ಲೇಖನ: madhuಚಂದ್ರ
ಆಧಾರ: ವಾತ್ಸಾಯನರ ಕಾಮಸೂತ್ರ, ಕಲ್ಯಾಣಮಲ್ಲನ ಅನಂಗರಂಗ, ಅಂತರ್ಜಾಲ ಮತ್ತು ಕೆಲವು ಕಾಮಶಾಸ್ತ್ರದ ಟಿಪ್ಪಣಿಗಳು
ಪದ್ಮಿನಿ ಮತ್ತು ಚಿತ್ತಿನಿ ಸ್ತ್ರೀಯರ ಬಗ್ಗೆ ಹಿಂದಿನ ಅಂಕಣಗಳಲ್ಲಿ ಓದಿದ್ದೇವೆ. ಈಗ ಶಂಖಿನಿ ಮತ್ತು ಹಸ್ತಿನಿ ಸ್ತ್ರೀಯರ ಬಗ್ಗೆ ತಿಳಿಯೋಣ.
ಶಂಖಿನಿ
ಶಂಖಿನಿ ಸಾಮಾನ್ಯವಾಗಿ ಕಂದು ಅಥವ ಮಣ್ಣಿನ ಮೈಬಣ್ಣದ ಬಿಸಿದೇಹದ ಹೆಣ್ಣು. ಇವಳದು ದೊಡ್ಡ ಗಾತ್ರದ ದೇಹ, ಅವಳ ಸೊಂಟವು ಕೂಡ ದೊಡ್ಡದೇ. ಆದರೆ ದೊಡ್ಡ ದೇಹದ ಈ ಹೆಣ್ಣಿನ ಸ್ತನಗಳು ಮಾತ್ರ ಚಿಕ್ಕವು. ಅವಳ ಕೈ ಮತ್ತು ಪಾದಗಳು ಉದ್ದವಾಗಿರುತ್ತವೆ. ಅವಳ ಯೋನಿ ಯಾವತ್ತೂ ಒದ್ದೆಯಾಗಿರುತ್ತದಲ್ಲದೇ ಅದರ ದ್ರವ ಉಪ್ಪಿನ ರುಚಿಯಂತಿರುತ್ತದೆ. ಅವಳ ಯೋನಿಕಣಿವೆಯ ಸುತ್ತಲೂ ಕೂದಲು ತುಂಬಾ ದಟ್ಟವಾಗಿ ಬೆಳೆಯುತ್ತದೆ. ಅವಳ ಧ್ವನಿ ಒಡಕು ಅಥವ ಕರ್ಕಶ ಮತ್ತು ಅವಳ ನಡಿಗೆ ಆತುರ ಅಥವ ಅವಸರವನ್ನು ತೋರುತ್ತದೆ. ಎಲ್ಲ ಸ್ತ್ರೀಯರಂತೆ ಇವಳಿಗೂ ಬಟ್ಟೆ, ಹೂವು ಮತ್ತು ಆಭರಣಗಳೆಂದರೆ ಇಷ್ಟ.
ಶಂಖಿನಿ ಸ್ತ್ರೀಗೆ ಕಾಮೋನ್ಮಾದದ ಯಾವ ಘಳಿಗೆಯಲ್ಲಾದರೂ ಉಂಟಾಗಬಲ್ಲದು. ಸಮಯ ಮತ್ತು ಸಂದರ್ಭಗಳ ಪರಿವೆಯಿಲ್ಲದೇ ಕಾಮಾವೇಶಕ್ಕೆ ತುತ್ತಾಗುವ ಇವಳು ಎಷ್ಟೋ ಸಲ ದಿಗಿಲುಗೊಳ್ಳುತ್ತಾಳೆ ಅಥವ ಗೊಂದಲಕ್ಕೀಡಾಗುವುದುಂಟು. ಇವಳೊಂದಿಗೆ ರತಿಕ್ರೀಡೆಯನ್ನು ನಡೆಸುವ ಪುರುಷ ಇವಳ ಆವೇಶದ ಸುಳಿಯಲ್ಲಿ ಸಿಕ್ಕು ಇವಳ ಉಗುರುಗಳಿಂದ ಗಾಯಗೊಳ್ಳುವುದು ಸಾಮಾನ್ಯ.
ಶಂಖಿನಿ ಸ್ತ್ರೀ ಒಬ್ಬ ಮುಂಗೋಪಿ ಹೆಣ್ಣು, ಕಟು ಹೃದಯಿ, ಹಠಮಾರಿ, ಅವಿನಿಯಿ ಮತ್ತು ಯಾವತ್ತು ಇತರರಲ್ಲಿ ತಪ್ಪುಗಳನ್ನು ಹುಡುಕುವ ಪ್ರವೃತ್ತಿಯವಳು.
ಹಸ್ತಿನಿ
ಹಸ್ತಿನಿಯದು ಕುಬ್ಜ ನಿಲುವು, ಇವಳ ದೇಹದ ಎತ್ತರ ಕಡಿಮೆ. ಸ್ವಲ್ಪ ಒರಟೆನಿಸುವ ದಪ್ಪದಾದ ದೇಹ, ತಿಳಿ ಕಂದು ಬಣ್ಣದ ಕೂದಲು ಮತ್ತು ಬೆಳ್ಳಗಿನ ಮೈಬಣ್ಣ. ಅವಳ ಕತ್ತು ನೇರವಾಗಿರದೇ ಮಣಿದಂತಿದ್ದು ಅವಳ ಧ್ವನಿ ಕರ್ಕಶವಾಗಿ, ಗಂಟಲಲ್ಲೇ ಸಿಕ್ಕಿಹಾಕಿಕೊಂಡಂತೆ ಕೇಳುತ್ತದೆ. ಹಸ್ತಿನಿಯ ನಡಿಗೆ ಜೋಲುಬಿದ್ದಂತೆ ನಿಧಾನ ಮತ್ತು ಅವಲಕ್ಷಣವಾಗಿರುತ್ತದೆ. ಅವಳ ಕಾಲ್ಬೆರಳುಗಳು ವಕ್ರವಾಗಿರುವ ಸಾಧ್ಯತೆಗಳು ಇವೆ.
ರತಿಕ್ರೀಡೆಯ ಸಮಯದಲ್ಲೂ ಹಸ್ತಿನಿಯದು ತುಂಬಾ ಆಲಸ್ಯದ ವರ್ತನೆ. ಬಲು ದೀರ್ಘವಾದ ಸಂಭೋಗದಿಂದ ಮಾತ್ರ ಅವಳಿಗೆ ತೃಪ್ತಿ ಸಿಗಲು ಸಾಧ್ಯ. ಆದರೆ ಎಷ್ಟು ಸಂಭೋಗ ನಡೆಸಿದರೂ ಅವಳಿಗೆ ನಿಜವಾದ ತೃಪ್ತಿ ಸಿಗುವುದೇ ಇಲ್ಲ. ಹಸ್ತಿನಿಯದು ಹೊಟ್ಟೆಬಾಕತನ, ಎಷ್ಟು ತಿಂದರೂ ಮತ್ತೆ ತಿನ್ನುತ್ತಾಳೆ. ಅವಳದು ಮುಂಗೋಪದ ಸ್ವಭಾವ.
ನಾಲ್ಕು ಜಾತಿಯ ಸ್ತ್ರೀಯರ ಬಗ್ಗೆ ತಿಳಿದಾಯಿತು. ಇನ್ನು ಮುಂದೆ ಯಾವ ದಿನಗಳಲ್ಲಿ ಯಾವ ಜಾತಿಯ ಸ್ತ್ರೀಗೆ ರತಿಕ್ರೀಡೆಯಿಂದ ಹೆಚ್ಚು ತೃಪ್ತಿ ಸಿಗುತ್ತದೋ ಎಂಬುದನ್ನು ನೋಡೋಣ. ನಮ್ಮ ಪುರಾತನ ಕಾಮಶಾಸ್ತ್ರವು ಈ ಅಂಶವನ್ನು ಒತ್ತಿ ಹೇಳಿದೆ. ಎಲ್ಲ ದಿನಗಳೂ ಸಂಭೋಗಕ್ಕೆ ಪಕ್ವವಾಗಿರುವುದಿಲ್ಲ. ನಮ್ಮ ಭಾರತೀಯ ಪಂಚಾಗದ ಪ್ರಕಾರ ಒಂದು ತಿಂಗಳೆಂದರೆ ಎರಡು ಪಕ್ಷಗಳು. ಒಂದು ಪಕ್ಷವೆಂದರೆ ಹದಿನೈದು ದಿನಗಳ ಅವಧಿ. ಒಂದು ಪಕ್ಷದ ಕೊನೆಗೆ ಹುಣ್ಣಿಮೆಯಿದ್ದರೆ ಇನ್ನೊಂದರೆ ಕೊನೆಗೆ ಅಮಾವಾಸ್ಯೆ ಇರುತ್ತದೆ. ಇದು ನಿಮಗೂ ಗೊತ್ತಿರುವ ವಿಷಯ.
ಪ್ರತಿಪದ, ದ್ವಿತಿಯ, ಚತುರ್ಥಿ ಮತ್ತು ಪಂಚಮಿ (ಅಂದರೆ, ಒಂದು, ಎರಡು, ನಾಲ್ಕು ಮತ್ತು ಐದು) ಈ ದಿನಗಳಲ್ಲಿ ನಡೆಸಿದ ಸಂಭೋಗದಿಂದ ಪದ್ಮಿನಿ ಜಾತಿಯ ಸ್ತ್ರೀಗೆ ಸಂಪೂರ್ಣವಾದ ತೃಪ್ತಿ ಸಿಗುವ ಸಾಧ್ಯತೆಗಳುಂಟು.
ಷಷ್ಠಿ, ಅಷ್ಟಮಿ, ದಶಮಿ ಮತ್ತು ದ್ವಾದಶಿ (ಅಂದರೆ, ಆರು, ಎಂಟು, ಹತ್ತು ಮತ್ತು ಹನ್ನೆರಡು) ಈ ದಿನಗಳಲ್ಲಿ ನಡೆಸಿದ ಸಂಭೋಗದಿಂದ ಚಿತ್ತಿನಿ ಜಾತಿಯ ಸ್ತ್ರೀಗೆ ಸಂಪೂರ್ಣವಾದ ತೃಪ್ತಿ ಸಿಗುವ ಸಾಧ್ಯತೆಗಳುಂಟು.
ತೃತಿಯ, ಸಪ್ತಮಿ, ಏಕಾದಶಿ ಮತ್ತು ತ್ರಯೋದಶಿ (ಅಂದರೆ, ಮೂರು, ಏಳು, ಹನ್ನೋಂದು ಮತ್ತು ಹದಿಮೂರು) ಈ ದಿನಗಳಲ್ಲಿ ನಡೆಸಿದ ಸಂಭೋಗದಿಂದ ಶಂಖಿನಿ ಜಾತಿಯ ಸ್ತ್ರೀಗೆ ಸಂಪೂರ್ಣವಾದ ತೃಪ್ತಿ ಸಿಗುವ ಸಾಧ್ಯತೆಗಳುಂಟು.
ನವಮಿ, ಚತುರ್ದಶಿ, ಪೂರ್ಣಿಮೆ ಮತ್ತು ಅಮಾವಾಸ್ಯೆ (ಅಂದರೆ, ಒಂಭತ್ತು, ಹದಿನಾಲ್ಕು, ಪೂರ್ಣಿಮೆ ಮತ್ತು ಅಮಾವಾಸ್ಯೆ) ಈ ದಿನಗಳಲ್ಲಿ ನಡೆಸಿದ ಸಂಭೋಗದಿಂದ ಹಸ್ತಿನಿ ಜಾತಿಯ ಸ್ತ್ರೀಗೆ ಸಂಪೂರ್ಣವಾದ ತೃಪ್ತಿ ಸಿಗುವ ಸಾಧ್ಯತೆಗಳುಂಟು.
ಇದಲ್ಲದೇ ದಿನದ ಯಾವ ಸಮಯದಲ್ಲಿ ಈ ಸ್ತ್ರೀಯರು ಸಂಭೋಗದಿಂದ ಹೆಚ್ಚು ತೃಪ್ತಿಯನ್ನು ಅನುಭವಿಸುತ್ತಾರೆ ಎಂಬುದನ್ನೂ ವಿವರಿಸಲಾಗಿದೆ. ಪದ್ಮಿನಿ ಜಾತಿಯ ಸ್ತ್ರೀಯು ರಾತ್ರಿಯಲ್ಲಿ ನಡೆಯುವ ಕಾಮಕ್ರೀಡೆಗೆ ಉತ್ತಮವಾಗಿ ಪ್ರತಿಕ್ರಿಯಿಸುವುದಿಲ್ಲ. ಅಷ್ಟೇ ಅಲ್ಲ, ರಾತ್ರಿ ಸಮಯದ ಸಂಭೋಗದಿಂದ ಅವಳಿಗೆ ಹಿಂಸೆಯಾಗುವ ಸಾಧ್ಯತೆಯೂ ಇದೆ. ಪದ್ಮಿನಿ ಜಾತಿಯ ಸ್ತ್ರೀಯನ್ನು ಸೂರ್ಯಕಮಲವೆಂದು ಕರೆಯಲಾಗುತ್ತದೆ, ಅಂದರೆ ಸೂರ್ಯನ ಕಿರಣಗಳಿಗೆ ಅರಳುವ ಹೂವು ಅಥವ ಸೂರ್ಯನ ಬೆಳಕಿನ ಅವಧಿಯಲ್ಲಿ ಉತ್ತಮವಾಗಿ ಪ್ರತಿಕ್ರಿಯಿಸುವ ಸ್ತ್ರೀ ಎಂದರ್ಥ. ಇದು ಸಾಂಕೇತಿಕ ವಿಚಾರವಷ್ಟೇ. ಸೂರ್ಯನ ಬೆಳಕು ಎಂದುಕೊಂಡು ಮನೆಯ ಹೊರಗಿನ ಬಿಸಿಲಿನಲ್ಲಿ ಹಾಸಿಗೆ ಹಾಸುವ ಅವಶ್ಯಕತೆಯಿರುವುದಿಲ್ಲ. ಪಕ್ವ ಸಮಯದಲ್ಲಿ ಪದ್ಮಿನಿಯನ್ನು ರತಿಕ್ರೀಡೆಗೆ ಅಹ್ವಾನಿಸುವ ಯಾವುದೇ ಪುರುಷ, ಅವನು ಹದಿನಾರರ ತರುಣನೇ ಆಗಿರಲಿ, ಅವಳನ್ನು ತೃಪ್ತಿಪಡಿಸಬಲ್ಲ. ಚಿತ್ತಿನಿ ಮತ್ತು ಶಂಖಿನಿ ಸ್ತ್ರೀಯರು ಚಂದ್ರಕಮಲವಿದ್ದಂತೆ, ಅಂದರೆ ಚಂದ್ರನ ಬೆಳಕಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ. ಒರಟು ದೇಹದ ಹಸ್ತಿನಿಗೆ ಮಾತ್ರ ಈ ಸಮಯದ ಸೂಕ್ಷ್ಮತೆಗಳ ಹಂಗಿಲ್ಲ.
ಪ್ರಣಯಕ್ರೀಡೆಗೆ ಪಕ್ವವೆನಿಸುವ ಸಮಯವನ್ನು ಹಗಲು ಮತ್ತು ರಾತ್ರಿಯ ನಾಲ್ಕು ಪ್ರತ್ಯೇಕ ಪ್ರಹರಗಳನಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಪ್ರಹರ ಜೊತೆಗೆ ಅದು ಯಾವ ಜಾತಿಯ ಸ್ತ್ರೀಗೆ ಸೂಕ್ತ ಎಂಬುದನ್ನೂ ತೋರಿಸಲಾಗಿದೆ.
ದಿನದ ಒಂದನೆಯ ಪ್ರಹರ: 6 a.m. - 9 a.m. ಪದ್ಮಿನಿ
ದಿನದ ಎರಡನೆಯ ಪ್ರಹರ: 9 a.m.-12 p.m. ಪದ್ಮಿನಿ
ದಿನದ ಮೂರನೆಯ ಪ್ರಹರ: 12 p.m. - 3 p.m. ಪದ್ಮಿನಿ ಮತ್ತು ಹಸ್ತಿನಿ
ದಿನದ ನಾಲ್ಕನೆಯ ಪ್ರಹರ: 3 p.m. - 6 p.m. ಪದ್ಮಿನಿ ಮತ್ತು ಹಸ್ತಿನಿ
ರಾತ್ರಿಯ ಒಂದನೆಯ ಪ್ರಹರ: 6 p.m - 9 p.m. ಚಿತ್ತಿನಿ ಮತ್ತು ಹಸ್ತಿನಿ
ರಾತ್ರಿಯ ಎರಡನೆಯ ಪ್ರಹರ: 9 p.m. - 12 a.m. ಹಸ್ತಿನಿ
ರಾತ್ರಿಯ ಮೂರನೆಯ ಪ್ರಹರ: 12 a.m. - 3 a.m. ಶಂಖಿನಿ ಮತ್ತು ಹಸ್ತಿನಿ
ರಾತ್ರಿಯ ನಾಲ್ಕನೆಯ ಪ್ರಹರ: 3 a.m. - 6 a.m. ಪದ್ಮಿನಿ ಮತ್ತು ಹಸ್ತಿನಿ
ಇಪ್ಪತ್ತುನಾಲ್ಕು ಘಂಟೆಗಳ ಒಂದು ಆವರ್ತನದಲ್ಲಿ ಮೂರು ಘಂಟೆಗಳ ಅವಧಿಯ ಒಟ್ಟು ಎಂಟು ಪ್ರಹರಗಳಿವೆ. ಬೆಳಗಿನ ಜಾವದ ಮೂರು ಘಂಟೆಯಿಂದ ಸಂಜೆಯ ಆರು ಘಂಟೆಯವರೆಗೆ ಹಗಲಾದರೆ, ಸಂಜೆಯ ಆರು ಘಂಟೆಯಿಂದ ಬೆಳಗಿನ ಜಾವದ ಮೂರು ಘಂಟೆಯ ಸಮಯ ರಾತ್ರಿಯಾಗಿದೆ.
ಸಂಭೋಗವೆಂದರೆ ರಾತ್ರಿಯ ಕತ್ತಲಲ್ಲಿ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಬರೀ ಕ್ರೀಡೆಯಲ್ಲ ಎಂದು ಅದಕ್ಕೇ ಹೇಳುವುದು. ಸ್ತ್ರೀಯ ದೇಹ ರಚನೆ, ಮನಸ್ಸು ಮತ್ತು ಸ್ವಭಾವ, ದಿನದ ಮತ್ತು ರಾತ್ರಿಯ ಸಮಯ, ಇವುಗಳನ್ನು ಅರ್ಥ ಮಾಡಿಕೊಳ್ಳದೇ ಪ್ರಣಯದ ರಥವನ್ನೇರುವ ಪುರುಷ ಹೆಚ್ಚು ಯಶಸ್ಸು ಕಾಣಲಾರ. ಏನಂತೀರಿ?
Friday, July 3, 2009
Subscribe to:
Posts (Atom)