ನನ್ನ ಹರೇದ ಹೆಂಡತಿ ಸ್ವಭಾವನs ನನಗೆ ಸ್ವಲ್ಪ ಮರತಹಂಗ ಆಗಿತ್ತೋ ಏನೋ... ಇಲ್ಲದಿದ್ರ ಹಿಂಗ ಅರೀದಾವ್ರಥರ ಅಂಜಕೋತ ಅಕಿ ಹೊಕ್ಕಳ ತಳಗ ಕೈ ಇಟ್ಟಗೊಂಡ ಕೂತೀರಾವನಲ್ಲಾ ನಾನು. ನನ್ನ ಗಿಡದಾಗs ಹೂವಾಗಿದ್ದು ನನಗs ಗೊತ್ತಿಲ್ಲಂದ್ರ? ಅಂದಾವನs ಕೈ ತಳಗ ತಳ್ಳೇ ಬಿಟ್ಟೆ. ಅದು ಹೋಗಿ ಸೀದಾ ಅಕಿ ಬಾಗಲಾನ ತಟ್ಟಿತ್ತು. ಅಕಿ ಗಪ್ಪನ ಉಸರ ಹಿಡಿದಿದ್ದು ನನಗ ಕೇಳಿಸ್ತು. ನನ್ನ ಹೆಗಲ ಮ್ಯಾಲ ತಲಿ ಇಟ್ಟಾಕಿ ಮಲಗಿರಲಿಲ್ಲ. ಅಷ್ಟ ಗೊತ್ತಾದಮ್ಯಾಲ ಸುಮ್ಮ ಇರ್ತೀನಾ ನಾನು?


ಮುಂದುವರಿಯುವುದು...

Sunday, January 10, 2010

ಬಸ್ಸಿನಾಗ ಸುರಿದಿತ್ತ ಜೇನ (ಭಾಗ-1)

ಸ್ನೇಹಿತರೆ,

ಸುಮಾರು ಐದು ತಿಂಗಳ ನಂತರ ಹೊಸ ಲೇಖನವೊಂದನ್ನು ಪ್ರಕಟಿಸುತ್ತಿದ್ದೇನೆ. ಇಷ್ಟು ದೀರ್ಘವಾದ ಮೌನಕ್ಕೆ ಕಾರಣವೇನೆಂದು ಈ ಕೂಡಲೇ ವಿವರಿಸಲಾರೆ. ಜೀವನದಲ್ಲಿ ಹಠ್ಠಾತ್ತಾಗಿ ಕೆಲವೊಮ್ಮೆ ಸಮಸ್ಯೆಗಳು ಎದುರಾಗುತ್ತವೆ. ಅಂಥದೇ ಸಮಸ್ಯೆಯೊಂದರ ಸುಳಿಯಲ್ಲಿ ನಾನು ಸಿಲುಕಿದ್ದೆ. ನಾನಿಲ್ಲದೆ ನನ್ನ ಸ್ನೇಹಿತ ಮಧುಚಂದ್ರನಿಗೆ ಪ್ರಣಯಪದ್ಮಿನಿಯನ್ನು ಮುನ್ನಡೆಸುವುದು ಇಷ್ಟವಿರಲಿಲ್ಲ. ಆದರೂ ಆತ ಪ್ರಣಯಪದ್ಮಿನಿ ಮತ್ತು ಅದರ Yahoo! ಬಳಗದ ಕಡೆಗೆ ಗಮನವಿಟ್ಟಿದ್ದು ನನಗೆ ಸಮಾಧಾನದ ಸಂಗತಿ.

ಸರಿ, ಈಗ ನಿಮ್ಮೊಂದಿಗೆ ಒಂದು ವಿಷಯವನ್ನು ಪ್ರಸ್ತಾಪಿಸಬೇಕಿದೆ. ನಾನು ಮೂಲತಃ ಬಿಜಾಪುರ ಜೆಲ್ಲೆಯವಳು. ಉತ್ತರ ಕರ್ನಾಟಕದ ಕನ್ನಡದ ಸೊಗಡನ್ನು ಮೊದಲಿನಿಂದಲೂ ಅರಿತವಳು. ಆ ಕನ್ನಡದಲ್ಲಿ ನಾನು ಶೃಂಗಾರ ಕಥೆಗಳನ್ನು ಬರೆಯಬೇಕೆಂದು ಅಂದುಕೊಳ್ಳುತ್ತಲೇ ಬಂದಿದ್ದೇನೆ. ಆದರೆ ಅದು ನನ್ನಿಂದ ಸಾಧ್ಯವಾಗಲೇ ಇಲ್ಲ. ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಅಂಥ ಒಂದು ಲೇಖನವನ್ನು ಬರೆದು ನನಗೆ ಈಮೇಲ್ ಮಾಡಿದ್ದರು. ಸ್ವಲ್ಪ ಅಶ್ಲೀಲವೆನಿಸಿದರೂ ನನಗದು ಇಷ್ಟವಾಯಿತು. ನಾನು ಆ ಲೇಖನವನ್ನು ಪ್ರಣಯಪದ್ಮಿನಿಯಲ್ಲಿ ಪ್ರಕಟಿಸಲು ಅವರ ಅನುಮತಿಯನ್ನು ಕೇಳಿದೆ. ತಮ್ಮ ಹೆಸರನ್ನು ಮಾತ್ರ ಪ್ರಕಟಿಸಬಾರದೆಂಬ ಕರಾರಿನ ಮೇಲೆ ಅವರು ಒಪ್ಪಿದರು. ಆದರೆ ಲೇಖನವೊಂದಕ್ಕೆ ಲೇಖಕನ ಗುರುತು ಇರದಿದ್ದರೆ ಹೇಗೆ? ಒಂದು ಕಲ್ಪಿತನಾಮವನ್ನಾದರೂ ಸೂಚಿಸಬಹುದಲ್ಲ?

ನೀವು ಈ ಮೊದಲ ಭಾಗವನ್ನು ಓದಿನೋಡಿ. ನಿಮಗೆ ಹಿಡಿಸಿದರೆ ಈ ತರಹದ ಲೇಖನಗಳನ್ನು ಮುಂದುವರಿಸೋಣ.

~ಪದ್ಮಿನಿ
----------------------------------------------------------------------------


ಲೇಖನ: ಅನಂಗ

ಮದಿವ್ಯಾಗಿ ಇನ್ನೂ ಎರ್ಡ ತಿಂಗಳ ಆಗಿದ್ದಿಲ್ಲಾ. ನನ್ನ ಹೆಂಡ್ತಿ ಕವಿತಾ ತನ್ನ ಅಕ್ಕನ ಕುಬುಸಕ್ಕಂತ ತವರಮನೀಗೆ ಹೋಗಿಬಿಟ್ಟಿದ್ಳು. ಅಕೀ ಹೋಗಿದ್ದು ಐದೇ ದಿನಕ್ಕಂತಾದ್ರೂ ನನ್ನ ಜೀವಾ ಅಕಿ ಇಲ್ಲದ್ದಕ್ಕ ಚಡಪಡಸಲಿಕ್ಕೆ ಹತ್ತಿತ್ತು ನೋಡ್ರಿ. ಅಂಥಾ ರುಚೀನs ತೋರಿಸಿದ್ದಳ್ರಿ ಹುಡುಗಿ. ಅಷ್ಟ ರುಚೀನs ಇತ್ತ್ರಿ ಅಕಿಗೂಡ ಇರೂದಂದ್ರ. ಅಕೀಗೆ ಇಪ್ಪತ್ತೊಂದರ ಹರೆ, ನನಗ ನಾಲ್ಕ ವರ್ಷ ಹೆಚ್ಚ ಅಷ್ಟs. ಮನ್ಯಾಗ ನಾವs ಇಬ್ರ ಇರಾವ್ರು, ಹೇಳಾವ್ರಿಲ್ಲ, ಕೇಳಾವ್ರಿಲ್ಲ. ಆಡಿದ್ದs ಆಟ, ಮಾಡಿದ್ದs ಊಟ. ಈ ಎರ್ಡ ತಿಂಗಳು ಹೆಂಗ ಹೋದು ಅಂತಾನs ಗೊತ್ತಾಗಲಿಲ್ಲ್ರಿ.

ಎರ್ಡ ವಾರದ ಹಿಂದ ಕವಿತಾಗ ಅವಳ ಗೆಳತಿ ಜ್ಯೋತಿ ಭೆಟ್ಟ್ಯಾಗಿದ್ದಳಂತ. ಏನs ಕವಿತೀ, ಹೆಂಗ ನಡದsದ ಹೊಸಾ ಸಂಸಾರ? ಅಂತ ಇಕೀನ ಗಲ್ಲಾ ಚಿಂವಟಿ ಮಾತಾಡಿಸಿದ್ದಳಂತ. ನಿನ್ನ ಮದಿವ್ಯಾಗ ನಾ ಒಂದ ಸೀರಿ ಕೊಟ್ಟಿದ್ದೆ, ಅದನ್ನ ಉಟುಗೊಂಡು ನೋಡಿದ್ಯೇನ? ಅಂತೂ ಕೇಳಿದಳಂತ. ಅದಕ್ಕ ಇವಳು, 'ಹದಿನೈದ ದಿನಾ ಆತು ನನ್ನ ಗಂಡ ನನಗ ಚಡ್ಡಿ ಹಕ್ಕೋಳ್ಳಿಕ್ಕ ಬಿಟ್ಟಿಲ್ಲಾ, ನಿನ್ನ ಸೀರಿ ಯಾವಾಗ ಉಡೂದು?' ಅಂತ ಅಂದಳಂತ. ಅದನ್ನ ಕೇಳಿ ಜ್ಯೋತಿ ಸಾಯೂಹಂಗ ನಕ್ಕಳಂತ. ಇದನ್ನ ಕೇಳಿ ನಾನು ಕವಿತಾನ ತೊಡೀಮ್ಯಾಲೆ ಎಳದ ಕೂಡಿಸಿಕೊಂಡು ಹುಚ್ಚು ಹಿಡಿದಹಂಗ ಹಟ್ಟಿದ್ದೆ ನೋಡ್ರಿ. ಹುಡುಗೀನs ಹಂಗ ಇದ್ದಾಳ್ರೀ. ಹುಚ್ಚs ಹಿಡಸ್ತಾಳ.

ಕವಿತಾ ಮನ್ಯಾಗಿಲ್ದ ನನಗೂ ಏನೇನೋ ವಿಚಾರ ಬರಲಿಕ್ಕೆ ಹತ್ತಿದ್ವು. ಅಕಿ ತವರಮನೀಗೆ ಹೋಗಿ ನಾಲ್ಕ ದಿನಾ ಆಗಿತ್ತು. ಇನ್ನೊಂದ ದಿನಾ ಕಾಯ್ದರ ಆಯ್ತಲ್ಲ ಆಕಿ ಬಂದsಬಿಡ್ತಾಳ ಅಂತ ಎಷ್ಟ ನನಗ ನಾನs ಹೇಳಕೊಂಡ್ರೂ ಸಮಾಧಾನಾನs ಆಗಲಿಲ್ಲ. ಅಂದ ಮುಂಜಾನೇನs ಅಕಿಗಿ ಫೋನ್ ಮಾಡಿ, 'ಕವಿ, ನೀನೀವತ್ತ ಸಂಜೀಕೆ ತಯಾರಾಗಿರು. ನಾ ಸವದತ್ತಿಗೆ ಬಂದು ಕರ್ಕೊಂಡ ಬರ್ತೀನಿ' ಅಂದಿದ್ದೆ. ಅವಳು ಹಠಾ ಮಾಡಿ ಇನ್ನೊಂದಿನ ಅಲ್ಲೇ ಇರತೀನಿ ಅಂತಾಳ ಅಂದ್ಕೊಂಡಿದ್ರ ಹಂಗಾಗಲಿಲ್ಲ. ಅವಳು ಒಪ್ಪಿದ್ಳು. ಆದ್ರ ಮಾತು ಫೋನ್‌ನ್ಯಾಗ ಆಗಿ ಹೋಗಿತ್ತು. ಖರೆ ಅಕಿ ಮನಸನ್ಯಾಗ ಇನ್ನೊಂದಿನ ಅಲ್ಲೇ ಕಳೀಬೇಕು ಅಂತ ಇದ್ದಿರಬಹುದಿತ್ತು. ಅಂತೂ ಮಾವನ ಮನೀಗೆ ನಾನು ಹೊಂಟನಿಂತಿದ್ದೆ. ಧಾರವಾಡದಿಂದ ಸವದತ್ತಿ ಒಂತಾಸಿನ ಹಾದಿ. ಸವದತ್ತಿ ಬಸ್‌ಸ್ಟ್ಯಾಂಡಿನ್ಯಾಗ ಬಸ್ ಹೋಗಿ ನಿಂತದ್ದs ತಡಾ, ನಾನು ಕೆಳಗ ಜಿಗದು ಒಂದು ಆಟೋ ಹಿಡಕೊಂಡ ಹತ್ತ ನಿಮಿಷದಾಗ ಮಾವನ ಮನ್ಯಾಗs ಇದ್ದೆ.

ಲಗ್ನ ಆದಮ್ಯಾಲ ಇದು ಮೊದಲ ಸಲ ಮಾವನ ಮನೀ ಭೆಟ್ಟಿ. ಎಲ್ಲಾರೂ ಭಾಳ ಆದ್ರಾ ಮಾಡಿದ್ರು. ತಿನಿಸಿದ್ರು, ಕುಡಿಸಿದ್ರು. ಆದ್ರ ನನ್ನ ಚಿತ್ತ ಕವಿತಾನ ಸುತ್ತನs ಇತ್ತು. ತಿಂಗಳಾನಗಟ್ಟಲೇ ಅಕಿನ ಬಿಟ್ಟಿದ್ದೀನೇನೋ ಅನಿಸಿಬಿಟ್ಟಿತ್ತು. ಅಕಿ ನನ್ನ ಹತ್ರ ಬಂದು ಮಾತಾಡ್ಸಿದ್ರ ಮೈಯೆಲ್ಲ ಬಿಸಿಯೇರಿದಂಗ ಆಗಿತ್ತು. ಅಕಿ ಅಂದಾನs ಅಂಥಾದ್ದು, ನನ್ನ ಗೆಳ್ಯಾರೆಲ್ಲಾರೂ ಏನ ಛಂದ ಇದ್ದಾಳೋ ಮಾರಾಯಾ ನಿನ್ನ ಹೆಂಡ್ತಿ... ಪುಣ್ಯಾ ಮಾಡೀ ನೋಡಪಾ ನೀ ಅಂತ ಸಂಕಟಾ ಮಾಡ್ಕೊಂಡು ಹೇಳಿದ್ರ ನನಗ ಸಿಕ್ಕಾಪಟ್ಟಿ ಖುಷಿಯಾಗೂದು.

ಮುಂದುವರಿಯುವುದು...